ಪರ ಭಾಷೆಯಲ್ಲಿ ಆಶಿಕಾ ರಂಗು, ಗುಂಗು

ಮಮತಾ

ಪರ ಭಾಷೆಯಲ್ಲಿ ಆಶಿಕಾ ರಂಗು, ಗುಂಗು

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್ ಕನ್ನಡದಲ್ಲಿ ಮಾತ್ರವಲ್ಲ, ಕಾಲಿವುಡ್​ ಮತ್ತು ಟಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಕ್ರೇಜಿ ಬಾಯ್​ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಇವರು ಸದ್ಯ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಬ್ಯುಸಿಯಾದ ಆಶಿಕಾ

ಸ್ಯಾಂಡಲ್​ವುಡ್ ನಟಿ ಆಶಿಕಾ ಸಿನಿಮಾಕ್ಕೆ ಕಾಲಿಟ್ಟು ಅವರು 10 ವರ್ಷ ಕಳೆದಿದೆ. ಗತವೈಭವ ಸಿನಿಮಾ ನಂತರ ಯಾವುದೇ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿಲ್ಲವಾದರೂ ಪರ ಭಾಷೆಯಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾದಲ್ಲಿ ನಟಿಸುವತ್ತ ಬ್ಯುಸಿಯಾಗಿದ್ದಾರೆ.

ಸರ್ದಾರ್​2ದಲ್ಲಿ ಆಶಿಕಾ

ಕಾರ್ತಿ, ಮಾಳವಿಕಾ ಮೋಹನನ್, ಎಸ್. ಜೆ. ಸೂರ್ಯ ಜತೆ ಆಶಿಕಾ ನಟಿಸಿರುವ ತಮಿಳಿನ 'ಸರ್ದಾರ್ 2' ಸಿನಿಮಾದಲ್ಲಿ ನಟಿಸಿದ್ದು, ಇದೇ 10ರಂದು ತೆರೆ ಕಾಣಲಿದೆ.

'ವಿಶ್ವಂಭರ' ದಲ್ಲೂ ಆಶಿಕಾ ರಂಗು

ಚಿರಂಜೀವಿ ನಟನೆಯ ತೆಲುಗಿನ 'ವಿಶ್ವಂಭರ' ದಲ್ಲೂ ಕನ್ನಡದ ಹುಡುಗಿ ನಟಿಸಿದ್ದು, ಸಿನಿಮಾ ಬಿಡುಗಡೆ ವಿಳಂಬವಾಗಿದ್ದರೂ ಇದೇ ವರ್ಷ ರಿಲೀಸ್ ಆಗಲಿದೆ.

ಆಶಿಕಾ ಮುಂದಿರುವ ಸಿನಿಮಾ

ಆಶಿಕಾ ರಂಗನಾಥ್​ ಅವರು ಹೊಸ ತೆಲುಗು ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಓಂ ಬೀಂ ಬುಷ್​ ಹಾಗೂ ಸ್ವಾಗ್​ ಸೇರಿ ರೊಮ್ಯಾಂಟಿಕ್ ಕಾಮಿಡಿಗಳ ಮೂಲಕ ಟಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಶ್ರೀವಿಷ್ಣು ನಾಯಕನಾಗಿದ್ದು, ಇನ್ನಷ್ಟೇ ಟೈಟಲ್ ಫಿಕ್ಸ್ ಮಾಡಬೇಕಿದೆ. ಇತ್ತೀಚೆಗಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ.

ಆಶಿಕಾ ನಟನೆಯ ಸಿನಿಮಾವಿದು

ಆಶಿಕಾ ಅವತು ಮಿಸ್​ ಯೂ, ಅಮಿಗಾಸ್, ಭರ್ತ ಮಹಾಶಯುಲಕು ವಿಜ್ಞಪ್ತಿ, ಪತ್ತಾಟು ಅರಸನ್, ಒ2, ತಾಯಿಗೆ ತಕ್ಕ ಮಗ, ಮುಗುಳುನಗೆ, ಅವತಾರ ಪುರುಷ, ರ್ಯಾಂಬೋ, ಮಾಸ್​ ಲೀಡರ್, ಮದಗಜ ಸಿನಿಮಾದಲ್ಲಿ ನಟಿಸಿದ್ದಾರೆ.

ಆಶಿಕಾ ಬಗ್ಗೆ ಕಾರ್ತಿ ಹೇಳಿದ್ದಿಷ್ಟು

ಆಶಿಕಾ ಅವರು ಒಳ್ಳೆಯ ಡ್ಯಾನ್ಸರ್​, ಅವರ ಇನ್​ಸ್ಟಾಗ್ರಾಮ್​ ಪ್ರೊಫೈಲ್​ ನೋಡಿದಾಗ ಅವರು ಗ್ಲಾಮರಸ್​ ನಟಿ ಎನಿಸುತ್ತದೆ. ಆದರೆ ಅವರ ಜೊತೆ ನಟಿಸಿದ ನಂತರ ತಿಳಿಯುತ್ತದೆ ಅವರೊಬ್ಬ ಅದ್ಭುತ ನಟಿ ಎಂದು ಕೊಂಡಾಡಿದರು.