ತಾಜ್ ಮಹಲ್, ಆಗ್ರಾ: ತಾಜ್ ಮಹಲ್ ಭಾರತದ ಉತ್ತರ ಪ್ರದೇಶ ರಾಜ್ಯದ ಆಗ್ರಾ ನಗರದಲ್ಲಿದೆ. ಇದನ್ನು ಮೊಘಲ್ ಚಕ್ರವರ್ತಿ ಷಾಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ಕಟ್ಟಿಸಿದನು. ಈ ಜಾಗ ಅದರ ವಿನ್ಯಾಸಕ್ಕೆ ಫೇಮಸ್.
ಲೇಹ್-ಲಡಾಖ್
ಮಂಜುಗಡ್ಡೆಯಿಂದ ಆವೃತವಾದ ಪರ್ವತಗಳು ಮತ್ತು ಬೆರಗುಗೊಳಿಸುವ ನೋಟಗಳಿಗೆ ಫೇಮಸ್ ಆದ ಲೇಹ್-ಲಡಾಖ್ ಭಾರತದ ಬೆಸ್ಟ್ ಟೂರಿಸ್ಟ್ ತಾಣಗಳಲ್ಲಿ ಒಂದು. ಈ ಜಾಗ ಪ್ರಕೃತಿ ಪ್ರಿಯರಿಗೆ ಸ್ವರ್ಗದಂತಿದೆ.
ಗೋವಾ
ಗೋವಾದಲ್ಲಿ ಹಲವಾರು ಸುಂದರ ಸಮುದ್ರ ತೀರಗಳ ಜೊತೆಗೆ ಸಾಂಸ್ಕೃತಿಕ ಅನುಭವಗಳ ಕಾಂಬಿನೇಷನ್ ಇದೆ. ಇದರ ಜೊತೆಗೆ ಗೋವಾದ ಕ್ಲಬ್, ಬಾರ್, ರೆಸ್ಟೋರೆಂಟ್ ಮತ್ತು ಕ್ಯಾಸಿನೊಗಳಿಗೆ ಸಹ ಫೇಮಸ್.
ಕೇರಳ ಹಿನ್ನೀರು
ಕೇರಳ ಹಿನ್ನೀರು, ದಕ್ಷಿಣದ ವೆನಿಸ್ ಅಂತಾನೂ ಕರೆಯಲ್ಪಡುತ್ತದೆ. ಕೇರಳದ ಕರಾವಳಿ ತೀರದಲ್ಲಿರುವ ಸರೋವರಗಳು, ಕಾಲುವೆಗಳ ಜಾಲ ಅರಬ್ಬೀ ಸಮುದ್ರದ ತೀರಕ್ಕೆ ಸೇರುತ್ತದೆ.
ಹಂಪಿ, ಕರ್ನಾಟಕ
ಹಂಪಿ, ಕರ್ನಾಟಕ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಸ್ಥಳ, ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಅಂತ ಗುರುತಿಸಿದೆ. ಹಂಪಿ ತನ್ನ ಪ್ರಾಚೀನ ದೇವಾಲಯಗಳು ಮತ್ತು ಅವಶೇಷಗಳಿಗೆ ಹೆಸರುವಾಸಿಯಾಗಿದೆ.
ಜೈಪುರ, ರಾಜಸ್ಥಾನ
ಗುಲಾಬಿ ನಗರ ಅಂತ ಕರೆಯಲ್ಪಡುವ ಜೈಪುರ ತನ್ನ ಐತಿಹಾಸಿಕ ಅರಮನೆಗಳಿಗೆ ಫೇಮಸ್. ಇಲ್ಲಿನ ಹವಾ ಮಹಲ್ ಮತ್ತು ಸಿಟಿ ಪ್ಯಾಲೇಸ್ ಜೈಪುರವನ್ನು ಇನ್ನಷ್ಟು ಸುಂದರವಾಗಿಸುತ್ತವೆ.