ಕರಾವಳಿ ಹುಡ್ಗಿ ಕೃತಿ ಶೆಟ್ಟಿ

ಮಮತಾ

ಕರಾವಳಿ ಹುಡ್ಗಿ ಕೃತಿ ಶೆಟ್ಟಿ

ಕರಾವಳಿ ಹುಡುಗಿಯಾದ ಕೃತಿ ಶೆಟ್ಟಿಯವರು ಇನ್​ಸ್ಟಾದಲ್ಲಿ ಹೊಸ ಫೋಟೋಶೂಟ್​ ಹಂಚಿಕೊಂಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ಅವರ ಸ್ಟನ್ನಿಂಗ್​ ಲುಕ್​ಗೆ ಹಲವರು ಬ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ.

ಮೂವ್-ಆನ್ ಆಗುವ ಮನಸ್ಥಿತಿ ಇಲ್ಲ

ನಾನು ಜೆನ್​ ಜಿ ಜನರೇಷನ್​ನಲ್ಲಿ ಹುಟ್ಟಿದ್ದರೂ ಸಹ ಇಂದಿನ ಕಾಲದವರ ಹಾಗೆ ಬೇಗನೆ ಮೂವ್-ಆನ್ ಆಗುವ ಮನಸ್ಥಿತಿಯೊಂದಿಗೆ ಕನೆಕ್ಟ್ ಆಗಲು ಕಷ್ಟವಾಗುತ್ತದೆ ಎಂದು ಕೃತಿ ಮುಕ್ತವಾಗಿ ಮಾತನಾಡಿದ್ದರು.

ನಿರ್ದೇಶಕಿಯಾಗಬೇಕು....

ನಟನೆ ಮಾಡೋಕೆ ಮಾತ್ರವಲ್ಲ. ಮುಂದಿನ ದಿನದಲ್ಲಿ ಸಿನಿಮಾ ಡೈರೆಕ್ಟ್​ ಮಾಡಬೇಕು ಎನ್ನುವ ಆಸೆ ಹೊಂದಿದ್ದೇನೆ ಎನ್ನುವ ಅಭಿಲಾಷೆಯನ್ನು ಕೃತಿ ಶೆಟ್ಟಿ ವ್ಯಕ್ತಪಡಿಸಿದ್ದರು.

ಫೋಬಿ ವಾಲರ್-ಬ್ರಿಡ್ಜ್‌ರಂತೆ ಕತೆ ಬರೆಯುತ್ತೇನೆ

ಕಲಿತಷ್ಟು ಹೊಸತು ತೆರೆದುಕೊಳ್ಳುತ್ತಿದೆ. ನಾನಿನ್ನೂ ಸಹ ನಟನೆ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ. ನಟನೆ ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದೇನೆ. ಫೋಬಿ ವಾಲರ್-ಬ್ರಿಡ್ಜ್‌ ಅವರಂತೆ ತಾವೇ ಸ್ವತಃ ಕಥೆ ಬರೆದು ನಿರ್ದೇಶನ ಮಾಡುವುದಾಗಿ ಹೇಳಿದ್ದರು.

ಪ್ರೀತಿ ಮೇಲೆ ಅಪಾರ ನಂಬಿಕೆ

ನಾನು ಸದ್ಯ ಸಿಂಗಲ್​ ಆಗಿದ್ದೇನೆ. ಆದರೆ, ಪ್ರೀತಿ ಎಂದು ಬಂದಾಗ ಅಥವಾ ಯಾರನ್ನಾದರೂ ಪ್ರೀತಿ ಮಾಡಿದಾಗ ಪ್ರಾಮಾಣಿಕರಾಗಿರಬೇಕು ಎಂದು ಕೃತಿ ಶೆಟ್ಟಿಹೇಳಿದ್ದಾರೆ.

ಕೃತಿ ಶೆಟ್ಟಿ ನಟಿಸಿದ ಸಿನಿಮಾವಿದು

ಟಾಲಿವುಡ್​ನ ಉಪ್ಪೆನ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಕೃತಿ ಶೆಟ್ಟಿ ಶೆಟ್ಟಿ, ಶ್ಯಾಮ್​ ಸಿಂಗ್​ ರಾಯ್​​, LIK​​, ಮನಮೇ, ವಾ ವಾಥಿಯಾರ್​​, ದಿ ವಾರಿಯರ್​ ಸೇರಿದಂತೆ ನಾನಾ ಸಿನಿಮಾದಲ್ಲಿ ನಟಿಸಿದ್ದಾರೆ.