'ಟಾಕ್ಸಿಕ್'​ ಬ್ಯೂಟಿ ಕಿಯಾರಾ...

ಮಮತಾ

'ಟಾಕ್ಸಿಕ್'​ ಬ್ಯೂಟಿ ಕಿಯಾರಾ...

12ನೇ ಆವೃತ್ತಿಯ ಜೆಕ್ಯೂ ಮೋಸ್ಟ್ ಇನ್​ಫ್ಲ್ಯುಯೆನ್ಶಿಯಲ್​​​ ಯಂಗ್​ ಇಂಡಿಯನ್​ ಆವೃತ್ತಿಯಲ್ಲಿ ಕಿಯಾರ ಅಡ್ವಾಣಿ ಭಾಗಿಯಾಗಿದ್ದರು. ದಪ್ಪ ಚರ್ಮದ ಕಾರ್ಸೆಟ್ ಟಾಪ್ ಅನ್ನು ಇಲ್ಯೂಷನ್ ಪೆನ್ಸಿಲ್ ಸ್ಕರ್ಟ್ ಧರಿಸಿದ್ದರು. ಸಿಂಪಲ್​ ಮೇಕಪ್​​, ಸಣ್ಣ ಕುತ್ತಿಗೆಯ ಚೈನ್​​​​ನಲ್ಲಿ ಅವರ ಲುಕ್​​ ಸ್ಟನ್ನಿಂಗ್​ ಆಗಿದೆ.

ಎಂಥಾ ಚೆಂದಾನೋ ಇವಳು..

ಜೆಕ್ಯೂನಲ್ಲಿ ಧರಿಸಿದ್ದ ಕಾಸ್ಟ್ಯೂಮ್​ನೊಂದಿಗೆ ಕಿಯಾರಾ ಅಡ್ವಾಣಿ ಫೋಟೋ ಶೂಟ್​ ಮಾಡಿಸಿದ್ದಾರೆ. ಆಕೆಯ ಟಾಕ್ಸಿಕ್​ ಲುಕ್​ಗೆ ಫ್ಯಾನ್ಸ್​​ ಫಿದಾ ಆಗಿದ್ದು, ಯಾಕಿಷ್ಟು ಸುಂದರ ನೀವು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಫ್ಯೂಗ್ಲಿ ಮೂಲಕ ಸಿನಮಾಕ್ಕೆ ಎಂಟ್ರಿ

ಕಿಯಾರಾ ಅವರು2014ರಲ್ಲಿ ಫ್ಯೂಗ್ಲಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಎಂಎಸ್​ ಧೋಣಿ ಅನ್​ಟೋಲ್ಡ್​ ಸಿನಿಮಾ ಅವರಿಗೆ ಖ್ಯಾತಿಯನ್ನು ಕೊಟ್ಟಿತ್ತು. ಭರತ್​ ಅನೆ ನೇನು ಮೂಲಕ ಅವರು ಟಾಲಿವುಡ್​ ಸಿನಿಮಾಗೆ ಕಾಲಿಟ್ಟರು. ಕಬೀರ್​ ಸಿಂಗ್​ನಲ್ಲಿ ಅವರ ಮೃದು ಸ್ವಭಾವದ ಪಾತ್ರಕ್ಕೆ ಪ್ರೇಮಿಗಳು ಮನಸೋತಿದ್ದರು.

ಟಾಕ್ಸಿಕ್​​ ಹುಡ್ಗಿ ಕಿಯಾರಾ

ಕಿಯಾರಾ ಅಡ್ವಾಣಿ ಅವರ ಟಾಕ್ಸಿಕ್​ ಸಿನಿಮಾ ಇನ್ನೇನು ರಿಲೀಸ್ ಆಗುವ ಹಂತದಲ್ಲಿದೆ. ಇದ್ರಲ್ಲಿ ಅವರ ಪಾತ್ರ ನಾಡಿಯಾ ಎಂದು. ಈ ಪಾತ್ರದ ಕತೆ ಯೂನಿಕ್ ಕ್ಯಾರೆಕ್ಟರ್​ ತುಂಬಾನೆ ಇಷ್ಟವಾಗಿದೆ ಎಂದು ಸಂದರ್ಶನದಲ್ಲಿ ಕಿಯಾರ ಹೇಳಿಕೊಂಡಿದ್ದಾರೆ.

