ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ ಆ್ಯಂಡ್ರಿಯಾ ಜೆರೆಮಿಯಾ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಟಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಬಹುಮುಖ ಪ್ರತಿಭೆ
ಆ್ಯಂಡ್ರಿಯಾ ಅವರು ಕೇವಲ ನಟಿ ಮಾತ್ರವಲ್ಲದೆ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಗೀತರಚನೆಗಾರ್ತಿ, ಸಂಗೀತ ಸಂಯೋಜಕಿ, ರಂಗಭೂಮಿ ಕಲಾವಿದೆ ಹಾಗೂ ಡಬ್ಬಿಂಗ್ ಕಲಾವಿದೆಯಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಹಿನ್ನೆಲೆ ಗಾಯಕಿಯಾಗಿ ಆರಂಭ
ಇವರು ಚಿತ್ರರಂಗಕ್ಕೆ ಮೊದಲು ಕಾಲಿಟ್ಟಿದ್ದು ಗಾಯಕಿಯಾಗಿ. ಹ್ಯಾರಿಸ್ ಜಯರಾಜ್, ಯುವನ್ ಶಂಕರ್ ರಾಜಾ ಮತ್ತು ಎ.ಆರ್. ರೆಹಮಾನ್ ಅವರಂತಹ ಪ್ರಮುಖ ಸಂಗೀತ ನಿರ್ದೇಶಕರ ಅಡಿಯಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.
ವಿಶಿಷ್ಟ ಪಾತ್ರಗಳ ಆಯ್ಕೆ
ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದ ಆ್ಯಂಡ್ರಿಯಾ, ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ 'ಆಯಿರತ್ತಿಲ್ ಒರುವನ್', 'ವಡಾ ಚೆನ್ನೈ', 'ತುಪ್ಪರಿವಾಲನ್' ಮತ್ತು 'ತರಮಣಿ'ಯಂತಹ ವಿಮರ್ಶಾತ್ಮಕವಾಗಿ ಪ್ರಶಂಸಿಸಲ್ಪಟ್ಟ ಚಿತ್ರಗಳಲ್ಲಿ ನಟಿಸಿದ್ದಾರೆ.
ಡಬ್ಬಿಂಗ್ ಕಲಾವಿದೆ
ಇವರು ಕೇವಲ ನಟನೆ-ಹಾಡುವುದಷ್ಟೇ ಅಲ್ಲದೆ, ತಮಿಳು ಚಿತ್ರರಂಗದಲ್ಲಿ ಇಲಿಯಾನಾ ಡಿಕ್ರೂಜ್ (ಕೇಡಿ ಚಿತ್ರ), ತಪ್ಸಿ ಪನ್ನು (ಆಡುಕಳಂ ಚಿತ್ರ) ಮತ್ತು ಕಮಲ್ ಹಾಸನ್ ಅವರ 'ವಿಶ್ವರೂಪಂ' ಚಿತ್ರದಲ್ಲಿ ನಟಿ ಪೂಜಾ ಕುಮಾರ್ ಅವರಿಗೆ ಧ್ವನಿ ನೀಡಿದ್ದಾರೆ.
ಸ್ವತಂತ್ರ ಆಲ್ಬಂಗಳು ಮತ್ತು ಲೈವ್ ಶೋಗಳು
ಚಲನಚಿತ್ರ ಸಂಗೀತದ ಹೊರತಾಗಿ, ಆ್ಯಂಡ್ರಿಯಾ ತಮ್ಮದೇ ಆದ ಸ್ವತಂತ್ರ ಸಂಗೀತ ಆಲ್ಬಂಗಳನ್ನು ಸಂಯೋಜಿಸುತ್ತಾರೆ ಮತ್ತು ದೇಶ-ವಿದೇಶಗಳಲ್ಲಿ ತಮ್ಮ ಲೈವ್ ಕಾನ್ಸರ್ಟ್‌ಗಳ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸುತ್ತಾರೆ.
ಜಾಲತಾಣದಲ್ಲಿ ಆ್ಯಕ್ಟೀವ್
ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಆ್ಯಂಡ್ರಿಯಾ ಆಗಾಗ ಬೋಲ್ಡ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಬಿಳಿ ಲೇಸ್‌ನಿಂದ ಕೂಡಿದ ಸ್ಪ್ಯಾಗೆಟ್ಟಿ ಸ್ಟ್ರ್ಯಾಪ್ ಕ್ರಾಪ್ ಟಾಪ್ ಹಾಗೂ ನೀಲಿ ಡೆನಿಮ್ ಶಾರ್ಟ್ಸ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಾಮೆಂಟ್ಗಳ ಸುರಿಮಳೆ
ಆ್ಯಂಡ್ರಿಯಾ ಅವರ ಫೋಟೋಗೆ 71 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಅವರ ಬೋಲ್ಡ್ ಅವತಾರಕ್ಕೆ ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಗೈದಿದ್ದು, ಆ್ಯಂಡ್ರಿಯಾ ಮೈಮಾಟವನ್ನು ವರ್ಣಿಸುತ್ತಿದ್ದಾರೆ.