ಪೌಷ್ಟಿಕ ಆಹಾರ ಸೇವಿಸಿ !
ಪ್ರತಿದಿನ ಅರ್ಧ ಲೀಟರ್ ಹಾಲು ಅಥವಾ ಮೊಸರು, ಎರಡು ಕಪ್ ತರಕಾರಿಗಳು, ಎರಡು ರೀತಿಯ ಹಣ್ಣುಗಳು ಮತ್ತು ಮೊಳಕೆಯೊಡೆದ ಬೀಜಗಳನ್ನು ನಿಮ್ಮ ಆಹಾರದ ಭಾಗವಾಗಿಸಿ. ಸಿಹಿತಿಂಡಿಗಳು ಮತ್ತು ಜಂಕ್ ಫುಡ್‌ಗಳಿಂದ ದೂರವಿರಬೇಕು. ಇದರೊಂದಿಗೆ, ನೀವು ದಿನಕ್ಕೆ ಕನಿಷ್ಠ ಎರಡೂವರೆ ರಿಂದ ಮೂರು ಲೀಟರ್ ನೀರು ಕುಡಿಯಬೇಕು. ರಾಗಿ, ಜೋಳ, ಸಜ್ಜೆ, ಸಣ್ಣ ಧಾನ್ಯಗಳ ಆಹಾರ ಸೇವಿಸಿ. ದಾಳಿಂಬೆ, ಪಪ್ಪಾಯಿ, ಕಲ್ಲಂಗಡಿ ಸೇವಿಸಿದರೆ, ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಸೌಂದರ್ಯವನ್ನು ಸುಧಾರಿಸುತ್ತದೆ.