ತಪ್ಪು ರೀತಿಯಲ್ಲಿ ಭಾರ ಎತ್ತುವುದು
ನೆಲದ ಮೇಲಿರುವ ಭಾರವಾದ ವಸ್ತುಗಳನ್ನು ಎತ್ತುವಾಗ ನೇರವಾಗಿ ಸೊಂಟವನ್ನು ಬಗ್ಗಿಸಿ ಎತ್ತುವುದರಿಂದ ಬೆನ್ನಿನ ಸ್ನಾಯುಗಳ ಮೇಲೆ ಹಠಾತ್ ಒತ್ತಡ ಬಿದ್ದು, ನರಗಳು ಜಖಂಗೊಳ್ಳಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಮೊದಲು ಮಂಡಿಯೂರಿ ಕುಳಿತುಕೊಂಡು ವಸ್ತುವನ್ನು ದೇಹಕ್ಕೆ ಹತ್ತಿರವಾಗಿ ಹಿಡಿದು, ಕಾಲಿನ ಬಲದಿಂದ ಮೇಲೆ ಏಳಬೇಕು. ನೇರವಾಗಿ ಸೊಂಟ ಬಗ್ಗಿಸಬಾರದು.