ತೂಕ ಇಳಿಕೆಗೆ ಸೂಪರ್​ ಟಿಪ್ಸ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ತೂಕ ಇಳಿಕೆಗೆ ಸೂಪರ್​ ಟಿಪ್ಸ್​

ಭಾರತೀಯರು ಇಂದು ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತೂಕ ಹೆಚ್ಚಳವೂ ಒಂದು. ಇದರಿಂದ ವಿವಿಧ ಆರೋಗ್ಯ ಸಮಸ್ಯೆಯೂ ಬಾಧಿಸುತ್ತವೆ. ಹೀಗಾಗಿ ಅನೇಕ ಮಂದಿ ತೂಕ ಇಳಿಕೆಗೆ ಕಸರತ್ತು ಮಾಡುತ್ತಾರೆ. ಅಂಥವರಿಗೆ ಇಲ್ಲಿದೆ ಸೂಪರ್​ ಟಿಪ್ಸ್​.

ಜಾಗಿಂಗ್​ ಮಾಡಿ

ನೀವು ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಪ್ರತಿದಿನ 30 ರಿಂದ 45 ನಿಮಿಷಗಳ ಕಾಲ ಚುರುಕಾದ ನಡಿಗೆ ಅಥವಾ ಜಾಗಿಂಗ್ ಮಾಡಿ.

ವ್ಯಾಯಾಮ ಮಾಡಿ

ವಾರದಲ್ಲಿ 3 ರಿಂದ 4 ದಿನಗಳು ದೇಹದ ತೂಕದ ವ್ಯಾಯಾಮ ಮಾಡಿದರೆ ನಿಮ್ಮ ತೂಕ ಸುಲಭವಾಗಿ ಇಳಿಸಬಹುದು.

ಪ್ರೋಟೀನ್​ ಸೇವಿಸಿ

ತೂಕ ಇಳಿಸಲು ಹೆಚ್ಚು ಪ್ರೋಟೀನ್ ಆಹಾರಗಳನ್ನು (ಮೊಟ್ಟೆ, ಕೋಳಿ, ಬೇಳೆ) ಸೇವಿಸಿ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು (ಅನ್ನ) ಆದಷ್ಟು ಕಡಿಮೆ ಮಾಡಿ.

ಅತಿ ಊಟ ತಪ್ಪಿಸಿ

ಸಂಜೆ 7 ಗಂಟೆಯ ನಂತರ ಭಾರೀ ಊಟ ಮಾಡುವುದನ್ನು ತಪ್ಪಿಸಿ. ಏಕೆಂದರೆ, ಸರಿಯಾಗಿ ಜೀರ್ಣವಾಗದೇ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ನಿಂಬೆ ನೀರು ಕುಡಿಯಿರಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿರು ಚಹಾ ಅಥವಾ ನಿಂಬೆ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿ ಸಂಗ್ರಹವಾದ ಕೊಲೆಸ್ಟ್ರಾಲ್​ ಕರಗಿ, ತೂಕ ಇಳಿಯುತ್ತದೆ.

ಸರಿಯಾದ ನಿದ್ರೆ

ದಿನನಿತ್ಯ 7 ರಿಂದ 8 ಗಂಟೆಗಳ ನಿದ್ದೆ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುವುದರಿಂದ ತೂಕ ಇಳಿಕೆಯಾಗುತ್ತದೆ.

ಎಣ್ಣೆಯುಕ್ತ ಆಹಾರ

ಸಕ್ಕರೆ, ಫಾಸ್ಟ್ ಫುಡ್ ಮತ್ತು ಎಣ್ಣೆಯುಕ್ತ ಆಹಾರವನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಮೂಲಕ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು.

ಸಾಕಷ್ಟು ನೀರು

ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡಲು ಪ್ರತಿದಿನ 2 ರಿಂದ 3 ಲೀಟರ್ ನೀರನ್ನು ತಪ್ಪದೇ ಕುಡಿಯಿರಿ. ಇದರಿಂದ ತೂಕ ಇಳಿಸಲು ಸಹಾಯವಾಗುತ್ತದೆ.

ತೂಕವನ್ನು ಟ್ರ್ಯಾಕ್​ ಮಾಡಿ

ವಾರಕ್ಕೊಮ್ಮೆ ನಿಮ್ಮ ತೂಕ ಮತ್ತು ಸೊಂಟದ ಅಳತೆಯನ್ನು ಟ್ರ್ಯಾಕ್ ಮಾಡಿ ಮತ್ತು ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ಇಳಿಸಬಹುದು.