ಪಾರ್ಟಿ ನಂತರದ ಹ್ಯಾಂಗೋವರ್​​ನ ಮುಕ್ತಿಗಾಗಿ ಈ 5 ವಿಧಾನಗಳನ್ನು ಪಾಲಿಸಿ

ವಿನಾಯಕ ನಾಯಕ

ಪಾರ್ಟಿ ನಂತರದ ಹ್ಯಾಂಗೋವರ್​​ನ ಮುಕ್ತಿಗಾಗಿ ಈ 5 ವಿಧಾನಗಳನ್ನು ಪಾಲಿಸಿ

ರಾತ್ರಿ ಕಂಠಪೂರ್ತಿ ಕುಡಿದರೆ ಮಾರನೇ ದಿನ ಉಂಟಾಗುವ ಹ್ಯಾಂಗೋವರ್​ (Hangover) ನಿಂದ ಒಂದಿಡಿ ದಿನ ಇದರಿಂದ ಸುಧಾರಿಸಿಕೊಳ್ಳುವಲ್ಲೇ ಕಳೆದು ಹೋಗುತ್ತದೆ. ಹಾಗಾದರೆ ಈ ಹ್ಯಾಂಗೋವರ್​ನಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವೇ ಎಂದು ಕೇಳಿದರೆ ಖಂಡಿತವಾಗಿ ಪರಿಹಾರ ಇದ್ದೇ ಇದೆ. ಈ ಕೆಳಗೆ ಸೂಚಿಸಿದ ವಿಧಾನವನ್ನು ನೀವು ಪಾಲಿಸಿದರೆ ನಿಮಗೆ ಇನ್ನು ಮುಂದೆ ಖಂಡಿತವಾಗಿ ಹ್ಯಾಂಗೋವರ್​ ಆಗುವುದಿಲ್ಲ.

ಕಡಿಮೆ ಮದ್ಯವನ್ನು ಸೇವಿಸಿ

ಹೇಗೂ ನೀವು ಕುಡಿಯುತ್ತಿರುವುದು ಸಂತೋಷದ ಸಲುವಾಗಿ, ಈ ಸಂತೋಷವನ್ನೇಕೆ ನೀವು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿರಿ. ಆದ್ದರಿಂದ ಮದ್ಯವನ್ನು ಕಡಿಮೆ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಸಹ ಹದಗೆಡುವುದಿಲ್ಲ ಹಾಗೆಯೇ ನಿಮ್ಮ ಪಾರ್ಟಿ ಸಹ ಪೂರ್ಣಗೊಳ್ಳತ್ತದೆ.

ಕಡಿಮೆ ಆಹಾರ ಸೇವಿಸಿ

ಎಷ್ಟು ಮದ್ಯವನ್ನು ಸೇವಿಸುತ್ತೇವೋ ಅದರ ಅರ್ಧವಷ್ಟನ್ನೇ ಊಟ ಮಾಡಬೇಕು. ಆದರೆ ನಮ್ಮ ಮದ್ಯಪ್ರೀಯರು ಖಾಧ್ಯಪ್ರೀಯರು ಸಹ ಆಗಿರುವ ಕಾರಣ ಕುಡಿದ ಎರಡು ಪಟ್ಟು ಗಡದ್ದಾಗಿ ಊಟ ಮಾಡಿದ ಪರಿಣಾಮವಾಗೆ ಮಾರನೇ ದಿನ ಹಾಸಿಗೆಯಿಂದ ಎದ್ದೇಳದ ಪರಿಸ್ಥಿತಿ ತಲುಪುವುದು.

ಆರೋಗ್ಯಕರ ಸೈಡ್ಸ್​ಗಳನ್ನು ಸೇವಿಸಿ

ಪಾರ್ಟಿಯಲ್ಲಿ ಮಧ್ಯಕ್ಕಿಂತ ಉನ್ನತ ಸ್ಥಾನವನ್ನು ಈ ಸೈಡ್ಸ್​ಗಳು ಪಡೆದಿವೆ. ಆದರೆ ಹ್ಯಾಂಗೋವರ್​​ನ್ನು ತಡೆಯುವಲ್ಲಿ ಮದ್ಯದಷ್ಟೇ ಪಾತ್ರ ಸೈಡ್ಸ್​ದದ್ದು ಇರುತ್ತದೆ. ಹುರಿದ ಶೇಂಗಾ, ಚಿಕನ್ ಕಬಾಬ್, ತಂದೂರಿ ಇವುಗಳ ಬದಲು ಸಲಾಡ್, ಹಣ್ಣು ಮತ್ತು ಒಣ ಹಣ್ಣುಗಳನ್ನು ಸೇವಿಸಿ.

ಹರ್ಬಲ್ ಟೀಗಳನ್ನು ಕುಡಿಯಿರಿ

ಹಿಂದಿನ ದಿನ ಕುತ್ತಿಗೆವರೆಗೆ ಕುಡಿದು ಮಾರನೇ ದಿನ ಹ್ಯಾಂಗೋವರ್​ನ್ನು ತಕ್ಷಣವೇ ಕಡಿಮೆ ಮಾಡಿಕೊಳ್ಳಲು ಶುಂಠಿ ಟೀ ಮತ್ತು ಗ್ರೀನ್​ ಟೀ ಗಳನ್ನು ಕುಡಿಯಿರಿ.

ನೋವು ನಿವಾರಕ( ಪೇನ್ ಕಿಲ್ಲರ್) ವನ್ನು ಸೇವಿಸಿ

ಕುಡಿತದ ಮಾರನೇಯ ದಿನ ಏನು ಮಾಡಿದರೂ ಹ್ಯಾಂಗೋವರ್​ ಇಳಿಯುತ್ತಿಲ್ಲ ಎಂದರೆ ಐಬುಪ್ರೊಫೆನ್ (Ibuprofen) ಅಥವಾ ಪ್ಯಾರಾಸಿಟಾಮೋಲ್ (Paracetamol) ನಂತಹ ನೋವು ನಿವಾರಕ( ಪೇನ್ ಕಿಲ್ಲರ್) ವನ್ನು ಸೇವಿಸಿ.