ಹರಿಣರ ಎದುರು ಸೋಲುಂಡ ಭಾರತ!

ಭೂಮಿಕಾ ವಿ. ನಾಥ್​​​

ಹರಿಣರ ಎದುರು ಸೋಲುಂಡ ಭಾರತ!

ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 30 ರನ್​ಗಳಿಂದ ಹೀನಾಯ ಸೋಲು ಅನುಭವಿಸಿತು.

ಬ್ಯಾಟಿಂಗ್ ಪ್ರದರ್ಶನ ವಿಫಲ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಒಟ್ಟು 189 ರನ್ ಗಳಿಸಿತು. ಆದರೆ, ಒಬ್ಬ ಬ್ಯಾಟ್ಸ್‌ಮನ್ ಕೂಡ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಅಗ್ರ ಕ್ರಮಾಂಕವು ಅತ್ಯಂತ ಕಳಪೆ ಪ್ರದರ್ಶನ ನೀಡಿತು. ತಂಡದಲ್ಲಿರುವ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವಂತೆ ತೋರಿತು.

ಸ್ಪಿನ್​ಗೆ ಪರದಾಟ

ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕವು ಸ್ಪಿನ್‌ ವಿರುದ್ಧ ಬ್ಯಾಟ್ ಮಾಡಲು ಎಡವಿತು. ಯಾವುದೇ ಬ್ಯಾಟ್ಸ್‌ಮನ್ ಸ್ಪಿನ್ನರ್‌ಗಳನ್ನು ಪರಿಣಾಮಕಾರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಪಂತ್ ಮೊದಲ ಎಸೆತದಿಂದಲೇ ಬ್ಯಾಟ್​ ಮಾಡಲು ಪರದಾಡಿದ್ದು ಸ್ಪಷ್ಟವಾಗಿ ಕಾಣಿಸಿತು.

ಗಿಲ್ ಅನುಪಸ್ಥಿತಿ

ಕ್ಯಾಪ್ಟನ್ ಶುಭಮನ್​ ಗಿಲ್ ಅವರಿಗಾದ ಕುತ್ತಿಗೆ ನೋವು, ಅವರನ್ನು ಪಂದ್ಯದಲ್ಲಿ ಮುಂದುವರಿಯದಂತೆ ತಡೆಯಿತು. ಅವರ ಅನುಪಸ್ಥಿತಿ ತಂಡದ ಸೋಲಿಗೆ ಒಂದು ಪ್ರಮುಖ ಕಾರಣವಾಯಿತು ಎಂದರೆ ತಪ್ಪಾಗಲಾರದು. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ ನಾಯಕ ಗಿಲ್ ಕೇವಲ ಮೂರು ಎಸೆತಗಳನ್ನು ಮಾತ್ರ ಆಡಿದರು.