ಕಬ್ಜ ಬೆಡಗಿ ಶ್ರಿಯಾ ಶರಣ್ ಅಂದಕ್ಕೆ ಫ್ಯಾನ್ಸ್ ಮಗ್ನ

ಮಮತಾ

ಕಬ್ಜ ಬೆಡಗಿ ಶ್ರಿಯಾ ಶರಣ್ ಅಂದಕ್ಕೆ ಫ್ಯಾನ್ಸ್ ಮಗ್ನ

ಕೆಂಪು-ಗುಲಾಬಿ ಮಿಶ್ರಿತ ಸೀರೆ ಉಟ್ಟು, ಬನ್ ಮಾಡಿದ ಕೂದಲಿಗೆ ಮಲ್ಲಿಗೆ ಹೂವು ಮುಡಿದು, ಸಿಂಪಲ್​ ಮೇಕಪ್​, ಇದಕ್ಕೊಪ್ಪುವ ಓಲೆ ತೊಟ್ಟು, ಶ್ರಿಯಾ ಶರಣ್​ ಹಂಚಿಕೊಂಡಿರುವ ಫೋಟೋಗಳು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.

ನಿಮ್ಮ ಅಂದಕ್ಕೆ ಸಾಟಿ ಇಲ್ಲ

ಶ್ರಿಯಾ ಅವರು ಹೂಗಳ ಮಧ್ಯೆ ಕುಳಿತು ಅವನ್ನು ಪೋಣಿಸುತ್ತಾ ತೆಗೆಸಿಕೊಂಡ ಫೋಟೋಕ್ಕೆ ಫ್ಯಾನ್ಸ್​ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಅಂದಕ್ಕೆ ಸಾಟಿ ಯಾರಿಲ್ಲ ಎಂದಿದ್ದಾರೆ.

ಚಂದ್ರ, ಕಬ್ಜದಲ್ಲಿ ನಟನೆ

ಶ್ರಿಯಾ ಶರಣ್​ ಅವರು ಕನ್ನಡ ಚಂದ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಬುದ್ಧಿವಂತ ನಟ ಉಪೇಂದ್ರ ಅವರ ಕಬ್ಜ ಸಿನಿಮಾದಲ್ಲಿಯೂ ಮಿಂಚಿದ್ದರು.

ಬಹುಭಾಷಾ ತಾರೆ ಶ್ರಿಯಾ

ದಕ್ಷಿಣ ಭಾರತದ ನಟಿಯಾದ ಶ್ರಿಯಾ ಅವರಿಗೆ ಇಂದಿಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಬೇಡಿಕೆ ಇದೆ. ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿರುವ ಇವರು ತಮ್ಮದೇ ಆದ ಫ್ಯಾನ್​ ಬೇಸ್​ ಅನ್ನು ಹೊಂದಿದ್ದಾರೆ.

ಹೂ ಪೋಣಿಸಿದ ಶ್ರಿಯಾ

ಹೊಸದಾಗಿ ಹಂಚಿಕೊಂಡ ಫೋಟೋ ಶೂಟ್​ನಲ್ಲಿ ಶ್ರಿಯಾ ಅವರು ಹೂ ಪೋಣಿಸುತ್ತಿರುವಂತೆ ಫೋಟೋ ತೆಗೆಸಿಕೊಂಡಿರುವುದು ಸಾಕಷ್ಟು ಚೆಂದವಾಗಿ ಕಾಣುವಂತೆ ಮಾಡಿದೆ.

ಶ್ರಿಯಾ ಮನೆ ಹೇಗಿದೆ ಗೊತ್ತಾ?

ನಟಿ ಶ್ರಿಯಾ ಶರಣ್ಮತ್ತು ಅವರ ಪತಿ ಆಂಡ್ರೆ ಕೊಶ್ಚೇವ್ ತಮ್ಮ ಮುಂಬೈ ಮನೆಯ ಸುಂದರವಾದ ವಿಡಿಯೋ ಪ್ರವಾಸವನ್ನು ನೀಡಿದ್ದಾರೆ. ಖ್ಯಾತ ಚಲನಚಿತ್ರ ನಿರ್ದೇಶಕಿ ಫರಾ ಖಾನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, ಫರಾ ಖಾನ್ ಕಟ್ಟಡದಲ್ಲೇ ಇರುವ 4ನೇ ಮಹಡಿಯ ಅಪಾರ್ಟ್‌ಮೆಂಟ್ ಇದಾಗಿದೆ.

ಇಷ್ಟಂ ಮೂಲಕ ಸಿನಿಮಾಕ್ಕೆ ಎಂಟ್ರಿ

ಇಷ್ಟಂ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಶ್ರಿಯಾ ಅವರು ಇಂದಿಗೂ ತಮ್ಮದೇ ಆದ ಬೇಡಿಕೆಯನ್ನು ಇಟ್ಟುಕೊಂಡಿದ್ದಾರೆ.