ಟಗರುಪುಟ್ಟಿ ಶ್ರೇಯಾಂಕಾ ಕ್ಯೂಟ್​ನೆಸ್​!

ರಮೇಶ್​ ಕುಮಾರ್​​ ಬಿ ಎಡಮೋಳೆ

ಟಗರುಪುಟ್ಟಿ ಶ್ರೇಯಾಂಕಾ ಕ್ಯೂಟ್​ನೆಸ್​!

ಟೀಮ್ ಇಂಡಿಯಾ ಯುವ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಕಪ್ಪು ಬಣ್ಣದ ತುಂಡುಡುಗೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಫ್ಯಾನ್ಸ್​ ಫಿದಾ

ತುಂಡುಡುಗೆಯಲ್ಲಿ ಶ್ರೇಯಾಂಕಾ ಅವರ ಸಹಜ ಸೌಂದರ್ಯವನ್ನು ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಕೊಂಡಾಡುತ್ತಿದ್ದಾರೆ.

ಕಲಬುರಗಿ ಕುವರಿ

ಶ್ರೇಯಾಂಕಾ ಪಾಟೀಲ್ ಅವರು ಜುಲೈ 31, 2002 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ಇವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದವರು.

ಆಟದ ಶೈಲಿ

ಇವರು ಬಲಗೈ ಆಫ್-ಬ್ರೇಕ್ ಬೌಲಿಂಗ್ ಹಾಗೂ ಬಲಗೈ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಪ್ರಮುಖ ಆಲ್-ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

ಡಬ್ಲ್ಯುಪಿಎಲ್ ಸಾಧನೆ

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಟಗಾರ್ತಿಯಾಗಿದ್ದು, 2024ರ WPL ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು 'ಪರ್ಪಲ್ ಕ್ಯಾಪ್' ಮುಡಿಗೇರಿಸಿಕೊಂಡ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಪದಾರ್ಪಣೆ

2023ರ ಡಿಸೆಂಬರ್‌ನಲ್ಲಿ ಭಾರತೀಯ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಇವರು, ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.

ವಿದೇಶಿ ಲೀಗ್ ಅನುಭವ

ಭಾರತದ ಹೊರತಾಗಿ ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (WCPL) ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪರವಾಗಿ ಆಡಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ

ಕ್ರಿಕೆಟ್ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಶ್ರೇಯಾಂಕಾ, ತಮ್ಮ ಸ್ಟೈಲಿಶ್ ಫೋಟೋಗಳು ಮತ್ತು ರೀಲ್ಸ್ ಮೂಲಕ ಕ್ರೀಡಾಭಿಮಾನಿಗಳ ನಡುವೆ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.