ಹಾಟ್ ಬ್ಯೂಟಿ​ ಅನುಷಾ ರೈ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಹಾಟ್ ಬ್ಯೂಟಿ​ ಅನುಷಾ ರೈ!

ಸ್ಯಾಂಡಲ್​ವುಡ್​ ಬ್ಯೂಟಿ ಹಾಗೂ ಮಾಜಿ ಬಿಗ್​ಬಾಸ್​ ಸ್ಪರ್ಧಿ ಅನುಷಾ ರೈ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.

ಗ್ಲಾಮರಸ್​ ಫೋಟೋಶೂಟ್​

ಫೋಟೋದಲ್ಲಿ ಅನುಷಾ ಅವರು ಬೆಳ್ಳಿ ಬಣ್ಣದ ಸ್ಟೈಲಿಷ್ ಗೌನ್ ಧರಿಸಿ, ಗ್ಲಾಮರಸ್ ಮೇಕಪ್‌ನೊಂದಿಗೆ ಪೋಸ್ ನೀಡಿದ್ದಾರೆ. ಫ್ಲೋರ್ ಮೇಲೆ ಕುಳಿತು, ಕೈಯನ್ನು ಮುಖಕ್ಕೆ ಹಿಡಿದು, ಕೂದಲು ಹಾರುತ್ತಿರುವ ಡೈನಾಮಿಕ್ ಲುಕ್ ನೀಡಿದ್ದಾರೆ.

ಪಡ್ಡೆ ಹುಡುಗರು ಫಿದಾ

ಅನುಷಾ ಅವರ ಹಾಟ್​​ ಅವತಾರವನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದು, ಕಾಮೆಂಟ್​ಗಳ ಮೂಲಲ ಸ್ಯಾಂಡಲ್​ವುಡ್​ ಬ್ಯೂಟಿ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ

ಆರಂಭದಲ್ಲಿ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಅಭಿನಯ ಪಯಣ ಆರಂಭಿಸಿದ ಅನುಷಾ ರೈ ಅವರು, ನಂತರ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಬಿಗ್ ಬಾಸ್ ಕನ್ನಡ ಸ್ಪರ್ಧಿ

ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' (ಸೀಸನ್ 11) ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಕನ್ನಡಿಗರ ಗಮನ ಸೆಳೆದರು.

ನಟಿಸಿದ ಪ್ರಮುಖ ಚಿತ್ರಗಳು

'ಮಹಾನುಭಾವರು', 'ಖಡಕ್', ಗೋಸಿ ಗ್ಯಾಂಗ್​ ಹಾಗೂ ದಮಯಂತಿ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವೈವಿಧ್ಯಮಯ ನಟನೆ

ಕಾಮಿಡಿ, ಥ್ರಿಲ್ಲರ್, ಹಾರರ್-ಕಾಮಿಡಿ ಎಲ್ಲಾ ಪ್ರಕಾರಗಳಲ್ಲಿ ನಟಿಸಿ ಬಹುಮುಖ ಪ್ರತಿಭೆ ತೋರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾ ಸ್ಟಾರ್​

ಇಂಜಿನಿಯರಿಂಗ್ ಪದವಿ ಪಡೆದ ನಂತರ ತಂತ್ರಜ್ಞಾನ ಕ್ಷೇತ್ರದಿಂದ ನಟನೆ ಕ್ಷೇತ್ರಕ್ಕೆ ಬದಲಾಯಿಸಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಅನುಷಾ, ಫ್ಯಾಷನ್ ಹಾಗೂ ಹಾಟ್​ ಫೋಟೋಶೂಟ್​ಗಳಿಗೆ ಪ್ರಸಿದ್ಧಿ.

ಉದ್ಯಮಿ

ನಟನೆ ಜೊತೆಗೆ AR Ventures ಮೂಲಕ ಉದ್ಯಮಿಯಾಗಿಯೂ ಚಟುವಟಿಕೆ ನಡೆಸುತ್ತಿದ್ದಾರೆ. ಸ್ವಂತ ಬ್ರ್ಯಾಂಡ್ ಮತ್ತು ಬಿಸಿನೆಸ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.