ಗ್ರೀನ್​ ಜೆರ್ಸಿಯಲ್ಲಿ RCB ಮಾಜಿ ಬ್ರಾಂಡ್​ ಅಂಬಾಸಿಡರ್​..!

ಮಮತಾ

ಗ್ರೀನ್​ ಜೆರ್ಸಿಯಲ್ಲಿ RCB ಮಾಜಿ ಬ್ರಾಂಡ್​ ಅಂಬಾಸಿಡರ್​..!

ಏಪ್ರಿಲ್​ 18ರಂದು ಆರ್​ಸಿಬಿ ತಂಡ ಗ್ರೀನ್ ಜೆರ್ಸಿಯಲ್ಲಿಯೇ ಅಖಾಡಕ್ಕಿಳಿದೆ. ಈ ಹೊತ್ತಲ್ಲೇ ಅಭಿಮಾನಿಗಳು ರಮ್ಯಾ ಆರ್​ಸಿಬಿಯ ರಾಯಭಾರಿ ಆಗಿದ್ದ ದಿನಗಳನ್ನ ಮೆಲುಕು ಹಾಕಿದ್ದಾರೆ. ಮೋಹಕ ತಾರೆ ರಮ್ಯಾ ಅವರು ಸಹ ಗ್ರೀನ್ ಜೆರ್ಸಿ ತೊಟ್ಟ ಫೋಟೋಗಳನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

RCB ಅಂಗಳದ ಹಳೆಯ ನೆನಪು ಬಿಚ್ಚಿಟ್ಟ ಮಾಜಿ ಬ್ರಾಂಡ್​ ಅಂಬಾಸಿಡರ್​

ಆರ್​ಸಿಬಿಗೆ ರಮ್ಯಾ ಅವರು ಬ್ರಾಂಡ್​ ಅಂಬಾಸಿಡರ್​ ಆಗಿದ್ದರು. ಅವರನ್ನು ತಂಡದ ಲಕ್ಕಿ ಚಾರ್ಮ್​ ಎಂದೇ ಕರೆಯಲಾಗುತ್ತಿತ್ತು. ತಂಡದ ಪ್ರತಿ ಆಟಗಳಿಗೆ ಸ್ಟೇಡಿಯಂಗೆ ಭೇಟಿ ನೀಡುತ್ತಿದ್ದ ಅವರು, ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಹುರಿದುಂಬಿಸುತ್ತಿದ್ದರು.

ಥ್ರೋ ಬ್ಯಾಕ್​ ಎಂದು ಪದ್ಮಾವತಿ ಪೋಸ್ಟ್

ಥ್ರೋ ಬ್ಯಾಕ್​ ಟು ಗ್ರೀನ್​ 8K ಎಂದು ಅವರು ಆರ್​ಸಿಬಿ ಹೆಸರು ಉಲ್ಲೇಖಿಸುವ ಚೆಂಡಿನಲ್ಲಿ ಗಿಡವನ್ನಿಟ್ಟಿರುವ ಪಾಟ್​​ ಅನ್ನು ಹಿಡಿದಿದ್ದಾರೆ. ಈ ವೇಳೆ ಅವರೊಂದಿಗೆ ವಿರಾಟ್​ ಕೊಹ್ಲಿ ಸಹ ಇದ್ದಾರೆ. ರಮ್ಯಾರ ಪೋಸ್ಟ್​ಗೆ ಪ್ಯಾನ್ಸ್​ಗಳು ಕ್ಯೂಟ್​ ಬೇಬಿ ಎಂದಿದ್ದಾರೆ.

2011ರಿಂದ ಒಂದು ಪಂದ್ಯದಲ್ಲಿ ಗ್ರೀನ್​ ಜೆರ್ಸಿ ಧರಿಸುವ RCB

2011ರಿಂದ ಆರ್​ಸಿಬಿ ಐಪಿಎಲ್​ ಆವೃತ್ತಿಯಲ್ಲಿ ಹಸಿರು ಜೆರ್ಸಿ ಧರಿಸಿ, ಒಂದು ಪಂದ್ಯವನ್ನು ಆಡುತ್ತದೆ. ರೀಸೈಕಲ್​​ ಆದ ವಸ್ತುಗಳಿಂದ ತಯಾರಾದ ಜೆರ್ಸಿಯನ್ನು ಧರಿಸಿ ಗೋ ಗ್ರೀನ್​ ಎಂಬ ಸಂದೇಶ ನೀಡುತ್ತದೆ. ಆ ಮೂಲಕ ಪ್ರಕೃತಿ ಜಾಗೃತಿ ಬಗ್ಗೆ ಅರಿವು ಮೂಡಿಸುತ್ತದೆ.

DC ಜೊತೆಗಿನ ಪಂದ್ಯಕ್ಕೆ ಗ್ರೀನ್​ ಜೆರ್ಸಿ ತೊಟ್ಟ RCB

ಏಪ್ರಿಲ್​ 18ರಂದು ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯಕ್ಕೆ ಹಸಿರು ಜರ್ಸಿ ತೊಟ್ಟು ಪಂದ್ಯವಾಡಿತ್ತು. ಹಸಿರು ಜರ್ಸಿಯನ್ನು ಧರಿಸಿ ಆರ್ಸಿಬಿ 15 ಪಂದ್ಯವಾಡಿ ಕೇವಲ ಐದು ಪಂದ್ಯ ಗೆದ್ದಿದೆ. ಒಂಬತ್ತು ಆಟ ಸೋತಿದೆ.