ಮನೆಯಲ್ಲೇ ಚಿನ್ನ ಪಾಲಿಶ್​​ ಮಾಡೋದು ಹೀಗೆ..

ಮಮತಾ

ಮನೆಯಲ್ಲೇ ಚಿನ್ನ ಪಾಲಿಶ್​​ ಮಾಡೋದು ಹೀಗೆ..

ಬಂಗಾರವು ಬಡವರ ಇನ್ವೆಸ್ಟ್​ಮೆಂಟ್ ಅಸ್ತ್ರ ಯಾವುದೇ ಕಷ್ಟಕಾಲದಲ್ಲಿ ಅದನ್ನು ಅಡವಿಟ್ಟು ಹಣ ಕೊಂಡು ಮತ್ತೆ ಅಡವಿಟ್ಟ ಚಿನ್ನವನ್ನು ವಾಪಸ್​ ಪಡೆದುಕೊಳ್ಳೋದು ರೂಢಿಗತವಾಗಿದೆ. ಇಂತಹ ಚಿನ್ನ ಕೊಂಡು ಹಲವಾರು ವರ್ಷ ಕಳೆದಿದ್ದರೆ ಅದು ತನ್ನ ಹೊಳಪನ್ನು ಕಳೆದುಕೊಂಡಿದ್ದರೆ ಅದನ್ನು ಪಾಲಿಶ್ ಮಾಡೋದು ಹೇಗೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ವಿನೆಗರ್​, ನಿಂಬೆಹಣ್ಣು ಬಳಕೆ ಬೇಡ

=ವಿನೆಗರ್​ ಅಥವಾ ನಿಂಬೆ ಹಣ್ಣು ಬಳಕೆ ಮಾಡುವುದರಿಂದ ಚಿನ್ನದ ಒಳ ಪದರಕ್ಕೆ ಹಾನಿಯುಂಟಾಗುತ್ತದೆ. ಇದು ಚಿನ್ನದ ಹೊಳಪನ್ನು ಮಂದಗೊಳಿಸುವ ಸಾಧ್ಯತೆಇದೆ.

ಟೂತ್​ ಪೇಸ್ಟ್​​

ಟೂತ್​ ಪೇಸ್ಟ್​ನಿಂದ ಚಿನ್ನದ ಆಭರಣವನ್ನು ಸ್ವಚ್ಛಗೊಳಿಸುವುದು ಸುಲಭವುದಾನವಾಗಿ. ಯಾವುದೇ ಬ್ರಾಂಡ್​ನ ಟೂತ್​ ಪೇಸ್ಟ್​ ತೆಗೆದುಕೊಂಡು ಹಲ್ಲುಜ್ಜುವ ಬ್ರಷ್​ ಮೇಲೆ ಹಾಕಿಕೊಳ್ಳಿ ನಂತರ ಅದರ ಮೇಲೆ ನಿಧಾನವಾಗಿ ಉಕ್ಕಿ ಆ ನಂತರ ಅದನ್ನು ನಿಧಾನವಾಗಿ ತೊಳೆದು ಮೃದುವಾದ ಬಟ್ಟೆಯಲ್ಲಿ ಒರೆಸಿ ಒಣಗಿಸಿಕೊಳ್ಳಿ.

ಮುಲ್ತಾನಿ ಮಟ್ಟಿ ಹಾಗೂ ರೋಸ್​ ವಾಟರ್​​

ಮುಲ್ತಾನಿಮಟ್ಟಿಯನ್ನು ಸ್ವಲ್ಪ ರೋಸ್​ವಾಟರ್​ನೊಂದಿಗೆ ಬೆರಸಿ ಪೇಸ್ಟ್ ಮಾಡಿಅದನ್ನು ಸ್ವಲ್ಪಹೊತ್ತು ಒಣಗಳು ಬಿಟ್ಟು ನಂತರ ತೊಳೆಯಿರಿ ಇದು ಮುಂಚಿನ ಹೊಳಪನ್ನು ನೀಡುತ್ತದೆ.

ನೆನಪಿಡಿ

ಚಿನ್ನದ ಆಭರಣಕ್ಕೆ ಕಠಿಣ ಪೇಸ್ಟ್​ ಅನ್ನು ಬಳಕೆ ಮಾಡಬೇಡಿ. ಇದರಿಂದ ಚಿನ್ನ ತನ್ನತನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ಚಿನ್ನದ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಡುಗೆ ಸೋಡ

ಎರಡು ಟೀ ಚಮಚ ಅಡಿಗೆ ಸೋಡವನ್ನು ಬೆಚ್ಚಗಿನ ನೀರಿನಲ್ಲಿ ಬೆರಸಿ ಬ್ರಷ್​​ನಿಂದ ಉ4 ರಿಂದ 5 ನಿಮಿಷ ಉಜ್ಜಿ ಆನಂತರ ಮೃದುವಾದ ಬಟ್ಟೆಯೊಂದಿಗೆ ಅದನ್ನು ಸ್ವಚ್ಛಗೊಳಿಸಿ. ಒಣಗಿಸಿ

ಉಪ್ಪು

ಚಿನ್ನವನ್ನು ಹೊಳಪಾಗಿಸುವ ಸಲುವಾಗಿ ಉಪ್ಪನ್ನು ಬಳಕೆ ಮಾಡಬೇಡಿ. ಇದು ಆಭರಣವನ್ನು ಹೊರಟಾಗಿ ಮಾಡಬಹುದು.