'ನಾಡಿಯಾ'ಗೆ ಸಿಕ್ಕ ಪ್ರಶಸ್ತಿ ಇದು

ಕಿಯಾರಾಗೆ ಗುಡ್​ ನ್ಯೂಸ್​​ ಸಿನಿಮಾಗಾಗಿ ಫಿಲ್ಮ್​ ಫೇರ್ನಲ್ಲಿ ಬೆಸ್ಟ್​ ಸಪೋರ್ಟಿಂಗ್​ ಕ್ಯಾರೆಕ್ಟರ್ ಪ್ರಶಸ್ತಿ ಸಿಕ್ಕಿತ್ತು. 2024 ಮತ್ತು 2022ರಲ್ಲಿ ಶೇರ್​ ಷಾ ಮತ್ತು ಬೆಸ್ಟ್​​ ಆಕ್ಟರ್​ ಅವಾರ್ಡ್​ಗೆ ನಾಮಿನೇಟ್ ಆಗಿದ್ದರು. ಫ್ಯೂಗ್ಲಿಗೆ ಅತ್ಯುತ್ತಮ ಪ್ರವೇಶ, ಕಬೀರ್​ ಸಿಂಗ್​ಗೆ ಹೆಚ್ಚು ಹಣ ಗಳಿಸಿದ ನಟಿ ಮತ್ತು ಸ್ಮಿತಾ ಪಾಟೀಲ್​ ಪ್ರಶಸ್ತಿ ಪಡೆದುಕೊಂಡಿದ್ದರು.

ಸಿದ್ಧಾರ್ಥ್​ ಜೊತೆ ದಾಂಪತ್ಯ

ಶೇರ್​ ಷಾ ಸಿನಿಮಾದ ಮೂಲಕ ಸಿದ್ಧಾರ್ಥ್​ ಮಲ್ಹೋತ್ರ ಜೊತೆ ನಟಿಸಿದ ಅವರು, ಪ್ರೀತಿಯಲ್ಲಿ ಬಿದ್ದರು. 2020ರಿಂದಲೂ ಇಬ್ಬರು ಒಟ್ಟಾಗಿ ಡೇಟಿಂಗ್​ನಲ್ಲಿದ್ದ ಬಗ್ಗೆ ಸುದ್ದಿ ಹರಡಿತ್ತು.2023ರಲ್ಲಿ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಅವರಿಗೆ ಸಾರಾಯಾ ಎಂಬ ಮಗಳಿದ್ದಾಳೆ.

ಜಂಭದ ಕೋಳಿನಾ ಕಿಯಾರಾ?

ಬಾಲಿವುಡ್​ ಇನ್ಫ್ಲ್ಯುಯೆನ್ಸರ್ ಒಬ್ಬರು​ ಕಿಯಾರ ವಿರುದ್ಧ ಕೆಲವು ತಿಂಗಳ ಹಿಂದೆ ಆರೋಪವೊಂದನ್ನು ಮಾಡಿದ್ದರು. ಸತ್ಯ ಪ್ರೇಮ್​​ ಕಿ ಕಥಾ ಸಿನಿಮಾದ ನಂತರ ಫ್ಲೈಟ್​ನಲ್ಲಿ ಇನ್ಫ್ಲ್ಯುಯೆನ್ಸ್​ ಪ್ರಯಾಣಿಸುತ್ತಿದ್ದಾಗ ಅವರ ತಾಯಿ ಮಿಸ್​ ಆಗಿ ಕಿಯಾರಾಗೆ ಮೀಸಲಿದ್ದ ಸೀಟ್​ನಲ್ಲಿ ಕುಳಿತಿದ್ದರಂತೆ ಆಗ ಕಿಯಾರಾ ನಡೆದುಕೊಂಡ ರೀತಿ ನೆನಪಿದೆ ಅವರು ಜಂಭದ ಕೋಳಿ ಎಂದು ಆರೋಪಿಸಿದ್ದರು.