ಸಾಂಪ್ರದಾಯಿಕ ಪಾತ್ರಗಳಲ್ಲಿ ಮಿಂಚುವ ಮಲಯಾಳಂ ಮತ್ತು ತಮಿಳು ಚಿತ್ರರಂಗದ ಖ್ಯಾತ ನಟಿ ರಜಿಶಾ ವಿಜಯನ್ ಅವರು ಹಾಟ್ ಅವತಾರವೆತ್ತಿದ್ದು, ಅವರ ಮಾದಕ ಫೋಟೋಗಳು ಜಾಲತಾಣದಲ್ಲಿ ಸಿಕ್ಕಾಪಡ್ಡ ವೈರಲ್ ಆಗುತ್ತಿವೆ.
ಕಿರುತೆರೆಯಿಂದ ಬೆಳ್ಳಿತೆರೆಗೆ
ರಜಿಶಾ ಅವರು ತಮ್ಮ ವೃತ್ತಿಜೀವನವನ್ನು ಮಲಯಾಳಂ ಕಿರುತೆರೆಯಲ್ಲಿ ನಿರೂಪಕಿಯಾಗಿ ಆರಂಭಿಸಿದರು. ಮಜವಿಲ್ ಮನೋರಮಾ ವಾಹಿನಿಯ 'ಉಗ್ರಂ ಉಜ್ಜಲಂ' ರಿಯಾಲಿಟಿ ಶೋ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಅದ್ದೂರಿ ಪದಾರ್ಪಣೆ
2016ರಲ್ಲಿ ಬಿಡುಗಡೆಯಾದ 'ಅನುರಾಗ ಕರಿಕಿನ್ ವೆಳ್ಳಂ' ಎಂಬ ಮಲಯಾಳಂ ಸಿನಿಮಾದ ಮೂಲಕ ಅವರು ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ತಮ್ಮ ಮೊದಲ ಚಿತ್ರದಲ್ಲೇ ಅದ್ಭುತ ಅಭಿನಯ ನೀಡಿ ಎಲ್ಲರ ಗಮನ ಸೆಳೆದರು.
ರಾಜ್ಯ ಪ್ರಶಸ್ತಿ ಗೌರವ
ಮೊದಲ ಸಿನಿಮಾದಲ್ಲೇ ಇವರ ಅತ್ಯುತ್ತಮ ನಟನೆಯನ್ನು ಗುರುತಿಸಿ ಕೇರಳ ಸರ್ಕಾರವು ಇವರಿಗೆ ಪ್ರತಿಷ್ಠಿತ 'ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು.
ತಮಿಳು ಚಿತ್ರರಂಗಕ್ಕೆ ಎಂಟ್ರಿ
ತಮಿಳು ಚಿತ್ರರಂಗದಲ್ಲೂ ರಜಿಶಾ ಗುರುತಿಸಿಕೊಂಡಿದ್ದಾರೆ. ಧನುಷ್ ನಟನೆಯ ಸೂಪರ್ ಹಿಟ್ 'ಕರ್ಣನ್' ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. ನಂತರ ಸೂರ್ಯ ನಟನೆಯ ಜೈ ಭೀಮ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
ನೆನಪಿನಲ್ಲಿ ಉಳಿಯುವ ಪಾತ್ರಗಳು
ಇವರ ವೃತ್ತಿಜೀವನದಲ್ಲಿ 'ಜೂನ್', 'ಲವ್', 'ಖೋ ಖೋ' ಮತ್ತು ಕಾರ್ತಿ ಜೊತೆ ನಟಿಸಿದ 'ಸರ್ದಾರ್' ಸಿನಿಮಾಗಳು ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟವು. ವಿಶೇಷವಾಗಿ 'ಜೂನ್' ಚಿತ್ರದಲ್ಲಿನ ಇವರ ಪಾತ್ರ ಪ್ರೇಕ್ಷಕರ ಮನಗೆದ್ದಿತ್ತು.
ಶಿಕ್ಷಣ ಹಿನ್ನೆಲೆ
ನಟನೆಯಷ್ಟೇ ಅಲ್ಲದೆ ಶಿಕ್ಷಣದಲ್ಲೂ ಆಸಕ್ತಿ ಹೊಂದಿರುವ ರಜಿಶಾ, ದೆಹಲಿಯ ಅಮಿಟಿ ವಿಶ್ವವಿದ್ಯಾಲಯದಿಂದ 'ಮಾಸ್ ಕಮ್ಯುನಿಕೇಶನ್ ಮತ್ತು ಜರ್ನಲಿಸಂ' ಪದವಿ ಪಡೆದಿದ್ದಾರೆ.
ಸ್ವಾಭಾವಿಕ ನಟನೆ
ಗ್ಲಾಮರ್ ಪಾತ್ರಗಳಿಗಿಂತ ಹೆಚ್ಚಾಗಿ ಕಥೆಗೆ ಪ್ರಾಮುಖ್ಯತೆ ಇರುವ, ನಟನಾ ಸಾಮರ್ಥ್ಯಕ್ಕೆ ಸವಾಲೊಡ್ಡುವ ಮತ್ತು ನೈಜತೆಗೆ ಹತ್ತಿರವಿರುವ ಪಾತ್ರಗಳನ್ನು ಆಯ್ದುಕೊಳ್ಳುವ ಮೂಲಕ ರಜಿಶಾ ದಕ್ಷಿಣ ಭಾರತದ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ
ರೆಜಿಶಾ ಅವರು ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಸಿನಿಮಾ ವಿಚಾರಗಳನ್ನು ಹಾಗೂ ಫೋಟೋಶೂಟ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಹಾಟ್ ಅವತಾರ
ಸಿನಿಮಾಗಳಲ್ಲಿ ಸಾಂಪ್ರದಾಯಿಕ ಪಾತ್ರಗಳಲ್ಲೇ ಮಿಂಚುವ ರೆಜಿಶಾ ಅವರು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ತುಂಬಾ ವಿರಳ. ಇದೀಗ ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಹಾಟ್ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಪಡ್ಡೆ ಹುಡುಗರು ಫಿದಾ
ವೈರಲ್ ಫೋಟೋದಲ್ಲಿ ನಟಿ ರಜಿಶಾ ವಿಜಯನ್, ಎದೆಸೀಳು ಕಾಣುವಂತಹ ಮೆರೂನ್ ಬಣ್ಣದ ಲಾಂಗ್ ಗೌನ್ ಧರಿಸಿ, ಮಾದಕ ಪೋಸ್ಗಳನ್ನು ನೀಡಿದ್ದಾರೆ. ಅವರ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.