ಕಾಜಲ್ ಕಿಲ್ಲರ್ ಲುಕ್!

ಮಮತಾ

ಕಾಜಲ್ ಕಿಲ್ಲರ್ ಲುಕ್!

ನಂದಮೂರಿ ಬಾಲಕೃಷ್ಣ ಅವರ ಮುಂದಿನ ಸಿನಿಮಾವಾದ 'NBK 111' ಚಿತ್ರದಲ್ಲಿ ಕಾಜಲ್​ ಅಗರ್ವಾಲ್​ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಶನಿವಾರ (ಮೇ.30)ರಂದು ಹೊರಬಿದ್ದಿತ್ತು. ಆ ಬೆನ್ನಲ್ಲೇ ಅವರ ಹೊಸ ಫೋಟೋ ಶೂಟ್​ಗಳು ಆರಂಭವಾಗಿದೆ.

‘ಚಂದಮಾಮ’ ಕಾಜಲ್

ಪರದೆಯಂತೆ ಟಾಪ್​​ ಧರಿಸಿರುವ ಕಾಜಲ್​ ಮಿನಿ ಡೆನಿಮ್​ ಶಾರ್ಟ್​​ನಲ್ಲಿ ಮಿಂಚಿದ್ದಾರೆ. ಅದಕ್ಕೊಪ್ಪುವ ಮೇಕಪ್​​ ಅವರ ಸೌಂದರ್ಯವನ್ನು ಹೆಚ್ಚಿಸಿದೆ. ಫೋಟೋ ಶೂಟ್​ನಲ್ಲಿ ಅವರು ಕುಳಿತ ಭಂಗಿ ಕೊಟ್ಟ ಸ್ಟನ್ನಿಂಗ್​ ಲುಕ್​​ಗಳು ನೆಟ್ಟಿಗರ ನಿದ್ದೆ ಕೆಡಿಸಿದೆ.

ಬಾಲಯ್ಯ ಜೊತೆ ಕಂಬ್ಯಾಕ್

ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ಬಾಬಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ 'NBK 111' ಬಗ್ಗೆ ಸಿನಿರಂಗದಲ್ಲಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಗಳಿವೆ. ಈ ಚಿತ್ರಕ್ಕೆ ಮೊದಲು ನಯನತಾರಾ ಅವರನ್ನು ನಾಯಕಿಯನ್ನಾಗಿ ಪರಿಗಣಿಸಲಾಗಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಕಾಜಲ್​ ಅಗರ್ವಾಲ್​ ನಟಿಸಲಿದ್ದಾರೆ ಎನ್ನಲಾಗಿದೆ.

ಸೂಪರ್​ ಹಿಟ್​ ಕಾಂಬಿನೇಷನ್

ಬಾಲಕೃಷ್ಣ ಮತ್ತು ಕಾಜಲ್ ಅಗರ್ವಾಲ್ ಜೊತೆಯಾಗಿ ನಟಿಸಿದ್ದ 'ಭಗವಂತ್ ಕೇಸರಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. '

ನಂದಮೂರಿ ಫ್ಯಾನ್ಸ್​ಗೆ ಸಿಹಿ ಸುದ್ದಿ

NBK 111' ಚಿತ್ರದ ಮೂಲಕ ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿರುವುದು ನಂದಮೂರಿ ಫ್ಯಾನ್ಸ್​ಗೆ ಸಿಹಿ ಸುದ್ದಿ ಕೊಟ್ಟಂತಾಗಿದೆ.

ಮಾಸ್​ ಲುಕ್​ನಲ್ಲಿ ಬಾಲಯ್ಯ?

ಕಳೆದ ವರ್ಷ 'ವಾಲ್ತೇರು ವೀರಯ್ಯ' ಮೂಲಕ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದ ನಿರ್ದೇಶಕ ಬಾಬಿ, ಈ ಬಾರಿ ಬಾಲಯ್ಯ ಅವರನ್ನು ಮತ್ತಷ್ಟು ಕಡಕ್ ಮಾಸ್ ಲುಕ್‌ನಲ್ಲಿ ಪ್ರೆಸೆಂಟ್ ಮಾಡಲು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ನಡುವೆ ಕಾಜಲ್ ಅವರ ಈ ಕಿಲ್ಲಿಂಗ್ ಲುಕ್ಸ್ ಸಿನಿಮಾದ ಮೇಲಿನ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಕಾಜಲ್​ ಸಿನಿ ಪಯಣ

ಕಾಜಲ್​ ಅಗರ್ವಾಲ್​ ಆರ್ಯ-2, ಮಿಸ್ಟರ್​ ಪರ್ಫೆಕ್ಸ್​, ಭಗವಂತ್​ ಕೇಸರಿ, ಮಗಧೀರ, ಸಿಂಗಂ, ತುಪಾಕಿ ಸೇರಿದಂತೆ ಹಲವು ಸಿನಿಮಾಗಳು ಹಿಟ್​ ಕಂಡಿವೆ.