'ವಾಟ್ ಝುಮ್ಕಾ?' ಸಿಂಗರ್​​ ಜೊನಿತಾ ಗಾಂಧಿ

ಮಮತಾ

'ವಾಟ್ ಝುಮ್ಕಾ?' ಸಿಂಗರ್​​ ಜೊನಿತಾ ಗಾಂಧಿ

ಜೊನಿತಾ ಗಾಂಧಿ ಪ್ರಸಿದ್ಧ ಭಾರತೀಯ ಮೂಲದ ಕೆನಡಿಯನ್​ ಪ್ಲೇ ಬ್ಯಾಕ್​ ಸಿಂಗರ್​. ಬಾಲಿವುಡ್, ಕಾಲಿವುಡ್​ ಸೇರಿದಂತೆ ಕನ್ನಡ ಸಿನಿಮಾಗಳಿಗೂ ಹಾಡುಗಳನ್ನು ಹಾಡಿದ್ದಾರೆ. ದೆಹಲ್ಲಿಯಲ್ಲಿ ಜನಿಸಿದ ಇವರು ಕುಟುಂಬದ ಸಲುವಾಗಿ ಕೆನಡಾದ ಟೊರಾಂಟೋಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಎದುರಾಗಿತ್ತು.

ಜೊನಿತಾ ಸ್ಟೈಲಿಶ್ ಅಾವತಾರ

ಜೊನಿತಾ ಅವರು ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಪೋಟೋ ಶೂಟ್​ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಅದ್ಭುತ ಶೈಲಿ ಮತ್ತು ಫ್ಯಾಷನ್‌ ಅವರ ಫ್ಯಾನ್ಸ್​ ನಿದ್ದೆ ಕೆಡಿಸುವಂತೆ ಮಾಡಿದೆ.

ಯೆಶಾನಗುಲ' ಹಾಡಿನ ಬಿಡುಗಡೆ

ನಟ ನಾನಿ ಅಭಿನಯದ ಬಹುನಿರೀಕ್ಷಿತ 'ದ ಪ್ಯಾರಡೈಸ್' ಸಿನಿಮಾದ 'ಯೆಶಾನಗುಲ' ಹಾಡಿನ ಬಿಡುಗಡೆ ಸಮಾರಂಭಕ್ಕಾಗಿ ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.

ಆಲ್-ಬ್ಲ್ಯಾಕ್ ಲುಕ್‌ನಲ್ಲಿ ಗಾಯಕಿ ಜೊನಿತಾ

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ವೇದಿಕೆಯಲ್ಲಿ ನೇರ ಪ್ರದರ್ಶನ ನೀಡಿದ ಜೋನಿತಾ ಗಾಂಧಿ, ತಮ್ಮ ಸಿಗ್ನೇಚರ್ ಎನರ್ಜಿಯಿಂದ ವೇದಿಕೆಗೆ ಜೀವ ತುಂಬಿದರು. ಈ ವೇಳೆ ಅವರು ಧರಿಸಿದ್ದ ಆಕರ್ಷಕ ಆಲ್-ಬ್ಲ್ಯಾಕ್ ಲುಕ್ ಸಮಾರಂಭದ ವಿಶೇಷ ಆಕರ್ಷಣೆಯಾಯಿತು.

ಹೇಗಿದೆ ಧಿರಿಸು

ಸಂಕೀರ್ಣವಾದ ಗುಲಾಬಿ ಕಸೂತಿ ಹೊಂದಿರುವ ಶಿಯರ್ ಆಫ್-ಶೋಲ್ಡರ್ ಟಾಪ್ ಮತ್ತು ಲೂಸ್ ಕಪ್ಪು ಬಣ್ಣದ ಟ್ರೌಸರ್ ಧರಿಸಿದ್ದ ಅವರು ಕೈಯಲ್ಲಿ ಮ್ಯಾಚಿಂಗ್ ಹ್ಯಾಟ್ ಹಿಡಿದುಕೊಂಡಿದ್ದರು. ಕನಿಷ್ಠ ಆಭರಣಗಳು ಮತ್ತು ಸ್ಲೀಕ್ ಸೆಂಟರ್-ಪಾರ್ಟed ಹೇರ್ ಸ್ಟೈಲ್ ಅವರ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿತ್ತು.

ದಿ ಪ್ಯಾರಡೈಸ್​​ ಸಿನಿಮಾ ಪ್ರಚಾರ

'ದಿ ಪ್ಯಾರಡೈಸ್' ಚಿತ್ರದ ಎರಡನೇ ಹಾಡಿನ ಪ್ರಚಾರದ ಭಾಗವಾಗಿ ನಡೆದ ಈ ಲೈವ್ ಪರ್ಫಾರ್ಮೆನ್ಸ್‌ಗೆ ಅಭಿಮಾನಿಗಳಿಂದ ಕೂಡಿತ್ತು.

ಜೊನಿತಾ ಫ್ಯಾಷನ್​ಗೆ ಫ್ಯಾನ್ಸ್​ ಫಿದಾ

ಅನಿರುದ್ಧ್ ಮತ್ತು ಜೋನಿತಾ ಜೋಡಿಯ ಒಡನಾಟ ವೇದಿಕೆಯಲ್ಲಿ ವಿಶೇಷ ಮೆರುಗು ನೀಡಿತು. ಈ ಕಾರ್ಯಕ್ರಮದ ವಿಡಿಯೋಗಳು ಮತ್ತು ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಗಾಯನ ಹಾಗೂ ಫ್ಯಾಷನ್ ಪ್ರಜ್ಞೆಯನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ.

ಇದಯಂ ಮುರುಳಿ ಸಿನಿಮಾದಲ್ಲಿ ನಟನೆ

ಜೊನಿತಾ ಗಾಂಧಿ ಅವರು ಇದಯಂ ಮುರುಳಿ ಸಿನಿಮಾದಲ್ಲಿ ನಟಿಸಿದ್ದಾರೆ. ಫಹಾದ್​ ಫಾಸಿಲ್​ ಅವರಿಗೆ ಸಾಥ್​ ನೀಡಿದ್ದರು. ಈ ಸಿನಿಮಾದಲ್ಲಿ ನಟನ ಟೀಚರ್​ ಆಗಿ ಮಿಂಚಿದ್ದರು.