ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಕೈರನ್ ಪೊಲ್ಲಾರ್ಡ್ ಮತ್ತು ಅವರ ಪತ್ನಿ ಜೆನ್ನಾ ಪೊಲ್ಲಾರ್ಡ್ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮೊದಲ ಭೇಟಿ
ಕೈರನ್ ಪೊಲ್ಲಾರ್ಡ್ ಮತ್ತು ಜೆನ್ನಾ ಅವರು ಮೊದಲ ಬಾರಿಗೆ ಭೇಟಿಯಾಗಿದ್ದು 2005ರಲ್ಲಿ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯವೊಂದರ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತು.
7 ವರ್ಷಗಳ ಸುದೀರ್ಘ ಡೇಟಿಂಗ್
ಮೊದಲ ಭೇಟಿಯ ನಂತರ ಈ ಜೋಡಿಯು ಸುಮಾರು 7 ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಾ ಸುದೀರ್ಘವಾಗಿ ಡೇಟಿಂಗ್ ನಡೆಸಿದರು.
ದಾಂಪತ್ಯ ಜೀವನಕ್ಕೆ ಹೆಜ್ಜೆ
ತಮ್ಮ 7 ವರ್ಷಗಳ ಪ್ರೀತಿಯನ್ನು ಅಧಿಕೃತಗೊಳಿಸಿದ ಈ ಜೋಡಿ, ಆಗಸ್ಟ್ 25, 2012 ರಂದು ಟ್ರಿನಿಡಾಡ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ವಿವಾಹವಾದರು. ಸದ್ಯ ಇವರ ದಾಂಪತ್ಯ ಜೀವನಕ್ಕೆ 13 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿದೆ.
ಮದುವೆಗೆ ಮುನ್ನವೇ ಹೆತ್ತವರಾದರು
ಈ ಜೋಡಿಯ ಪ್ರೇಮಕಥೆಯಲ್ಲಿ ಒಂದು ವಿಶೇಷ ಸಂಗತಿಯೆಂದರೆ, ಇವರಿಬ್ಬರು ಅಧಿಕೃತವಾಗಿ ಮದುವೆಯಾಗುವ ಮುನ್ನವೇ ಅಂದರೆ ಡೇಟಿಂಗ್ ಅವಧಿಯಲ್ಲೇ ಮೊದಲ ಮಗುವಿಗೆ ಪೋಷಕರಾಗಿದ್ದರು.
ಮಕ್ಕಳು
ಪ್ರಸ್ತುತ ಈ ದಂಪತಿಗೆ ಕೈಡೆನ್ ಪೊಲ್ಲಾರ್ಡ್ ಎಂಬ ಮಗ ಹಾಗೂ ಜನಿಯಾ ಪೊಲ್ಲಾರ್ಡ್ ಎಂಬ ಮಗಳು ಸೇರಿದಂತೆ ಮೂವರು ಮಕ್ಕಳಿದ್ದಾರೆ. ಇಡೀ ಕುಟುಂಬವು ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತದೆ.
ಉದ್ಯಮಿ ಜೆನ್ನಾ
ಜೆನ್ನಾ ಪೊಲ್ಲಾರ್ಡ್ ಅವರು ಕೇವಲ ಸ್ಟಾರ್ ಕ್ರಿಕೆಟರ್ ಪತ್ನಿ ಮಾತ್ರವಲ್ಲದೆ, ಸ್ವತಃ ಒಬ್ಬ ಯಶಸ್ವಿ ಉದ್ಯಮಿಯೂ ಹೌದು. ಅವರು ತಮ್ಮ ತಾಯ್ನಾಡಾದ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಸ್ಪೋರ್ಟ್ಸ್ ಅಕ್ಸೆಸರಿಗಳ ದೊಡ್ಡ ಬ್ರ್ಯಾಂಡ್ ಆದ 'KG's Sports Salon' ಅನ್ನು ನಡೆಸುತ್ತಿದ್ದಾರೆ.
ಐಪಿಎಲ್ ಅಭಿಮಾನಿ
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಪೊಲ್ಲಾರ್ಡ್ ಅವರನ್ನು ಪ್ರೋತ್ಸಾಹಿಸಲು ಜೆನ್ನಾ ಅವರು ಸದಾ ಸ್ಟೇಡಿಯಂನಲ್ಲಿ ಇರುತ್ತಿದ್ದರು. ಭಾರತ ಹಾಗೂ ಮುಂಬೈ ಫ್ರಾಂಚೈಸಿಯೊಂದಿಗೆ ಇವರಿಬ್ಬರಿಗೂ ಭಾವನಾತ್ಮಕ ಒಡನಾಟವಿದೆ.
ವೈರಲ್ ಫೋಟೋಗಳು
ಇತ್ತೀಚೆಗೆ ಈ ದಂಪತಿ ಒಟ್ಟಿಗೆ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದು, ಕೆಂಪು ಮತ್ತು ಕಪ್ಪು ಉಡುಪಿನಲ್ಲಿ ಮಿಂಚಿರುವ ರೋಮ್ಯಾಂಟಿಕ್ ಫೋಟೋಗಳನ್ನು ಜೆನ್ನಾ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ಯೂಟ್ ಫೋಟೋಗಳು ವೈರಲ್ ಆಗುತ್ತಿವೆ.