ಸಿಂಪಲ್​ ಆಗಿ ಮದ್ವೆಯಾದ 'ಟಾಮ್​ ಆಂಡ್​ ಜೆರ್ರಿ' ಚೈತ್ರಾ ರಾವ್

ಮಮತಾ

ಸಿಂಪಲ್​ ಆಗಿ ಮದ್ವೆಯಾದ 'ಟಾಮ್​ ಆಂಡ್​ ಜೆರ್ರಿ' ಚೈತ್ರಾ ರಾವ್

ಜೋಡಿ ಹಕ್ಕಿ ಸೀರಿಯಲ್​ ಮೂಲಕ ಕನ್ನಡಿಗರಿಗೆ ಪರರಿಚಯಸ್ಥರಾದ ಚೈತ್ರಾ ರಾವ್​ ಅವರು, ಸದ್ಯ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ಮತ್ತು ಥೀಯೇಟರ್​ ಆರ್ಟಿಸ್ಟ್​ ಕೌಶಿಕ್​ ಅವರ ಬಾಳಸಂಗಾತಿಯಾಗಿ ಸಪ್ತಪದಿ ತುಳಿದಿದ್ದಾರೆ.

ಸಿಂಪಲ್​ ಆಗಿ ಮದುವೆ

ಕರಾವಳಿಯ ಸುಂದರ ಸಂಪ್ರದಾಯದಂತೆ ಚೈತ್ರಾರಾವ್​ ಸಿಂಪಲ್​ ಆಗಿ ಹಸೆಮಣೆ ಏರಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿರುವ ಪಟಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಪಾಚಿ ಹಾಗೂ ಹಳದಿ ಬಣ್ಣದಲ್ಲಿರುವ ಸೀರೆಯುಟ್ಟಿ ಚೈತ್ರಾ ಕಂಗೊಳಿಸಿದ್ದಾರೆ.

ಜೋಡಿಹಕ್ಕಿ ಜಾನಕಿ ಟೀಚರ್​ ಚೈತ್ರಾ

ಜೋಡಿ ಹಕ್ಕಿ ಸೀರಿಯಲ್​ನಲ್ಲಿ ಜಾನಕಿ ಟೀಚರ್​ ಪಾತ್ರ ಮಾಡಿದ್ದ ಚೈತ್ರಾ ಅವರ ನಗು ಹಾಗೂ ನಟನೆಗೆ ಹೆಚ್ಚು ಹೆಸರು ಮಾಡಿದ್ದರು. ಪ್ರೇಮಿಗಳು ಇದ್ದರೆ ಹೀಗಿರಬೇಕು ಎನ್ನುವಂತೆ ಹೈಪ್​​ ಅನ್ನು ಈ ಸೀರಿಯಲ್​ ಸೃಷ್ಟಿ ಮಾಡಿತ್ತು. ಈ ದಾರವಾಹಿ ಮುಕ್ತಾಗೊಂಡಿದ್ದು ಅದೆಷ್ಟೋ ಜನರಿಗೆ ಬೇಸರವನ್ನುಂಟು ಮಾಡಿದ್ದು ಇದೆ.

ಕೌಶಿಕ್ ಯಾರು?

ಕೌಶಿಕ್​ ರಂಗಭೂಮಿ ಕಲಾವಿದ ಹಾಗೂ ನಿರ್ದೇಶಕ ಇನ್​ ದಿ ಮೂಡ್​ ಫಾರ್​ ಮ್ಯಾರೇಜ್​​, ದಿ ಮೇಕರ್ಸ್​, ಗೌರಿ, ಹಾರು ಬಾನೇರಿ, ಪ್ರೆಷರ್​ ಕುಕ್ಕರ್​ ಸಿನಿಮಾ ನಿರ್ದೇಶಿಸಿದ್ದಾರೆ. ಡಖವ್​​ ಎನ್ನುವ ನಾಟಕದಲ್ಲಿ ನಟಿಸಿದ್ದಾರೆ ಎನ್ನುವುದು ಅವರ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಪೋಸ್ಟರ್​ನಿಂದ ತಿಳಿದುಬಂದಿದೆ.

