39ನೇ ವಸಂತಕ್ಕೆ ಕಾಲಿಟ್ಟ ಸಮಂತಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

39ನೇ ವಸಂತಕ್ಕೆ ಕಾಲಿಟ್ಟ ಸಮಂತಾ!

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತು ಪ್ರಭು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಪತಿ ರಾಜ್​ ನಿಡಿಮೋರು ಜೊತೆ ಈ ಹಿಂದೆ ಹುಟ್ಟುಹಬ್ಬ ಆಚರಿಸಿದ್ದ ಫೋಟೋಗಳು ಇದೀಗ ವೈರಲ್​ ಆಗಿವೆ.

ಹಳೇ ಫೋಟೋಗಳು ವೈರಲ್​

2023ರಲ್ಲಿ 'ಸಿಟಾಡೆಲ್' ಸರಣಿಯ ಚಿತ್ರೀಕರಣದ ವೇಳೆ ರಾಜ್ ನಿಡಿಮೋರು ಅವರು ಆಯೋಜಿಸಿದ್ದ ಮಧ್ಯರಾತ್ರಿಯ ಅದ್ಧೂರಿ ಆಚರಣೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವದಂತಿಗೆ ಪುಷ್ಟಿ ನೀಡಿದ್ದವು

ಅಂದು ಸಮಂತಾ ಅವರೇ ಅಧಿಕೃತವಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಈ ಫೋಟೋಗಳು, ಅವರಿಬ್ಬರ ನಡುವಿನ ಪ್ರೀತಿಯ ವದಂತಿಗಳಿಗೆ ಪುಷ್ಟಿ ನೀಡಿದ್ದವು.

ಮದುವೆ ಬಳಿಕ ಮೊದಲ ಹುಟ್ಟುಹಬ್ಬ

2025ರ ಡಿಸೆಂಬರ್‌ನಲ್ಲಿ ರಾಜ್ ಮತ್ತು ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ನಂತರದ ಸಮಂತಾ ಅವರ ಮೊದಲ ಹುಟ್ಟುಹಬ್ಬ ಇದಾಗಿರುವುದರಿಂದ ಹಳೆಯ ನೆನಪುಗಳು ಮತ್ತೆ ಮುನ್ನೆಲೆಗೆ ಬಂದು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಮಾ ಇಂಟಿ ಬಂಗಾರಂ ಬಿಡುಗಡೆ

ಸಮಂತಾ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ 'ಮಾ ಇಂಟಿ ಬಂಗಾರಂ' ಈ ಬೇಸಿಗೆಯಲ್ಲಿ, ಅಂದರೆ ಮೇ 15 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕಿಯಾಗಿ ಹೊಸ ಹೆಜ್ಜೆ

ಸಮಂತಾ ಕೇವಲ ನಟನೆಯಲ್ಲದೆ, ತಮ್ಮದೇ ಆದ 'ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ. 'ಮಾ ಇಂಟಿ ಬಂಗಾರಂ' ಚಿತ್ರವನ್ನು ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ.

ವೋಗ್ ಇಂಡಿಯಾ ಕವರ್

ಇತ್ತೀಚೆಗೆ 'ವೋಗ್ ಇಂಡಿಯಾ' ಮ್ಯಾಗಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ಅವರು, ತಮ್ಮ ಜೀವನದ ಕಠಿಣ ಹಂತಗಳು ಮತ್ತು ವೈಯಕ್ತಿಕ ಬೆಳವಣಿಗೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗಿನ ಸ್ನೇಹ ಮತ್ತು ಬೆಂಬಲದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಅಭಿಮಾನಿಗಳು, ಗಣ್ಯರಿಂದ ಶುಭಾಶಯ

ಸಮಂತಾ ಇಂದು 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಗಣ್ಯರು ಅವರಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.