ಜ್ಯೋತಿ ರೈ ಹಾಟ್​ ಅವತಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

ಜ್ಯೋತಿ ರೈ ಹಾಟ್​ ಅವತಾರ

ಖ್ಯಾತ ನಟಿ ಜ್ಯೋತಿ ರೈ ಅಲಿಯಾಸ್​ ಜ್ಯೋತಿ ಪೂರ್ವಜ್ ಬಗ್ಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಆವರು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.

ಆರಂಭಿಕ ಜೀವನ

1985ರ ಫೆಬ್ರವರಿ 23ರಂದು ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಪುತ್ತೂರಿನಲ್ಲಿ ಬೆಳೆದರು. ಡಿಗ್ರಿ ಓದು ಮುಗಿಯುತ್ತಿದ್ದಂತೆಯೇ ಸುಮಾರು 20 ವರ್ಷ ವಯಸ್ಸಿನಲ್ಲೇ ಮೊದಲ ಮದುವೆಯಾಗಿತ್ತು.

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ

ಕನ್ನಡ ಧಾರಾವಾಹಿಗಳಾದ 'ಜೋಗುಳ', 'ಬಂದೇ ಬರುತಾವ ಕಾಲ', 'ಕಿನ್ನರಿ ಸಿರಿ' ಮುಂತಾದವುಗಳಲ್ಲಿ ನಟಿಸಿ ಗುರುತಿಸಿಕೊಂಡರು. ಕನ್ನಡದಲ್ಲಿ 'ಮನೆಮಗಳು' ಎಂದೇ ಖ್ಯಾತಿ ಪಡೆದರು.

ತೆಲುಗು ಡೆಬ್ಯೂಟ್​ ಬಳಿಕ ಹೆಸರು ಬದಲಾವಣೆ

ತೆಲುಗಿನ ಗುಪ್ಪೆದಂಥಾ ಮನಸ್ಸು ಧಾರಾವಾಹಿಯಲ್ಲಿ ಮಿಂಚಿದ ಬಳಿಕ ತೆಲುಗು ಚಿತ್ರರಂಗದಲ್ಲಿ ಬಿಜಿಯಾದರು. ನಿರ್ದೇಶಕ ಸುಕು ಪೂರ್ವಜ್ ಅವರೊಂದಿಗೆ 2ನೇ ಮದುವೆಯಾದ ನಂತರ ಜ್ಯೋತಿ ಪೂರ್ವಜ್ ಎಂದು ಹೆಸರು ಬದಲಿಸಿಕೊಂಡರು.

ಬೋಲ್ಡ್ ಅವತಾರ

ತೆಲುಗಿನಲ್ಲಿ ನಾಯಕಿಯಾಗಿ 'ಕಿಲ್ಲರ್' ಚಿತ್ರದ ಮೂಲಕ ಗಮನ ಸೆಳೆದರು. ಇದು ಸೈ-ಫೈ ಥ್ರಿಲ್ಲರ್ ಚಿತ್ರವಾಗಿದ್ದು, ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತೆಲುಗು ಸಿನಿಮಾ ಮತ್ತು ವೆಬ್ ಸೀರೀಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ.

ಫ್ಯಾನ್ ಫಾಲೋಯಿಂಗ್

ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಫಿಟ್‌ನೆಸ್, ಗ್ಲಾಮರಸ್ ಫೋಟೋಶೂಟ್‌ಗಳು ಮತ್ತು ಬೋಲ್ಡ್ ಲುಕ್‌ಗಳಿಂದಾಗಿ ಯುವಕರಲ್ಲಿ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.

ಬೋಲ್ಡ್​ ಫೋಟೋ

ಜ್ಯೋತಿ ಪೂರ್ವಜ್​ ಅವರು ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಎದೆಸೀಳು ಕಾಣವಂತಹ ಫೋಟೋ ಶೇರ್​ ಮಾಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ.