ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟರ್ ರಾಧಾ ಯಾದವ್, ಕಡಲ ತೀರದಲ್ಲಿ ಆನಂದಿಸುತ್ತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಣೆ
ರಾಧಾ ಯಾದವ್ ಅವರು 2000, ಏಪ್ರಿಲ್ 21ರಂದು ಮುಂಬೈನಲ್ಲಿ ಜನಿಸಿದರು. ನಿನ್ನೆಯಷ್ಟೇ ತಮ್ಮ 26ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಜೆಮಿಮಾ ರೋಡ್ರಿಗಸ್, ಶ್ರೇಯಾಂಕಾ ಪಾಟೀಲ್ ಸೇರಿದಂತೆ ಹಲವರು ಶುಭಕೋರಿದ್ದಾರೆ.
ಯುಪಿ ಕುವರಿ
ರಾಧಾ ಯಾದವ್ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಮುಂಬೈನ ಕಾಂದಿವಲಿಯಲ್ಲಿ ಬೆಳೆದರು. ಇವರ ತಂದೆ ತರಕಾರಿ ಮಾರಾಟಗಾರರಾಗಿದ್ದು, ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಆಟದ ಶೈಲಿ
ರಾಧಾ ಯಾದವ್ ಓರ್ವ ಅದ್ಭುತ ಎಡಗೈ ಸ್ಪಿನ್ ಬೌಲರ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟರ್. ಮೈದಾನದಲ್ಲಿ ಇವರು ಅತ್ಯಂತ ಚುರುಕಾದ ಫೀಲ್ಡರ್ ಕೂಡ ಹೌದು. ಒಟ್ಟಾರೆ ಓರ್ವ ಅದ್ಭುತ ಆಲ್ರೌಂಡರ್.
ಅಂತಾರಾಷ್ಟ್ರೀಯ ಪದಾರ್ಪಣೆ
ಕೇವಲ 17ನೇ ವಯಸ್ಸಿನಲ್ಲಿ (2018ರಲ್ಲಿ) ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2021ರಲ್ಲಿ ಏಕದಿನ (ODI) ಕ್ರಿಕೆಟ್‌ಗೆ ಕಾಲಿಟ್ಟರು.
ಗುಜರಾತ್ ತಂಡದ ಮೊದಲ ಆಟಗಾರ್ತಿ
ಇವರು ಮುಂಬೈನಲ್ಲಿ ಜನಿಸಿದರೂ ದೇಶೀಯ ಕ್ರಿಕೆಟ್‌ನಲ್ಲಿ ಬರೋಡಾ ಪರ ಆಡುತ್ತಿದ್ದರು. ಈ ಮೂಲಕ ಗುಜರಾತ್‌ನ ದೇಶೀಯ ತಂಡದಿಂದ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆ ಇವರದು.
ವಿಶ್ವಕಪ್ ಸಾಧನೆ
2018ರ ಟಿ20 ವಿಶ್ವಕಪ್‌ನಲ್ಲಿ 8 ವಿಕೆಟ್‌ಗಳನ್ನು ಪಡೆಯುವ ಮೂಲಕ ಜಂಟಿ ಅಗ್ರ ವಿಕೆಟ್ ಟೇಕರ್ ಆಗಿದ್ದರು. ಅಲ್ಲದೆ, 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು.
ಟಿ20 ದಾಖಲೆ
ಭಾರತದ ಪರ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದ ಕೆಲವೇ ಕೆಲವು ಆಟಗಾರ್ತಿಯರಲ್ಲಿ ಇವರು ಒಬ್ಬರು.
WPL ಮತ್ತು ಫ್ರಾಂಚೈಸಿ ಕ್ರಿಕೆಟ್
ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಇವರು, ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೇರಿಕೊಂಡಿದ್ದಾರೆ.
ಉತ್ತಮ ಪ್ರದರ್ಶನ
2026ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಗುಜರಾತ್ ಜೈಂಟ್ಸ್ ವಿರುದ್ಧ 47 ಎಸೆತಗಳಲ್ಲಿ 66 ರನ್ ಬಾರಿಸಿ ತಮ್ಮ ಬ್ಯಾಟಿಂಗ್ ಶಕ್ತಿಯನ್ನೂ ಪ್ರದರ್ಶಿಸಿದ್ದಾರೆ.
ರಾಧಾ ಯಾದವ್ ಫಿಟ್ನೆಸ್
ಪ್ರಸ್ತುತ ರಾಧಾ ಯಾದವ್ ಹಂಚಿಕೊಂಡಿರುವ ಫೋಟೋಗಳಲ್ಲಿ ಕಡಲ ತೀರದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಸ್ವಿಮ್ ಶೂಟ್ನಲ್ಲಿ ರಾಧಾ ಯಾದವ್ ಅವರ ಫಿಟ್ನೆಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.