ನಮ್ಮ ಹಿರಿಯರು ಅಂದಿನಿಂದಲೂ ಕೂದಲಿಗೆ ಎಣ್ಣೆ ಹಚ್ಚುವ ಅಭ್ಯಾಸವನ್ನು ಪಾಲಿಸಿಕೊಂಡು ಬಂದಿದ್ದಾರೆ. ಕೂದಲಿನ ಆರೈಕೆ ಹಾಗೂ ಪೋಷಣೆ ಒದಗಿಸಲು ನೆತ್ತಿಯ ಮೇಲೆ ಎಣ್ಣೆ ಬೀಳಬೇಕು ಎಂಬುದು ಅವರ ಮಾತು.
ವೈದ್ಯರು ಈ ವಾಡಿಕೆ ತಳ್ಳಿಹಾಕಿದ್ದಾರೆ
ವಾರದಲ್ಲಿ ಒಂದರಿಂದ ಎರಡು ಬಾರಿ ಎಣ್ಣೆ ಹಚ್ಚುವುದರಿಂದ ಕೂದಲು ಬಲವಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ ಎಂದು ಹಲವರು ಹೇಳ್ತಾರೆ. ಆದರೆ, ಈ ಮಾತು ನಿಜವೇ? ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ. ವೈದ್ಯರು ಈ ವಾಡಿಕೆ ಅಥವಾ ಮಾತುಗಳನ್ನು ತಳ್ಳಿಹಾಕಿದ್ದಾರೆ.
ಕೂದಲಿನ ಆರೋಗ್ಯವು ನಮ್ಮ ಜೀನ್ಸ್
ಎಣ್ಣೆ ಹಚ್ಚುವುದರಿಂದ ಕೂದಲು ಬೆಳೆಯುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ. ವಾಸ್ತವವಾಗಿ, ಕೂದಲಿನ ಆರೋಗ್ಯವು ನಮ್ಮ ಜೀನ್ಸ್, ಸೇವಿಸುವ ಆಹಾರ ಮತ್ತು ಜೀವನಶೈಲಿಯ ಮೇಲೆ ಅವಲಂಬಿಸಿರುತ್ತದೆ ಎನ್ನಲಾಗಿದೆ.
ಎಣ್ಣೆ ಕೂದಲಿಗೆ ನೈಸರ್ಗಿಕ ಕಂಡಿಷನರ್?
ಹಳೆಯ ತಲೆಮಾರಿನವರ ಉತ್ತಮ ಕೂದಲಿಗೆ ಕಾರಣವೆಂದರೆ ಅವರು ತಿನ್ನುತ್ತಿದ್ದ ಉತ್ತಮ ಗುಣಮಟ್ಟದ ಆಹಾರ. ಎಣ್ಣೆ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಮಾತ್ರ ಕೆಲಸ ಮಾಡುತ್ತದೆ. ಅದನ್ನು ಹೊಳೆಯುವಂತೆ, ಸಿಕ್ಕು ಮುಕ್ತವಾಗಿ ಮತ್ತು ಮೃದುವಾಗಿಸುತ್ತದೆ.
ಎಣ್ಣೆ ಹಚ್ಚಿದರೆ ಡ್ಯಾಂಡ್ರಫ್....
ತಲೆಹೊಟ್ಟು ಇರುವವರು, ಎಣ್ಣೆ ಹಚ್ಚಿದರೆ, ಡ್ಯಾಂಡ್ರಫ್, ತುರಿಕೆ ಸಮಸ್ಯೆಗಳು ಉಲ್ಬಣಿಸುತ್ತದೆ. ಅಲ್ಲದೆ, ಮುಖದ ಮೇಲೆ ಮೊಡವೆ ಮತ್ತು ಸೆಬೊರ್ಹೆಕ್ ಡರ್ಮಟೈಟಿಸ್‌ನಂತಹ ತೊಂದರೆ ಇರುವವರು ಎಣ್ಣೆಯಿಂದ ದೂರವಿರುವುದು ಸೂಕ್ತ ಎನ್ನಲಾಗಿದೆ