ಮುಖದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಹಲವರು ಸಾಮಾನ್ಯವಾಗಿ ರೋಸ್ ವಾಟರ್ ಬಳಕೆ ಮಾಡುತ್ತಾರೆ. ಹೆಚ್ಚಿನ ಜನರು ಇದನ್ನು ಮೆಡಿಕಲ್ನಲ್ಲಿ ಖರೀದಿ ಮಾಡುತ್ತಾರೆ. ಆದರೆ ಇದಕ್ಕೆ ಕೆಮಿಕಲ್ ಬಳಕೆ ಮಾಡಿರುತ್ತಾರೆ. ಚರ್ಮಕ್ಕೆ ಯಾವ ಸಮಸ್ಯೆ ಕಾಡುತ್ತದೋ ಏನೋ ಎನ್ನುವದು ಹಲವರಿಗೆ ಕಾಡುವ ಗೊಂದಲ ಹೀಗಾಗಿ ಇಂದು ಮನೆಯಲ್ಲಿಯೇ ರೋಸ್ ವಾಟರ್ ತಯಾರಿ ಮಾಡೋದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.
ಹೆಚ್ಚು ನೀರಿನ ಅವಶ್ಯಕತೆ ಇಲ್ಲ
ಒಂದು ದೊಡ್ಡ ಬೌಲ್ ತೆಗೆದುಕೊಳ್ಳಿ, ಅದರೊಳಗೆ ಸಣ್ಣ ಬೌಲ್ ಇರಿಸಿ ಸಣ್ಣ ಬೌಲ್ನ ಪಕ್ಕದಲ್ಲಿ ಇರುವ ಜಾಗದಲ್ಲಿ ಗುಲಾಬಿಗಳ ಪಕಳೆಗಳನ್ನು ಉದುರಿಸಿ ಇದು ಸಣ್ಣ ಬೌಲ್ಗೆ ಬೀಳ ಕೂಡದು. ಈಗ ಅದನ್ನು ಪ್ಲೇಟ್ನಿಂದ ಮುಚ್ಚಿ ನಂತರ ಒಂದು 10ರಿಂದ 15 ನಿಮಿಷ ಕುದಿಯಲು ಬಿಡಿ.
ಐಸ್ಕ್ಯೂಬ್ ಇಡಿ
ಕುದಿಯಲು ಇಟ್ಟ ರೋಸ್ ವಾಟರ್ ದಳದ ತಟ್ಟೆ ಮೇಲೆ ಒಂದೈದು ಐಸ್ ಕ್ಯೂಬ್ಗಳನ್ನು ಇಡಿ. ಇದು ಕರಗಿ ಬಟ್ಟಲಿಗೆ ಬೀಳುತ್ತದೆ. ಅದೇ ರೋಸ್ವಾಟರ್.
ಗಾಜಿನ ಬಾಟಲಿಗೆ ನೀರು ಸೋಸಿ
20ರಿಂದ 30 ನಿಮಿಷ ರೋಸ್ವಾಟರ್ ಅನ್ನು ಚೆನ್ನಾಗಿ ಕುದಿಯಲು ಬಿಡಿ ಇದಕ್ಕೆ ಯಾವುದೇ ರೀತಿಯ ರಾಸಾಯನಿಕ ಅಂಶಗಳನ್ನು ಸೇರಿಸುವ ಅಗತ್ಯವಿಲ್ಲ. ಕುದಿಸಿದ ನೀರು ತಣ್ಣಗಾಗಲು ಬಿಡಿ ಯಾವುದೇ ನೀರನ್ನು ಸೇರಿಸುವ ಅಗತ್ಯವಿಲ್ಲ.
ರೋಸ್ವಾಟರ್ ಎಲ್ಲಿ ಇಡಬೇಕು?
ಮನೆಯಲ್ಲಿಯೇ ತಯಾರಿಸಿದ ರೋಸ್ವಾಟರ್ ಅನ್ನು ಫ್ರಿಡ್ಜ್ನಲ್ಲಿ ಇಡುವುದನ್ನು ಅಭ್ಯಾಸ ಮಾಡಿ. ಇದರಿಂದ ಬೇಗ ಕೆಡೋದಿಲ್ಲ. ಹಾಗೆ ಮಾಡಿಕೊಂಡರೆ ಮೂರರಿಂದ ಆರು ತಿಂಗಳವರೆಗೂ ಆರಾಮಾದಾಯಕವಾಗಿ ಯಾವುದೇ ಹೆಚ್ಚು ಖರ್ಚಿಲ್ಲದೆ ಬಳಕೆ ಮಾಡಬಹುದಾಗಿದೆ.
ರೋಸ್ ವಾಟರ್ನಿಂದಾಗುವ ಉಪಯೋಗವೇನು?
ಚರ್ಮದ ಪಿಎಚ್ ಮಟ್ಟವನ್ನು ಸಮತೋಲನವಾಗಿ ಇರಿಸಲು ರೋಸ್ ವಾಟರ್ ಸಹಾಯ ಮಾಡುತ್ತದೆ. ಮುಖ ತೊಳೆದ ನಂತರ ರೋಸ್ ವಾಟರ್ ಬಳಕೆ ಮಾಡುವುದರಿಂದ ರಂಧ್ರ ಮುಚ್ಚಿಕೊಳ್ಳುತ್ತದೆ. ಇದರಲ್ಲಿರುವ ಅಂಶವು ಉರಿಯೂತ ಹಾಗೂ ಮೊಡವೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.