ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಅವರು ದೇಸಿ ಲುಕ್‌ನಲ್ಲಿ ಮಿಂಚಿದ್ದು, ಅದಕ್ಕೆ ಸಂಬಂಧಿಸಿದ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪಡ್ಡೆ ಹುಡುಗರ ಕಣ್ಣುಗಳು ಅರಳುವಂತೆ ಮಾಡಿವೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ
ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಹೊಸ ಎಥ್ನಿಕ್ ಲುಕ್
ಜಾಹ್ನವಿ ಇತ್ತೀಚೆಗೆ ಹಂಚಿಕೊಂಡಿರುವ ಸಾಂಪ್ರದಾಯಿಕ ಉಡುಪಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ.
ಕಪ್ಪು ಬಣ್ಣದ ಲೆಹೆಂಗಾ
ಹೊಸ ಫೋಟೋಗಳಲ್ಲಿ ಜಾಹ್ನವಿ ಕಪೂರ್ ಅವರು ಕಪ್ಪು ಬಣ್ಣದ ಕಸೂತಿ ಕೆಲಸವಿರುವ ಲೆಹೆಂಗಾ ಧರಿಸಿದ್ದು, ಅದಕ್ಕೆ ಹೊಂದುವಂತಹ ಭಾರಿ ವಿನ್ಯಾಸದ ಮಲ್ಟಿಕಲರ್ ಬ್ಲೌಸ್ ತೊಟ್ಟು ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ.
ಸಾಂಪ್ರದಾಯಿಕ ಶೈಲಿಯ ಆಭರಣ
ತಮ್ಮ ಸಾಂಪ್ರದಾಯಿಕ ಲುಕ್ ಪೂರ್ಣಗೊಳಿಸಲು ಅವರು ಆಕರ್ಷಕ ಜುಮುಕಿಗಳು, ಬಳೆಗಳು, ಹಣೆಯ ಮೇಲೆ ಸಣ್ಣ ಬಿಂದಿ ಹಾಗೂ ಸಾಫ್ಟ್ ವೇವ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ.
ಚಿನ್ನದ ಬಣ್ಣದ ಹಿನ್ನೆಲೆ
ಚಿನ್ನದ ಬಣ್ಣದ ಬ್ಯಾಕ್‌ಡ್ರಾಪ್ ಎದುರು ನಿಂತು ಅವರು ಅತ್ಯಂತ ಆಕರ್ಷಕವಾಗಿ ಪೋಸ್ ನೀಡಿದ್ದು, ಈ ಫೋಟೋಗಳು ಹಬ್ಬದ ಸಂಭ್ರಮ ಹಾಗೂ ಗಾಂಭೀರ್ಯದ ಮಿಶ್ರಣದಂತೆ ಮೂಡಿಬಂದಿವೆ.
ಅಭಿಮಾನಿಗಳಿಂದ ಮೆಚ್ಚುಗೆ
ಸಾಂಪ್ರದಾಯಿಕ ಲುಕ್‌ನಲ್ಲಿ ತುಂಬಾ ಬೋಲ್ಡ್ ಆಗಿ ಮಿಂಚುತ್ತಿರುವ ಜಾಹ್ನವಿ ಕಪೂರ್ ಅವರ ಈ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ತಕ್ಷಣವೇ ಅಭಿಮಾನಿಗಳ ದಂಡು ಅದಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಸಿನಿಮಾ ಯಶಸ್ಸು ಮತ್ತು ಮುಂದಿನ ಚಿತ್ರ
ಇತ್ತೀಚೆಗೆ ಭಾರಿ ಯಶಸ್ಸು ಕಂಡ 'ಪೆದ್ದಿ' ಚಿತ್ರದ ಬ್ಲಾಕ್‌ಬಸ್ಟರ್ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಜಾಹ್ನವಿ, ಮುಂದಿನ ದಿನಗಳಲ್ಲಿ ಹಿಂದಿ ಚಿತ್ರವಾದ 'ಲಗ್ ಜಾ ಗಲೆ' ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.