ಕ್ರಿಕೆಟಿಗ ಆದಿತ್ಯ ಅಶೋಕ್ ಬಗ್ಗೆ ಇಲ್ಲಿವೆ ಇಂಟ್ರೆಸ್ಟಿಂಗ್ ಸಂಗತಿಗಳು​

ಮೋಹನ್​ ಶೆಟ್ಟಿ

ಕ್ರಿಕೆಟಿಗ ಆದಿತ್ಯ ಅಶೋಕ್ ಬಗ್ಗೆ ಇಲ್ಲಿವೆ ಇಂಟ್ರೆಸ್ಟಿಂಗ್ ಸಂಗತಿಗಳು​

ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ ಮೊದಲ ಏಕದಿನ ಸರಣಿ ಪಂದ್ಯದಲ್ಲಿ ಕಿವೀಸ್​ ತಂಡದಲ್ಲಿರುವ ಯುವ ಲೆಗ್-ಸ್ಪಿನ್ನರ್ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಈತನಿಗೂ ಭಾರತಕ್ಕೂ ಇದೇ ಸಂಬಂಧ!

ಅಷ್ಟಕ್ಕೂ ಯಾರು ಈತ? ಈತನಿಗೂ ಭಾರತಕ್ಕೂ ಏನು ಸಂಬಂಧ? ಎಂಬ ಒಂದಷ್ಟು ಪ್ರಶ್ನೆಗಳು ಕ್ರಿಕೆಟ್​ ಪ್ರಿಯರಲ್ಲಿ ಕಾಡುತ್ತಿದೆ. ಅದಕ್ಕೆ ಉತ್ತರ ಹೀಗಿದೆ ನೋಡಿ.

ತಮಿಳುನಾಡಿನ ವೆಲ್ಲೂರಿನಲ್ಲಿ ಜನನ

ಭಾರತೀಯ ಮೂಲದ ಆದಿತ್ಯ, ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಆದಿತ್ಯ ಅಶೋಕ್ ನಾಲ್ಕನೇ ವಯಸ್ಸಿನವರೆಗೆ ಭಾರತದಲ್ಲಿಯೇ ವಾಸವಿದ್ದರು.

ನ್ಯೂಜಿಲೆಂಡ್​ನ ಆಕ್ಲೆಂಡ್‌ಗೆ ಪಯಣ

ತದನಂತರ, ಅವರ ಪೋಷಕರು ಉದ್ಯೋಗದ ನಿಮಿತ್ತ ನ್ಯೂಜಿಲೆಂಡ್​ನ ಆಕ್ಲೆಂಡ್‌ಗೆ ತೆರಳಿದರು. ಅಲ್ಲಿಂದ ನ್ಯೂಜಿಲೆಂಡ್​ನಲ್ಲೇ ಕ್ರಿಕೆಟ್​ ಪಯಣ ಆರಂಭಿಸಿದ ಆದಿತ್ಯ, ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಹೆಸರನ್ನು ಸ್ಥಾಪಿಸಿಕೊಂಡರು.

2020ರ ಅಂಡರ್ 19 ವಿಶ್ವಕಪ್‌ನಲ್ಲಿ....

2020ರ ಅಂಡರ್ 19 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ಅವರು, ಡಿಸೆಂಬರ್ 2021ರಲ್ಲಿ ಆಕ್ಲೆಂಡ್ ಪರ ತಮ್ಮ ಮೊದಲ ವೃತ್ತಿಪರ ಟಿ20 ಪಂದ್ಯವನ್ನಾಡಿದರು.

ವರ್ಷದ ಯುವ ಕ್ರಿಕೆಟಿಗ

ಮೂರು ಸ್ವರೂಪಗಳಲ್ಲಿಯೂ ನಿಯಮಿತ ಆಟಗಾರರಾಗಿರುವ ಆದಿತ್ಯರನ್ನು, 2022-23ರ ವರ್ಷದಲ್ಲಿ ನ್ಯೂಜಿಲೆಂಡ್‌ನ ವರ್ಷದ ಯುವ ಕ್ರಿಕೆಟಿಗ ಎಂದು ಹೆಸರಿಸಲಾಯಿತು.

ಆದಿತ್ಯಗೂ ರಜನಿ ಚಿತ್ರಕ್ಕೂ ಏನು ಸಂಬಂಧ?

ಆದಿತ್ಯ ಅಶೋಕ್ ತಮಿಳಿನ 'ತಲೈವಾ' ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ತಮ್ಮ ತೋಳಿನ ಮೇಲೆ "ಎನ್ ವಾಲಿ ಥಾನಿ ವಾಲಿ" (ನನ್ನ ಹಾದಿಯೇ ವಿಶಿಷ್ಟ) ಎಂಬ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

'ಪಡಯಪ್ಪ' ಚಿತ್ರದ ಫೇಮಸ್​ ಡೈಲಾಗ್​

ಇದು ಯಾವ ಸಿನಿಮಾದ್ದು ಗೊತ್ತಾ? ಅಷ್ಟಕ್ಕೂ, ಇದು ರಜಿನಿ ಅಭಿನಯದ ಸೂಪರ್​ಹಿಟ್​ 'ಪಡಯಪ್ಪ' ಚಿತ್ರದ ಫೇಮಸ್​ ಡೈಲಾಗ್​ ಆಗಿದೆ ಎಂಬುದು ನೀವು ಗಮನಿಸಬೇಕಾದ ವಿಷಯ.

ಅಜ್ಜನೊಂದಿಗೆ ಕಂಡ ಕೊನೆಯ ಸಿನಿಮಾ

ಈ ಚಿತ್ರವು ಅಶೋಕ್ ಅವರ ಜೀವನದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಕಾರಣ, ತಮ್ಮ ಅಜ್ಜನೊಂದಿಗೆ ವೀಕ್ಷಿಸಿದ ಕೊನೆಯ ಸಿನಿಮಾ ರಜನಿ ಅವರ ಚಿತ್ರವಂತೆ.