ತೆಂಗಿನಕಾಯಿ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟ. ಇದು ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ತೆಂಗಿಕಾಯಿ ಯಾವ ವರ್ಗಕ್ಕೆ ಸೇರುತ್ತೆ?
ತೆಂಗಿನಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಲಾಭಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ತೆಂಗಿಕಾಯಿ ಹಣ್ಣೋ? ಅಥವಾ ತರಕಾರಿಯೋ ಎಂದು ಕೇಳಿದರೆ ಬಹುತೇಕರಿಗೆ ತಿಳಿದಿಲ್ಲ.
ಕಾಯಿ ಅಂತಿದ್ದರು ಕಾಯಿಯಲ್ಲ
ತೆಂಗಿನಕಾಯಿ ಹಣ್ಣು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅದರ ಹೆಸರಿನಲ್ಲಿ "ಕಾಯಿ" ಎಂಬ ಪದವನ್ನು ಹೊಂದಿದ್ದರೂ ಸಹ ತೆಂಗಿನಕಾಯಿ ಒಂದು ಹಣ್ಣು ಹೊರತು ಕಾಯಿ ಅಥವಾ ತರಕಾರಿಯಲ್ಲ.
ತೆಂಗಿನಕಾಯಿ ಹಣ್ಣು
ವಾಸ್ತವವಾಗಿ ತೆಂಗಿನಕಾಯಿಯು ಡ್ರೂಪ್ಸ್ ಎಂದು ಕರೆಯಲ್ಪಡುವ ಉಪವರ್ಗದ ಅಡಿಯಲ್ಲಿ ಬರುತ್ತದೆ. ಇದು ಗಟ್ಟಿಯಾದ ಚಿಪ್ಪಿನಿಂದ ಸುತ್ತುವರಿದ ಆಂತರಿಕ ತಿರುಳು ಮತ್ತು ಬೀಜವನ್ನು ಹೊಂದಿರುವ ಹಣ್ಣುಗಳು ಎಂದು ವ್ಯಾಖ್ಯಾನಿಸಲಾಗಿದೆ.
ಇವುಗಳ ಅಡಿಯಲ್ಲಿ ಬರುತ್ತೆ
ಪೀಚ್, ಪೇರಳೆ, ವಾಲ್ನಟ್ಸ್ ಮತ್ತು ಬಾದಾಮಿಗಳಂತಹ ವಿವಿಧ ಹಣ್ಣುಗಳ ವರ್ಗದ ಅಡಿಯಯಲ್ಲಿ ತೆಂಗಿನಕಾಯಿಯು ಸಹ ಬರುತ್ತದೆ.