ಗಂಡನ ಮನೆಯಲ್ಲಿ ಅತ್ತೆ-ಮಾವ ಮತ್ತು ಪತಿಯ ಪ್ರೀತಿ ಗಳಿಸುವುದು ಈಗ ಸುಲಭ!

ಸವಿನಾ ನಾಯ್ಕ

ಗಂಡನ ಮನೆಯಲ್ಲಿ ಅತ್ತೆ-ಮಾವ ಮತ್ತು ಪತಿಯ ಪ್ರೀತಿ ಗಳಿಸುವುದು ಈಗ ಸುಲಭ!

ಮದುವೆಯಾಗಿ ಹೊಸ ಮನೆಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಒಂದು ಸವಾಲೇ ಸರಿ. ಆದರೆ, ಅಲ್ಪ ಪ್ರಯತ್ನ ಮತ್ತು ತಾಳ್ಮೆಯಿಂದ ಎಲ್ಲರ ಮನ ಗೆಲ್ಲಬಹುದು.

ಪತಿಯನ್ನು ಗೌರವಿಸಿ!

ಪತಿಯೊಂದಿಗೆ ಹೆಚ್ಚು ಸಮಯ ಕಳೆಯುವುದು ಸಹಜ, ಆದರೆ ಮನೆಯ ಉಳಿದ ಸದಸ್ಯರೊಂದಿಗೂ (ಅತ್ತೆ, ಮಾವ, ನಾದಿನಿ) ದಿನದಲ್ಲಿ ಸ್ವಲ್ಪ ಸಮಯ ಹರಟೆ ಹೊಡೆಯಲು ಮೀಸಲಿಡಿ.

ಮನೆಯ ಪದ್ಧತಿಗಳನ್ನು ತಿಳಿದುಕೊಳ್ಳಿ!

ಹೊಸ ಮನೆಗೆ ಹೋಗುವಾಗ ನಿಮ್ಮ ಮನೆಯ ಸಂಪ್ರದಾಯ ಅಥವಾ ಅಲ್ಲಿನ ರೀತಿ-ನೀತಿಗಳನ್ನೇ ನಿರೀಕ್ಷಿಸಬೇಡಿ. ಆ ಮನೆಯ ಪದ್ಧತಿಗಳನ್ನು ಮುಕ್ತ ಮನಸ್ಸಿನಿಂದ ಕಲಿಯಲು ಪ್ರಯತ್ನಿಸಿ.

ಕೆಲಸದ ಜವಾಬ್ದಾರಿ ತೆಗೆದುಕೊಳ್ಳಿ!

ಮನೆಯ ಕೆಲಸಗಳನ್ನು ಕೇವಲ ಜವಾಬ್ದಾರಿ ಎಂದು ಭಾವಿಸದೆ, ಎಲ್ಲರೊಂದಿಗೆ ಸೇರಿ ಮಾಡುವುದನ್ನು ರೂಢಿಸಿಕೊಳ್ಳಿ. ವಿಶೇಷವಾಗಿ ಅಡುಗೆ ಮನೆ ಅಥವಾ ಮನೆ ಅಲಂಕಾರದಲ್ಲಿ ಅತ್ತೆಯವರಿಗೆ ಸಹಾಯ ಮಾಡುವುದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಮನೆಯವರ ಸ್ವಭಾವವನ್ನು ಅರ್ಥಮಾಡಿಕೊಳ್ಳಿ!

ನಿಮ್ಮ ಮತ್ತು ನಿಮ್ಮ ಹೊಸ ಕುಟುಂಬದ ನಡುವೆ ಗಂಡನೇ ಪ್ರಮುಖ ಕೊಂಡಿ. ಮನೆಯವರ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಪತಿಯ ಸಹಾಯ ಕೇಳಿ. ಜಗಳವಾಡುವ ಬದಲು ಗಂಡನ ಮೂಲಕ ಸೌಮ್ಯವಾಗಿ ಬಗೆಹರಿಸಿಕೊಳ್ಳುವುದು ಉತ್ತಮ. ನಿಮಗೆ ಏನಾದರೂ ಇಷ್ಟವಾಗದಿದ್ದರೆ ಅಥವಾ ಅರ್ಥವಾಗದಿದ್ದರೆ ಮನಸ್ಸಿನಲ್ಲೇ ಇಟ್ಟುಕೊಳ್ಳದೆ, ಮೃದುವಾದ ಮಾತಿನ ಮೂಲಕ ವ್ಯಕ್ತಪಡಿಸಿ.

ವಿವಾದಗಳಿಂದ ದೂರವಿರಿ

ಮನೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದಾಗ ತಕ್ಷಣ ಪ್ರತಿಕ್ರಿಯಿಸಬೇಡಿ. ಸಮಾಧಾನದಿಂದ ವಿಷಯವನ್ನು ತಿಳಿದರೆ ನಿಮ್ಮ ಪ್ರೌಢಿಮೆ ಎಲ್ಲರಿಗೂ ಇಷ್ಟವಾಗುತ್ತದೆ.