'ದಿ ಪ್ಯಾರಡೈಸ್'ಗೆ ಕೀರ್ತಿ ಸುರೇಶ್​ ಸ್ಪೆಷಲ್​ ಎಂಟ್ರಿ

ಮಮತಾ

'ದಿ ಪ್ಯಾರಡೈಸ್'ಗೆ ಕೀರ್ತಿ ಸುರೇಶ್​ ಸ್ಪೆಷಲ್​ ಎಂಟ್ರಿ

ಮಹಾನಟಿ ಸಿನಿಮಾದಲ್ಲಿ ನಟಿಸುವ ಮೂಲಕ ಹೆಚ್ಚು ಫೇಮ್ ಪಡೆದ ನಟಿ ಕೀರ್ತಿ ಸುರೇಶ್​, ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೊಟೋಗಳು ಸದ್ಯ ವೈರಲ್​ ಆಗಿದೆ. ಟ್ರೆಡಿಷನಲ್​ ಲುಕ್​ನಲ್ಲಿ ಕೀರ್ತಿ ಸುರೇಶ್​ ಅವರು ಗಮನ ಸೆಳೆದಿದ್ದಾರೆ.

ಟ್ರೆಡಿಷನಲ್ ಲುಕ್ ವೈರಲ್

ನಟಿ ಕೀರ್ತಿ ಸುರೇಶ್ ಅವರು ನಾನಿ ನಟನೆಯ 'ದಿ ಪ್ಯಾರಡೈಸ್' ಚಿತ್ರದ "ಯೆಶನಾಗುಲ" ಸ್ಪೆಷಲ್ ಸಾಂಗ್‌ನ ಭರ್ಜರಿ ಯಶಸ್ಸಿನ ಖುಷಿಯಲ್ಲಿದ್ದಾರೆ. ಯೂಟ್ಯೂಬ್ ಮತ್ತು ಸ್ಪಾಟಿಫೈ ನಲ್ಲಿ ಈ ಹಾಡು ಬಾರಿ ವೈರಲ್ ಆಗಿ ಹೊರಹೊಮ್ಮಿದೆ.

ಯೆಶನಾಗುಲ ಹಿಟ್

ರಿಯಲ್​ ಸ್ಟಾರ್ ನಾನಿ ನಟನೆಯ ದಿ ಪ್ಯಾರಡೇಸ್ ಸಿನಿಮಾದ ಯೆಶನಾಗುಲ ಹಾಡಿಗೆ ಕೀರ್ತಿ ಸುರೇಶ್ ಅವರು ಸ್ಟೆಪ್​ ಹಾಕಿದ್ದು, ಯೂಟ್ಯೂಬ್ ಮತ್ತು ಸ್ಪಾಟಿಫೈ ನಲ್ಲಿ ನಂಬರ್ ಒನ್ ಟ್ರೆಂಡಿಂಗ್‌ನಲ್ಲಿರುವ ಈ ಹಾಡು ಸುಮಾರು 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

Dorothy ಮುಂದಿನ ಸಿನಿಮಾ

ಕೀರ್ತಿ ಸುರೇಶ್ ಅವರ ಮುಂದಿನ ಸಿನಿಮಾ Dorothyಯಾಗಿದ್ದು, ಈ ಚಿತ್ರಕ್ಕಾಗಿ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಹೇಗಿದೆ ಕೀರ್ತಿ ಡ್ರೆಸ್

ಮರೂನ್ ಮತ್ತು ಗೋಲ್ಡನ್ ಬಣ್ಣದ ಕಾಂಚೀಪುರಂ ಸಿಲ್ಕ್ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಜೊತೆಗೆ ಟ್ರೆಡಿಷನಲ್ ಕಾಶು ಮಾಲಾ ನೆಕ್ಲೇಸ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸಂಪ್ರದಾಯ ನಿರೂಪಿಸುವ ಡ್ರೆಸ್ಸಿಂಗ್​ ಸೆನ್ಸ್

ಲೆಹೆಂಗಾ ಶೈಲಿ, ಜಾಕೆಟ್ ಮಾದರಿಯ ಬ್ಲೌಸ್ ಮತ್ತು ದುಪಟ್ಟಾ ಜೊತೆಗೆ ತಮ್ಮ ತಮಿಳು ಮತ್ತು ಕೇರಳದ ಮೂಲದ ಸಂಪ್ರದಾಯವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಿದ್ದಾರೆ.

ಸುಂದರಿ ಕೀರ್ತಿ

ಲೆಹೆಂಗಾ ಶೈಲಿ, ಜಾಕೆಟ್ ಮಾದರಿಯ ಬಟ್ಟೆಗೆ ಮ್ಯಾಚಿಂಗ್ ಜುಮ್ಕಾ ಹಾಗೂ ಸ್ಲೀಕ್ ಬನ್ ಹೇರ್‌ಸ್ಟೈಲ್ ಧರಿಸಿ, ಕೇವಲ ಸಾಂಪ್ರದಾಯಿಕ ಬಟ್ಟೆ ಹಾಗೂ ಆಭರಣಗಳ ಅಂದ ಹೆಚ್ಚಿಸುವಂತೆ ಕಾಣಿಸಿಕೊಂಡಿದ್ದಾರೆ.