ಹೆಚ್ಚಿತು ಕಲ್ಯಾಣಿ ಪ್ರಿಯದರ್ಶನ್​ ಬೇಡಿಕೆ..!

ಭೂಮಿಕಾ ವಿ. ನಾಥ್​​​

ಹೆಚ್ಚಿತು ಕಲ್ಯಾಣಿ ಪ್ರಿಯದರ್ಶನ್​ ಬೇಡಿಕೆ..!

ಕಲ್ಯಾಣಿ ಪ್ರಿಯದರ್ಶನ್ ಅವರು ‘ಲೋಕಃ: ಚಾಪ್ಟರ್ 1- ಚಂದ್ರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಬಳಿಕ ಕಲ್ಯಾಣಿ ಬೇಡಿಕೆ ಹೆಚ್ಚಾಗಿದ್ದು, ಎಲ್ಲಾ ಭಾಷೆಯಲ್ಲೂ ಅವರಿಗೆ ಸಿಕ್ಕಾಪಟ್ಟೆ ಆಫರ್ಸ್​​ಗಳೂ ಬರುತ್ತಿವೆ

ಆರಂಭದ ದಿನಗಳಲ್ಲಿ ದಪ್ಪ ಇದ್ದರು

ಕಲ್ಯಾಣಿ ಪ್ರಿಯದರ್ಶನ್ ಆರಂಭದ ದಿನಗಳಲ್ಲಿ ದಪ್ಪ ಇದ್ದರು. ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾ ಇರಲಿಲ್ಲ. ಆದರೆ, ದಿನ ಕಳೆದಂತೆ ಅವರಿಗೆ ಆರೋಗ್ಯದ ಕಡೆ ಗಮನ ಬಂತು. ಈ ಕಾರಣದಿಂದಲೇ ಅವರು ಆಹಾರದ ಬಗ್ಗೆ ಗಮನ ಹರಿಸಿದರು. ನಿತ್ಯ ಜಿಮ್​ನಲ್ಲಿ ವರ್ಕೌಟ್ ಕೂಡ ಮಾಡಿದರು. ಈ ಎಲ್ಲಾ ಕಾರಣದಿಂದ ಈಗ ಅವರು ಫಿಟ್ ಆಗಿದ್ದಾರೆ.

‘ಹೃದಯಂ’ ಮೂಲಕ ಖ್ಯಾತಿ

‘ಹೃದಯಂ’ ಸಿನಿಮಾದಲ್ಲಿ ನಟಿಸಿ ಕಲ್ಯಾಣಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಆ ಬಳಿಕ ಹಲವು ಸಿನಿಮಾಗಳಲ್ಲಿ ಕಲ್ಯಾಣಿ ನಟಿಸಿದ್ದಾರೆ.

ಸೂಪರ್ ವುಮನ್ ಪಾತ್ರ

ಲೋಕಃ ಸಿನಿಮಾದಲ್ಲಿ ಅವರು ಸೂಪರ್ ವುಮನ್ ಪಾತ್ರ ಮಾಡಿದ್ದಾರೆ. ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಮಲಯಾಳಂ ನಟಿಯ ಪುತ್ರಿ

ಲೆಜೆಂಡರಿ ಸಿನಿಮಾ ನಿರ್ದೇಶಕ ಪ್ರಿಯದರ್ಶನ್ ಹಾಗೂ ಖ್ಯಾತ ಮಲಯಾಳಂ ನಟಿ ಲಿಸ್ಸಿ ಅವರ ಪುತ್ರಿ ಕಲ್ಯಾಣಿ. ಅವರ ಜನಪ್ರಿಯತೆ ಈಗ ಸಾಕಷ್ಟು ಹೆಚ್ಚಾಗಿದೆ.