ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ಹುಮಾ ಖುರೇಷಿ, ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ಚಿತ್ರದಲ್ಲಿಯೂ ನಟಿಸಿದ್ದಾರೆ.ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ಆಯ್ಕೆ ಆಗಿದ್ದ ಖುರೇಷಿ, ರಂಗಭೂಮಿ ನಟಿ ಮತ್ತು ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ.'ಸಿಂಗಲ್ ಸಲ್ಮಾ', 'ಜಾಲಿ ಎಲ್ಎಲ್ಬಿ 3', 'ಡಬಲ್ ಎಕ್ಸ್ಎಲ್' ಸೇರಿ ಹಲವು ಸಿನಿಮಾ ಮತ್ತು ಒಟಿಟಿ ಸರಣಿಗಳಲ್ಲಿ ಬಣ್ಣ ಹಚ್ಚಿರುವ ಬ್ಯೂಟಿ.ಪ್ರಸ್ತುತ, ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್: ದಿ ಫೇರಿಟೇಲ್ ಚಿತ್ರದಲ್ಲಿ ಐವರು ನಾಯಕಿಯರ ಪೈಕಿ ಹುಮಾ ಕೂಡ ಒಬ್ಬರು.ಟಾಕ್ಸಿಕ್ನಲ್ಲಿ ಅವಕಾಶ ಸಿಕ್ಕ ಬಗ್ಗೆ ಎಲ್ಲಿಯೂ ಹೇಳದ ನಟಿ, ಚಿತ್ರದಲ್ಲಿ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬ ಕುತೂಹಲ ಮೂಡಿದೆ