ವಿಜಯವಾಣಿ ಸುದ್ದಿ ಜಾಲ
ನೆಟ್ಫ್ಲಿಕ್ಸ್ ಕ್ರೈಂ ಥ್ರಿಲ್ಲರ್ ವೆಬ್ ಸರಣಿ ಅಕ್ಕ ಭಾರಿ ಸಂಚಲನವನ್ನು ಸೃಷ್ಟಿಸಿದೆ. ಹಲವರು ಕೀರ್ತಿ ಸುರೇಶ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಧರ್ಮರಾಜ್ ಶೆಟ್ಟಿ ಈ ಸರಣಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ಕೀರ್ತಿ ಸುರೇಶ್ ಅವರು ಬಹುತೇಕ ಎಲ್ಲ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಬ್ಲಿ ಗರ್ಲ್ ಆಗಿ ಹೆಚ್ಚು ಕಾಣಿಸಿಕೊಂಡಿದ್ದ ಅವರು ಸದ್ಯ ಖಡಕ್ ಲುಕ್ನಲ್ಲಿ ಅಕ್ಕ ವೆಬ್ ಸರಣಿಯಲ್ಲಿ ಮಿಂಚಿದ್ದಾರೆ.
ಅಕ್ಕ ಪ್ರಚಾರದ ಭಾಗವಾಗಿ ಕೀರ್ತಿ ಓಡಾಡುತ್ತಿದ್ದಾರೆ. ಸದ್ಯ ಇದರ ಭಾಗವಾಗಿ ಅವರು ಬ್ಲಾಕ್ ಲಾಂಗ್ ಸ್ಕರ್ಟ್ ತೊಟ್ಟು, ಅದಕ್ಕೆ ಗೋಲ್ಡನ್ ಬ್ಲೇಜರ್ ಹಾಗೂ ಗಾಗಲ್ಸ್ ತೊಟ್ಟು ಪೋಸ್ ಕೊಟ್ಟಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ಆಕ್ಷನ್ ಕಟ್ ಹೇಳಿರುವ ಡೊರೋಥಿ ಸಿನಿಮಾವು ಸಾಕಷ್ಟು ಹೆಗ್ಗಳಿಕೆಗೆ ಕಾರಣವಾಗಿದೆ. ಈ ಮೊದಲು ಸಿನಿಮಾ ಬಾಯ್ಕಾಟ್ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ಈ ತಿಂಗಳು ಕೀರ್ತಿ ಸುರೇಶ್ ಫ್ಯಾನ್ಸ್ಗೆ ಸಿಹಿ ಸುದ್ದಿಯ ದಿನಗಳಾಗಿ ಪರಿಣಮಿಸಲಿದೆ. ಅಕ್ಕ ನಂತರ ಅವರನ್ನು ಸತ್ಯವಾನ್ ಸಾವಿತ್ರಿಯಾಗಿ ಕಾಣಬಹುದು. ಇದೇ ನ.20ರಂದು ಸಿನಿಮಾ ಬಿಡುಗಡೆಯಾಗಲಿದೆ.
ಕನ್ನಿವೇದಿ, ರೌಡಿ ಜನಾರ್ಧನ, ಕನ್ನಿವೇದಿ ಕೀರ್ತಿ ಸುರೇಶ್ ಅವರ ಮುಂದಿನ ಪ್ರಾಜೆಕ್ಟ್ಗಳಾಗಿದೆ. ಕೆಲವರು 2027ರ ಹೊಸ ವರ್ಷದಂದು ರಿಲೀಸ್ ಆಗಲಿದೆ.