ಭಾರ್ಗವಿ ಎಲ್​ಎಲ್​ಬಿಯಲ್ಲಿ ನಟನೆ

ಇತ್ತೀಚೆಗೆ ಚೈತ್ರಾ ರಾವ್​ ಅವರು ಭಾರ್ಗವಿ ಎಲ್​ಎಲ್​ಬಿ ಧಾರವಾಹಿಯಲ್ಲಿ ನಟಿಸಿದ್ದರು. ಅವರ ನಟನೆಯಲ್ಲಿನ ಪಕ್ವತೆ ಯಾವುದೇ ಪಾತ್ರಕ್ಕೆ ಪಕ್ಕ ಜೀವ ತುಂಬುತ್ತಾರೆ ಎನ್ನುವುದಕ್ಕೆ ಈ ಸೀರಿಯಲ್​ ಉದಾಹರಣೆಯಾಗಿ ಹೊರಹೊಮ್ಮಿತ್ತು. ಈ ಧಾರವಾಹಿ ಕಳೆದ ಕೆಲವು ವಾರದ ಹಿಂದೆ ಅಂತ್ಯಗೊಂಡಿತ್ತು.

ಟಾಮ್​ ಅಂಡ್​ ಜೆರ್ರಿ

ಜೋಡಿ ಹಕ್ಕಿ ಮೂಲಕ ಕಿರುತರೆಗೆ ಕಾಲಿಟ್ಟ ಚೈತ್ರಾರಾವ್​ ಟಾಮ್​ ಅಂಡ್​ ಜೆರ್ರಿ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಸಿನಿಮಾದಲ್ಲಿನ ಅವರ ಡಿಫರೆಂಟ್​ ಲುಕ್​ ಸಾಕಷ್ಟು ಸದ್ದು ಮಾಡಿತ್ತು. ರಾಘವ್​ ವಿನಯ್​ ಶಿವಗಂಗೆ ನಿರ್ದೇಶನದ ಈ ಸಿನಿಮಾವನ್ನು ರಾಜು ಶೇರ್​ಗಾರ್​ ನಿರ್ಮಿಸಿದ್ದರು.

ಹಾಯಾಗಿದೆ ಹಿಟ್ ಕಂಡ ಹಾಡು

ಟಾಮ್​ ಅಂಡ್​ ಜೆರ್ರಿ ಸಿನಿಮಾದ ಹಾಯಾಗಿದೆ ಎದೆ ಒಳಗೆ ಝಲ್​ ಎಂದಿಗೆ ಈ ಘಳಿಗೆ ನೀ ನೋಡೋ ನೋಟವೆಲ್ಲ ಹಾಡು ಸಾಕಷ್ಟು ಹಿಟ್​ ಕಂಡಿತ್ತು. ಈಗಲೂ ಈ ಹಾಡನ್ನು ಕೇಳುತ್ತಲೇ ಗುನುಗುವುದು ಖಚಿತ

ಚೈತ್ರಾ ರಾವ್​ ನಟಿಸಿದ ಸಿನಿಮಾವಿದು

ಮಾಯಾ ಬಜಾರ್​​, ಸ್ತಬ್ಧ, ಟಾಮ್​ ಆಂಡ್​ ಜೆರ್ರಿ ಸಿನಿಮಾದಲ್ಲಿ ನಟಿಸಿದ್ದಾರೆ. ಜೋಡಿ ಹಕ್ಕಿ, ಚಕ್ರವ್ಯೂಹ, ರಾಗ ಅನುರಾಗ, ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನಲ್ಲಿ ಮುಖ್ಯ ಪಾತ್ರದಲ್ಲಿ ಚೈತ್ರಾ ನಟಿಸಿದ್ದಾರೆ.