ಟಾಲಿವುಡ್ ನಟಿ ಕಾಮಾಕ್ಷಿ ಭಾಸ್ಕರ್ಲಾ ಅವರ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ಕಾಮಾಕ್ಷಿ ಅವರು ಸೀರೆಯಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನಗುವಿನ ಮೋಡಿ
ಫೋಟೋದಲ್ಲಿ ಕಾಮಾಕ್ಷಿ ಅವರು ಕಪ್ಪು ಬಣ್ಣದ ಹೂವಿನ ಕಸೂತಿ ಬ್ಲೌಸ್ ಮತ್ತು ಕೆಂಪು ಸೀರೆಯನ್ನು ಧರಿಸಿದ್ದು, ವಿವಿಧ ಭಂಗಿಗಳಲ್ಲಿ ನಗುತ್ತಾ ಮಾದಕವಾಗಿ ಪೋಸ್ ನೀಡಿದ್ದಾರೆ.
ಫ್ಯಾನ್ಸ್ ಫಿದಾ
ಸೀರೆಯಲ್ಲೂ ತಮ್ಮ ಮೈಮಾಟ ಪ್ರದರ್ಶಿಸಿರುವ ಕಾಮಾಕ್ಷಿ ಅವರ ಬೋಲ್ಡ್ನೆಸ್ ನೋಡಿ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ ಮೂಲಕ ತೆಲುಗು ಬ್ಯೂಟಿಯನ್ನು ಕೊಂಡಾಡುತ್ತಿದ್ದಾರೆ.
ಮೊದಲ ಬಾರಿಗೆ ನಾಯಕಿ
ಕಾಮಾಕ್ಷಿ ಭಾಸ್ಕರ್ಲಾ ಸಿನಿಮಾರಂಗಕ್ಕೆ ಕಾಲಿಟ್ಟು ಒಂಬತ್ತು ವರ್ಷಗಳಾಗಿವೆ ಮತ್ತು ಅವರು 'ಅಗಾಧ' ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದಾರೆ.
ಪತ್ರಿಕಾಗೋಷ್ಠಿ
ಎಂ.ಎಸ್. ರಾಜು ನಿರ್ದೇಶನದ ಈ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದೆ. ಆಗಸ್ಟ್ 14ರಂದು ಅಂದರೆ ನಾಳೆ ಈ ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.
ಅವಕಾಶ ಕಡಿಮೆ
ತೆಲುಗು ಚಿತ್ರರಂಗದಲ್ಲಿ ತೆಲುಗು ಹುಡುಗಿಯರಿಗೆ ಅವಕಾಶಗಳು ತುಂಬಾ ಕಡಿಮೆ ಇವೆ ಮತ್ತು ಈಗಷ್ಟೇ ಪರಿಸ್ಥಿತಿ ಬದಲಾಗುತ್ತಿದೆ ಎಂದು ಕಾಮಾಕ್ಷಿ ತಿಳಿಸಿದ್ದಾರೆ.
ಗಾಸಿಪ್ ಮಾಡಿದ್ದರು
ನಾನು ವೈದ್ಯಕೀಯ ವೃತ್ತಿಯನ್ನು ತೊರೆದು ಸಿನಿಮಾಗೆ ಬಂದಾಗ ಹಲವರು ನಾನಾ ರೀತಿಯಲ್ಲಿ ಮಾತನಾಡಿಕೊಂಡಿದ್ದರು ಎಂದು ಕಾಮಾಕ್ಷಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಣ್ಣೀರಾಕಿದ ಕಾಮಾಕ್ಷಿ
ತನ್ನ ಹಿಂದಿನ ಪಾತ್ರಗಳ ಹಿಂದೆ ತಾನುಪಟ್ಟ ಕಷ್ಟಗಳು ಮತ್ತು ಕುಟುಂಬವು ತನಗೆ ನೀಡಿದ ಬೆಂಬಲವನ್ನು ನೆನೆದು ವೇದಿಕೆಯಲ್ಲೇ ಕಾಮಾಕ್ಷಿ ಭಾಸ್ಕರ್ಲಾ ಭಾವುಕರಾಗಿ ಕಣ್ಣೀರು ಹಾಕಿದರು.
ಜ್ವರವಿದ್ದರೂ ಭಾಗಿ
ತನಗೆ ಶೀತ ಹಾಗೂ ಜ್ವರವಿದ್ದರೂ ಕೂಡ ತನ್ನ ವೃತ್ತಿಪರತೆ ಮತ್ತು ಸಮರ್ಪಣಾ ಭಾವದಿಂದ ಈ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಕಾಮಾಕ್ಷಿ ಅವರು ಸ್ಪಷ್ಟಪಡಿಸಿದರು.
ಸ್ಪಷ್ಟನೆ ನೀಡಿದ ಕಾಮಾಕ್ಷಿ
ಕಾರ್ಯಕ್ರಮದ ಆರಂಭದಲ್ಲಿ ಆ್ಯಂಕರ್ ಸುಮನ್ ಅವರನ್ನು ಸ್ವಲ್ಪ ದೂರವಿರಲು ಕೋರಿದ್ದು, ತನಗಿರುವ ಜ್ವರದ ಕಾರಣದಿಂದಲೇ ಹಾಗೆ ಹೇಳಿದೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದರು.