ವಿಜಯ್​ ಫಸ್ಟ್​ ಸಂಭಾವನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ವಿಜಯ್​ ಫಸ್ಟ್​ ಸಂಭಾವನೆ

ಇಳಯದಳಪತಿ ವಿಜಯ್​ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಹೆಸರು ಮಾಡಿರುವ ವಿಜಯ್​, ಸಿನಿಜಗತ್ತಿನ ಉತ್ತುಂಗದಲ್ಲಿ ಇರುವಾಗಲೇ ರಾಜಕೀಯಕ್ಕೆ ಧುಮುಕ್ಕಿದ್ದಾರೆ.

ಕೊನೆಯ ಸಿನಿಮಾ

ಬಿಡುಗಡೆಗೆ ಸಿದ್ಧವಾಗಿರುವ ಜನನಾಯಗನ್​ ವಿಜಯ್​ ಅವರ ಕೊನೇ ಸಿನಿಮಾ. ಬಳಿಕ ಕಂಪ್ಲೀಟ್​ ರಾಜಕಾರಣಿಯಾಗಲಿದ್ದು, 2026ರಲ್ಲಿ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಒಂದು ವರ್ಷದಿಂದ ಪ್ರಚಾರದಲ್ಲಿ ತೊಡಗಿದ್ದಾರೆ.

ಮೊದಲ ಸಂಭಾವನೆ

ನಟ ವಿಜಯ್​ ಅವರು ಚಿತ್ರರಂಗಕ್ಕೆ ಮೊದಲು ಕಾಲಿಟ್ಟಾಗ ಅವರ ಸಂಭಾವನೆ ಎಷ್ಟಿತ್ತು ಎಂಬ ವಿವರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾಲಿಯ ತೀರಪ್ಪು

ವಿಜಯ್​ ಅವರು ನಾಲಿಯ ತೀರಪ್ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಹಲವು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿ ಖ್ಯಾತಿ ಪಡೆದಿದ್ದರು.

500 ರೂಪಾಯಿ ಸಂಭಾವನೆ

ವಿಜಯ್​ ಬಾಲನಟನಾಗಿ ನಟಿಸಿದ ಮೊದಲ ಚಿತ್ರ ವೆಟ್ರಿ. ಸ್ವತಃ ಅವರ ತಂದೆಯೇ ನಿರ್ದೇಶಿಸಿದ ಈ ಚಿತ್ರದಲ್ಲಿ ನಟ ವಿಜಯಕಾಂತ್ ಮತ್ತು ನಂಬಿಯಾರ್ ನಟಿಸಿದ್ದರು. ಬಾಲನಟನಾಗಿ ನಟಿಸಿದ್ದಕ್ಕಾಗಿ ವಿಜಯ್ 500 ರೂ. ಸಂಭಾವನೆ ಪಡೆದಿದ್ದರಂತೆ.

ಸಿಂಹಾಸನ ಏರಲು ಸಜ್ಜು

ನಟ ವಿಜಯ್ ಪ್ರಸ್ತುತ ರಾಜಕೀಯದಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಿದ್ದಾರೆ. ಅವರ ಕೊನೆಯ ಚಿತ್ರ ಜನನಾಯಗನ್​ ಬಳಿಕ ಸಿನಿಮಾರಂಗವನ್ನು ತೊರೆದು ರಾಜಕೀಯ ಸಿಂಹಾಸನ ಏರಲು ಪ್ರಯತ್ನಿಸುತ್ತಿದ್ದಾರೆ.

275 ಕೋಟಿ ಸಂಭಾವನೆ

ಕೊನೆಯ ಚಿತ್ರ ಜನನಾಯಗನ್​ನಲ್ಲಿ ನಟಿಸಿದ್ದಕ್ಕಾಗಿ ನಟ ವಿಜಯ್ 275 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಸಂಭಾವನೆ ಮತ್ತು ಪ್ರಸ್ತುತ ಸಂಭಾವನೆಯನ್ನು ಹೋಲಿಕೆ ಮಾಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಜನವರಿ 9ಕ್ಕೆ ಜನನಾಯಗನ್​

ನಟ ವಿಜಯ್ ಪ್ರಸ್ತುತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಎಂಬುದು ಗಮನಾರ್ಹ. ಅವರ ನಟನೆಯ ಜನನಾಯಗನ್​ ಸಿನಿಮಾ ಜನವರಿ 9ಕ್ಕೆ ಬಿಡುಗಡೆಯಾಗಲಿದೆ.