ಉತ್ತಮ ನಿದ್ರೆಗಾಗಿ ಬೆಡ್​ ರೂಂನಲ್ಲಿರಲಿ ಈ ಗಿಡಗಳು

ಮಮತಾ

ಉತ್ತಮ ನಿದ್ರೆಗಾಗಿ ಬೆಡ್​ ರೂಂನಲ್ಲಿರಲಿ ಈ ಗಿಡಗಳು

ಈ ಆಧುನಿಕ ಜಗತ್ತಿನಲ್ಲಿ ಕೆಲಸ ಹತ್ತು ಗಂಟೆಗೆ ಮುಗಿಸಿದರೆ ತಿನ್ನುವುದು 11 ಗಂಟೆಯಾಗುವುದು. ಇನ್ನು ಮಲಗುವುದು 12 ಅಥವಾ ಒಂದು ಗಂಟೆಯಾಗಿರುತ್ತದೆ. ಇಂತಹ ಸಮಯದಲ್ಲಿ ನಿದ್ದೆನೇ ಬರೋದಿಲ್ಲ. ನೀವೇನಾದ್ರೂ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ನಿಮ್ಮ ಬೆಡ್​ ರೂಂನಲ್ಲಿ ಈ ಗಿಡಗಳನ್ನು ಇಡಿ.

ಲ್ಯಾವೆಂಡರ್​​ ಸಸಿ

ನಿದ್ರೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ಎಂದರೆ ಅದು ನಿಮ್ಮ ಬೆಡ್​ರೂಂನಲ್ಲಿ ಲ್ಯಾವೆಂಡರ್​ ಸಸಿಯನ್ನು ಇಡುವುದಾಗಿದೆ. ಇದರ ಸುವಾಸನೆ ನಿಮ್ಮ ಒತ್ತಡ ಕಡಿಮೆ ಮಾಡಿ ನಿದ್ರೆಯನ್ನು ಆಹ್ವಾನಿಸುತ್ತದೆ.

ಆಲೋವೆರಾ

ಆಲೋವೆರಾ ಗಿಡದ ಪೋಷಣೆ ಅಗತ್ಯವಿಲ್ಲ. ಇದನ್ನು ಎಲ್ಲಿಯೇ ಇಟ್ಟರು ಆರಾಮಾಗಿ ಬೆಳವಣಿಗೆ ಕಾಣುತ್ತದೆ. ಇದರಿಂದ ರಿಲೀಸ್ ಆಗುವ ಆಮ್ಲಜನಕವು ಉತ್ತಮ ನಿದ್ರೆಗೆ ಅವಕಾಶ ಮಾಡಿಕೊಡುತ್ತದೆ.

ಮಲ್ಲಿಗೆ ಗಿಡ

ಮಲ್ಲಿಗೆಯಿಂದ ಹೊರಬರುವ ಸುವಾಸನೆಯು ನಿಮ್ಮ ಒತ್ತಡ ಕಡಿಮೆ ಮಾಡಿ, ಆರೋಗ್ಯಕರ ನಿದ್ದೆಗೆ ನಾಂದಿ ಹಾಡುತ್ತದೆ. ಈ ಕಾರಣದಿಂದಾಗಿ ನೀವು ಮಲಗುವ ಕೋಣೆಯಲ್ಲಿ ಮಲ್ಲಿಗೆ ಹೂವಿನ ಗಿಡವನ್ನು ಇಡಬಹುದಾಗಿದೆ.

ರೋಸ್ಮರಿ

ಮುಟ್ಟಿದರೆ ಸಾಕು ಘಮ್ ಎನ್ನುವ ರೋಸ್ಮರಿ ಗಿಡಕ್ಕೆ ಹೆಚ್ಚು ಪೋಷಣೆ ಮಾಡುವ ಅಗತ್ಯವಿಲ್ಲ. ಇದರ ಘಮವು ಶಾಂತ ರೀತಿಯಲ್ಲಿ ನಿಮ್ಮ ಕಣ್ಣನ್ನು ಮುಚ್ಚಿ ನಿದ್ರಿಸುವಂತೆ ಮಾಡುತ್ತದೆ.