ಕಾಜಲ್ ಅಗರ್ವಾಲ್ ಅವರು ಇತ್ತೀಚೆಗೆ ಗೋಲ್ಡನ್ ಸ್ಯಾರಿ ಉಟ್ಟು ಫೋಟೋ ಶೂಟ್ ಮಾಡಿಸಿಕೊಂಡಿರುವ ಪಟವನ್ನು ಹಂಚಿಕೊಂಡಿದ್ದಾರೆ. ಬೂದು ಬಣ್ಣದ ಸ್ಯಾರಿ ತೊಟ್ಟಿರುವ ಅವರು, ಅದಕ್ಕೆ ಹೊಂದುವ ಮಾಡ್ರನ್ ರವಿಕೆ ಧರಿಸಿದ್ದಾರೆ. ಸೀರೆ ಮೇಲಿನ ಮಿನುಗುವ ವರ್ಕ್ ಸಿಂಪಲ್ ಬಟ್ಟೆಗೆ ಸಾಕಷ್ಟು ಮೆರುಗು ಕೊಟ್ಟಿದೆ.
ಎಷ್ಟು ಮುದ್ದು ನೀವು ಎಂದ ಫ್ಯಾನ್ಸ್
ದಿನದಿಂದ ದಿನಕ್ಕೆ ಕಾಜಲ್ ಅವರ ಸೌಂದರ್ಯ ಮತ್ತಷ್ಟು ಹೆಚ್ಚುತ್ತಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಎಷ್ಟು ಮುದ್ದಾಗಿದ್ದೀರಿ. ಸೀರೆಯಲ್ಲಿ ಅದ್ಭುತವಾಗಿ ಕಾಣ್ತಿದ್ದೀರ ಎಂದು ಕೆಲವರು ಫೋಸ್ಟ್ಗೆ ಉತ್ತರಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಭಾಗಿ
ಟಾಲಿವುಡ್‌ನ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರ ವಿವಾಹದ ನಂತರ ನಡೆದ ಭವ್ಯ ಸ್ವಾಗತ ಸಮಾರಂಭದಲ್ಲಿ ನಟಿ ಕಾಜಲ್ ಅಗರ್ವಾಲ್ ವಿಶೇಷ ಕಾಣಿಸಿಕೊಂಡರು.
ಕಾಜಲ್ ಸಿನಿ ಪಯಣ
ಕಾಜಲ್ ಅಗರವ್ಲ್ ಅವರಿಗೆ 2007ರಲ್ಲಿ ತೆರೆಕಂಡ ಚಂದಮಾಮ ಸಿನಿಮಾವು ಯಶಸ್ಸು ತಂದು ಕೊಟ್ಟಿತ್ತು. ಮಗಧೀರದಲ್ಲಿನ ಅವರ ನಟನೆಯಂತೂ ಅಧ್ಭುತ. ಈ ಸಿನಿಮಾ ಮೂಲಕ ಅವರು ಸ್ಟಾರ್ ನಟಿಯಾಗಿ ಹೊರ ಹೊಮ್ಮಿದರು. ಮಿಸ್ಟರ್ ಪರ್ಫೆಕ್ಟ್, ತುಪಾಕಿ ಸಿನಿಮಾಗಳು ಬ್ಲಾಕ್ ಬ್ಲಸ್ಟರ್ ಹಿಟ್ ಕಂಡಿವೆ.
ಕಾಜಲ್ ಎಲ್ಲಿನವರು?
ಕಾಜಲ್ ಮೂಲತ: ಪಂಜಾಬಿಯವರಾಗಿದ್ದು, ಹುಟ್ಟಿದ್ದು ಮುಂಬೈನಲ್ಲಿ. 2004 ರಲ್ಲಿ ಕ್ಯೂ ಹೋ ಗಯಾನಾ ಎನ್ನುವ ಹಿಂದಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಅವರು ಲಕ್ಷ್ಮಿ ಕಲ್ಯಾಣ ಸಿನಿಮಾದ ಮೂಲಕ ಟಾಲಿವುಡ್ಗೆ ಪರಿಚಯವಾದರು.
ಕಾಜಲ್ ದಾಂಪತ್ಯ ಜೀವನ
ಕಾಜಲ್ ಅಗರ್ವಾಲ್ ಅವರು 2020ರಲ್ಲಿ ಉದ್ಯಮಿ ಗೌತಮ್ ಕಿಚ್ಲು ಅವರನ್ನು ಮದುವೆ ಮಾಡಿಕೊಂಡರು. ಅವರಿಗೆ ಈಗ ಮಗುವೊಂದಿದೆ.
ಹಿಟ್ ಸಿನಿಮಾಗಳಿವು
ಮಗಧೀರ, ಡಾರ್ಲಿಂಗ್, ಬ್ಯುಸಿನಸ್ ಮ್ಯಾನ್ಮ ನಾಯಕ್, ಮಿಸ್ಟರ್ ಪರ್ಫೆಕ್ಟ್, ಆರ್ಯ1 ಮತ್ತು 2 ಹೇ ಸಿನಾಮಿಕಾ, ಮಾರಿ, ಬೃಂದಾವನಂ ವೀವೇಕಂ ಸೇರಿದಂತೆ ಹಲವು ಸಿನಿಮಾದಲ್ಲಿ ಅವರು ನಟಿಸಿ ಭರ್ಜರಿ ಹಿಟ್ ಕಂಡುಕೊಂಡಿದ್ದಾರೆ.