ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ.
ಮೈಮಾಟಕ್ಕೆ ಫಿದಾ
ಹನಿರೋಸ್ ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ.
ರಾಚೆಲ್ ಸಿನಿಮಾ
ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಹನಿ ರೋಸ್, ಚಿತ್ರರಂಗದಲ್ಲಿ 20 ಪೂರೈಸಿದ್ದಾರೆ. ಪ್ರಸ್ತುತ ಹನಿ ರೋಸ್ ರಾಚೆಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಸದಾ ವೈರಲ್
ಸಿನಿಮಾ ಹೊರತಾಗಿ ಉದ್ಘಾಟನಾ ಸಮಾರಂಭಗಳಿಗೆ ಹನಿರೋಸ್ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹನಿ ಭಾಗವಹಿಸಿದ ಎಲ್ಲ ಮಾರಂಭಗಳಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.
ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಹನಿರೋಸ್, ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಅದೇ ರೀತಿ ಇದೀಗ ಕೆಂಪು ಬಣ್ಣದ ಟಾಪ್ ಮತ್ತು ಲಾಂಗ್ ಸ್ಕರ್ಟ್ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಕಾಮೆಂಟ್ಗಳ ಸುರಿಮಳೆ
ಹನಿರೋಸ್ ಹಂಚಿಕೊಂಡಿರುವ ಹಾಟ್ ಫೋಟೋಗಳಿಗೆ ಕಾಮೆಂಟ್ಗಳ ಸುರಿಮಳೆಯಾಗುತ್ತಿದೆ. ಅವರ ಮಾದಕ ಮೈಮಾಟಕ್ಕೆ ಫಿದಾ ಆಗಿರುವ ಪಡ್ಡೆ ಹುಡುಗರು, ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.