ಈ ಲಕ್ಷಣ ನಿರ್ಲಕ್ಷಿಸಿದರೆ ಜೀವಕ್ಕೆ ಆಪತ್ತು! ಎಚ್ಚರ..

ಭಾನುಪ್ರಿಯ ಡಿ.ಕೆ

ಈ ಲಕ್ಷಣ ನಿರ್ಲಕ್ಷಿಸಿದರೆ ಜೀವಕ್ಕೆ ಆಪತ್ತು! ಎಚ್ಚರ..

ಸಾಮಾನ್ಯವಾಗಿ ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರಗಳನ್ನು ಸೇವಿಸಿದಾಗ ಆದಷ್ಟು ಜನರು ಎದೆಯುರಿ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದು ಸಾಮಾನ್ಯವಾಗಿ ರಾತ್ರಿ ಮಲಗಿದಾಗ ಅಥವಾ ಊಟ ಆದ ನಂತರ ಆಗುವ ಪ್ರಕ್ರಿಯೆ ಆಗಿದೆ.

ಆಹಾರದಲ್ಲಿ ಬದಲಾವಣೆಗಳು

ಪದೇ ಪದೇ ಎದೆಯುರಿಯನ್ನು ಅನುಭವಿಸುವಂತಹ ಮನುಷ್ಯನು ಅತಿಯಾದ ಖಾರವಾದ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ ಹಣ್ಣು, ತರಕಾರಿ, ಧಾನ್ಯಗಳನ್ನು ಸೇವಿಸಿ. ಇದು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಕ್ಷಣವೇ ಮಲಗಬೇಡಿ

ಊಟ ಮಾಡಿದ ನಂತರ ತಕ್ಷಣವೇ ಮಲಗಬೇಡಿ. ಕನಿಷ್ಟ 2-3 ಗಂಟೆಗಳ ಕಾಲ ಏನಾದರೂ ಕೆಲಸ ಮಾಡುತ್ತಿರಿ. ಇದು ಜೀರ್ಣಾಂಗ ವ್ಯವಸ್ಥೆಯು ಕಾರ್ಯವನ್ನು ಮಾಡಲಿ. ಇಲ್ಲದಿದ್ದರೆ, ಸೇವಿಸಿದ ಆಹಾರ ಜೀರ್ಣವಾಗದೇ ಸಮಸ್ಯೆಯನ್ನು ಉಂಟು ಮಾಡುತ್ತದೆ.

ತಲೆಯನ್ನು ಮೇಲಕ್ಕೆತ್ತಿ ಮಲಗಿರಿ

ಹಾಸಿಗೆಯ ಮೇಲೆ ಮಲಗಿದಾಗ ಆದಷ್ಟು ತಲೆಯನ್ನು ಮೇಲಕ್ಕೆ ಎತ್ತಿ ಮಲಗಿರಿ. ಈ ವೇಳೆ ದಿಂಬುಗಳ ಸಹಾಯವನ್ನು ಪಡೆಯಿರಿ. ಹೀಗೆ ಮಾಡುವುದರಿಂದ ರಾತ್ರಿಯ ಹಿಮ್ಮುಖ ಹರಿವನ್ನು ತಡೆಯಲು ಸಹಾಯ ಮಾಡುತ್ತದೆ.

ಆಲ್ಕೋಹಾಲ್ ನಿಲ್ಲಿಸಿ

ಆಲ್ಕೋಹಾಲ್ ಮತ್ತು ಕೆಫೀನ್ ಎರಡೂ ನಿಮ್ಮ ದೇಹಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಆದರಿಂದ ನಿಮ್ಮ ಆಹಾರ ಪದ್ಧತಿಯಲ್ಲಿ ಇವುಗಳನ್ನು ಕಡಿಮೆ ಮಾಡಿ ಇಲ್ಲದಿದ್ದರೆ, ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಅನುಭವಿಸಬಹುದು.

ಧೂಮಪಾನ ಸೇವನೆ ನಿಲ್ಲಿಸಿ

ನೀವು ಅತಿಯಾದ ಧೂಮಪಾನ ವ್ಯಸನಿಗಳಾಗಿದ್ದರೆ, ಹೇಗಾದರೂ ಮಾಡಿ ಆ ಅಭ್ಯಾಸವನ್ನು ನಿಲ್ಲಿಸಿ. ಏಕೆಂದರೆ ಇದು ಅತಿಯಾಗಿ ಎದೆಯುರಿಯುವಂತೆ ಮಾಡಿ, ಆರೋಗ್ಯವನ್ನು ಹದಗೆಡಿಸುತ್ತದೆ.