ಕೇನ್ಸ್​ನಲ್ಲಿ ಜಾಕ್ವೆಲಿನ್​ ಹಾಟ್​ ಅವತಾರ

ಮಮತಾ

ಕೇನ್ಸ್​ನಲ್ಲಿ ಜಾಕ್ವೆಲಿನ್​ ಹಾಟ್​ ಅವತಾರ

ಕೇನ್ಸ್​ನಲ್ಲಿ ಭಾರತೀಯ ಸಿನಿಮಾ ರಂಗದ ನಟಿಯರು ತರಹೇವಾರಿ ರೀತಿಯಲ್ಲಿ ಗೌನ್​ ತೊಟ್ಟು ಮಿಂಚುತ್ತಿದ್ದಾರೆ. ಆದರೆ ಜಾಕ್ವೆಲಿನ್​ ಫರ್ನಾಂಡೀಸ್ ಮಾತ್ರ ತಮ್ಮದೇ ಶೈಲಿಯಲ್ಲಿ ಕಪ್ಪು ಬಣ್ಣದ ಸ್ಟ್ರಾಪ್​ಲೆಸ್​​ ಮಿನಿ ತೊಟ್ಟು, ಅದಕ್ಕೊಪ್ಪುವ ಆಭರಣ ಧರಿಸಿ ಹಾಟ್​ ಹಾಗಿ ಕಾಣಿಸಿಕೊಂಡಿದ್ದಾರೆ.

ಪಡ್ಡೆ ಹುಡುಗ್ರ ಮನದರಸಿ ಜಾಕ್ವೆಲಿನ್

ಜಾಕ್ವೆಲಿನ್​ ಅವರು 79ನೇ ಕೇನ್ಸ್​​ನ ಅತ್ಯಂತ ಐಷಾರಾಮಿ ಕಾರ್ಯಕ್ರಮಗಳಲ್ಲಿ ಒಂದಾದ ಮಿರಾಕಲ್ಸ್​ ಗಾಲಾಕ್ಕೆ ಆಹ್ವಾನಿತರಾದ ಮೊಟ್ಟ ಮೊದಲ ಭಾರತೀಯ ತಾರೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಚೋಪಾರ್ಡ್​ನ ರೆಡ್​ ಕಾರ್ಪೆಟ್​ ಹೈ ಜ್ಯುವೆಲ್ಲರಿ ಮತ್ತು ಕರೋಲಿನ್​ ಕೌಚರ್​ ಅನಾವರಣಗೊಳ್ಳುತ್ತದೆ. ಇದ್ರಲ್ಲಿ ಭಾರತವನ್ನು ಪ್ರತಿನಿಧಿಸಿ ವಜ್ರದ ಆಭರಣವನ್ನು ಪ್ರದರ್ಶಿಸಿದರು.

ವಜ್ರದ ಸರ, ಓಲೆ ಧರಿಸಿದ್ದ ಜ್ಯಾಕ್ವಲಿನ್

ಕ್ಯಾರೋಲಿನ್​ ಕೌಚರ್​ನ ಸ್ಟ್ರಾಪ್​ಲೆಸ್ ಬ್ಲಾಕ್​ ಸಿಲೂಯೆಟ್ ಡ್ರೆಸ್​​​ ಧರಿಸಿದ್ದ ಅವರು ಚಕ್ಕುಲಿಯಂತೆ ಸುರುಳಿ ಸುತ್ತಿದಂತೆ ಕಾಣುವ ವಜ್ರದ ಓಲೆ ಹಾಗೂ ಒಂದು ಮಣಿ ಕಟ್ಟಿನ ವಜ್ರದ ಸಣ್ಣ ನೆಕ್ಲೇಸ್, ಕೈಯಲ್ಲಿ ಸುರುಳಿ ಸುತ್ತಿದ ಬಳೆ ಅವರ ಸೌಂದರ್ಯವನ್ನು ಪೂರ್ಣಗೊಳಿಸಿತು.

ರಾರಾ ರಕ್ಕಮ್ಮ ಎಂದು ಕನ್ನಡದಲ್ಲಿ ಹಿಟ್

ಜಾಕ್ವೆಲಿನ್ ಅವರು 2022ರಲ್ಲಿ ರಿಲೀಸ್ ಆಗಿದ್ದ ವಿಕ್ರಾಂತ್​ ರೋಣ ಸಿನಿಮಾದ ರಾರಾ ರಕ್ಕಮ್ಮ ಸಿನಿಮಾದಲ್ಲಿ ಜನಪ್ರಿಯ ಹಾಡಾದ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡನ್ನು ಅನೂಪ್​ ಭಂಡಾರಿ ಬರೆದಿದ್ದು, ಅಜನೀಶ್ ಲೋಕ್​ನಾಥ್​ ಸಂಗೀತ ಸಂಯೋಜಿಸಿದ್ದರು.

ಜಾಕ್ವೆಲಿನ್​ ವಿರುದ್ಧದ ಆರೋಪ

200 ಕೋಟಿ ರೂ ಅಕ್ರಮ ಹಣ ವರ್ಗಾವಣೆ ಕೇಸ್​ ವಿಚಾರವಾಗಿ ಜಾಕ್ವೆಲಿನ್​ ಫರ್ನಾಂಡಿಸ್ ಅವರು ಸುದ್ದಿಯಲ್ಲಿದ್ದಾರೆ. ವಂಚಕ ಸುಕೇಶ್​ ಚಂದ್ರಶೇಖರ್​ ಜೊತೆಗಿನ ನಣಟಿನ ಕಾರಣಕ್ಕೆ ಅವರು ಇಂದಿಗೂ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಜಾಕ್ವೆಲಿನ್​ ಸಿನಿ ಮಯಣ

ಹೌಸ್​ಫುಲ್​ 1,2,3 ಭಾಗಗಳಲ್ಲಿ ಜಾಕ್ವೆಲಿನ್​ ನಟಿಸಿದ್ದಾರೆ. ಮರ್ಡರ್​2 ಹಾಗೂ ಕಿಕ್​​​ ವೆಲ್ಕಂ ಟು ದಿ ಜಂಗಲ್​, ರೇಸ್​2, ಎ ಜೆಂಟಲ್​ ಮೆನ್​, ರಾಯ್​​, ರಾಮ್​ ಸೇತಿ, ಬ್ರದರ್ಸ್​​, ಬಾಗಿ, ಸಾಹೋ, ಸೆಲ್ಫಿ ಸಿನಿಮಾದಲ್ಲಿ ಮಿಂಚಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಅವರ ರಾರಾ ರಕ್ಕಮ್ಮ ಹಾಡಿನಿಂದ ಚಿರಪರಿಚಿತರಾದರು.