ಸಖತ್​ ಹಾಟ್​ ಪಾಯಲ್​ ಚೆಂಗಪ್ಪ..!

ಮಮತಾ

ಸಖತ್​ ಹಾಟ್​ ಪಾಯಲ್​ ಚೆಂಗಪ್ಪ..!

ಕಿರುತರೆಯಲ್ಲಿ ಶಾರ್ಟ್​ ಕಾಮಿಡಿ ಸಿನಿಮಾಗಳಿಂದ ಹೆಸರುವಾಸಿಯಾಗಿರುವ ಪಾಯಲ್​ ಚೆಂಗಪ್ಪ ಕೊಡಗಿನ ಕುವರಿ. ಸೋಶಿಯಲ್​ ಮೀಡಿಯಾ ಸ್ಟಾರ್​ ಎಂದರೆ ತಪ್ಪಾಗೋದಿಲ್ಲ. ಅವರ ವಾಯ್ಸ್​ ಮತ್ತು ಸೌಂದರ್ಯಕ್ಕೆ ಮನಸೋಲದ ಪಡ್ಡೆ ಹುಡುಗರಿಲ್ಲ. ಶಾರ್ಟ್​ ಸಿನಿಮಾಗಳ ಮೂಲಕ ಬಣ್ಣ ಹಚ್ಚಿದ ಪಾಯಲ್​ ಅವರು, ಅಮೃತ್​ ಅಂಜನ್​, ಜೆರಾಕ್ಸ್​​, ಬ್ರ್ಯಾಟ್​ ಸಿನಿಮಾದಲ್ಲಿ ನಟಿಸಿದ್ದಾರೆ.

ಥಾಯ್ಲೆಂಡ್​ನಲ್ಲಿ ಹಾಟ್​ ಫೋಟೋ ಶೂಟ್

ಪಾಯಲ್​ ಅವರು ಸದ್ಯ ರಿಲ್ಯಾಕ್ಸ್​ ಮೋಡ್​ನಲ್ಲಿ ಇದ್ದಾರೆ. ಇತ್ತೀಚೆಗೆ ಅವರು ಥೈಲ್ಯಾಂಡ್​ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಸಖತ್​ ಬೋಲ್ಡ್​ ಮತ್ತು ಹಾಟ್​ ಆಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದು, ಅಭಿಮಾನಿಗಳು, ಪಡ್ಡೆ ಹುಡುಗರು ಅವರ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

ಅಮೃತ್​ ಅಂಜನ್​ಗೆ ಸಕ್ಸಸ್!

ಇತ್ತೀಚೆಗೆ ಅಂದರೆ, ಜನವರಿಯಲ್ಲಿ ಪಾಯಲ್​ ಚೆಂಗಪ್ಪ ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಅಮೃತ್​ ಅಂಜನ್ ಎನ್ನುವ ಸಿನಿಮಾ ಹೆಸರು ಮಾಡಿತ್ತು. ಈ ಸಿನಿಮಾದಲ್ಲಿ ಶಾರ್ಟ್​ ಸಿನಿಮಾದ ತಂಡವೇ ಇತ್ತು. ಲವ್​, ಬ್ರೇಕಪ್​​, ಫ್ಯಾಮಿಲಿ ಡ್ರಾಮಾವೂ ಈ ಸಿನಿಮಾದ ಕತಾ ಹಂದರ.

ಬ್ರ್ಯಾಟ್​ನಲ್ಲಿ ಮಿಂಚಿದ್ದ ಪಾಯಲ್

ಡಾರ್ಲಿಂಗ್​ ಕೃಷ್ಣ ಅಭಿನಯದ ಸಿನಿಮಾ ಬ್ರ್ಯಾಟ್​​ನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಡಾಲಿ ಧನಂಜಯ್​ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಜೆರಾಕ್ಸ್​ ಸಿನಿಮಾದಲ್ಲಿ ನಾಗಭೂಷಣ್​ ಅವರಿಗೆ ನಾಯಕ ನಟಿಯಾಗಿ ಮಿಂಚಿದ್ದಾರೆ.

ಟಾಲಿವುಡ್​ನಲ್ಲೂ ಬೇಡಿಕೆ!

ಕನ್ನಡ ಮಾತ್ರವಲ್ಲದೆ, ಪಾಯಲ್​ ಚೆಂಗಪ್ಪ ಅವರಿಗೆ ತೆಲುಗು ಸಿನಿಮಾ ರಂಗದಲ್ಲಿಯೂ ಬೇಡಿಕೆ ಹೆಚ್ಚಾಗಿದೆ Rambo ಸುಕನ್ಯಾ ಎನ್ನುವ ವೆಬ್​ ಸೀರಿಸ್​ನಲ್ಲೂ ನಟಿಸಿದ್ದಾರೆ. ಡ್ಯಾಡ್​ ಲಿಟಲ್​ ಗರ್ಲ್​, ಬ್ಯಾಡ್​ ಗರ್ಲ್​ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.

ಡಾಲಿ ಧನಂಜಯ್ ನಿರ್ಮಾಣದ ಜೆರಾಕ್ಸ್​​ ವೆಬ್​ಸೀರಿಸ್​​ನಲ್ಲಿ ನಟನೆ

ಬ್ಲಿಂಕ್​ ಸಿನಿಮಾದ ಡೈರೆಕ್ಟರ್​ ಶ್ರೀನಿಧಿ ಬೆಂಗಳೂರು ಜೆರಾಕ್ಸ್​​ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ​ ವೆಬ್​ ಸೀರಿಸ್​ ಜೀಯಲ್ಲಿ ಪ್ರಸಾರವಾಗಲು ಇನ್ನು ಕೆಲವು ದಿನ ಬಾಕಿ ಉಳಿದಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್​ ಸದ್ದು ಮಾಡಿದೆ. ನಾಯಕಿಯಾಗಿ ಪಾಯಲ್​ ಕಾಣಿಸಿಕೊಂಡಿದ್ದಾರೆ.