ಹುಣಸೆ ಹಣ್ಣಿನಂತೆ ಕಾಣುವ ಕಾಡು ಹುಣಸೆ ರುಚಿಯಲ್ಲಿ ಸಿಹಿಯಾಗಿರುತ್ತದೆ. ಅಲ್ಲದೆ, ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೆಚ್ಚಾಗಿ ಕಾಡಲ್ಲಿ ಬೆಳೆಯುವ ಈ ಹಣ್ಣಿನ ಮಹತ್ವದ ಬಗ್ಗೆ ಅದೆಷ್ಟೋ ಜನರಿಗೆ ತಿಳಿದಿಲ್ಲ.
ಹಾನಿಯಿಂದ ರಕ್ಷಣೆ
ಕಾಡು ಹುಣಸೆಯು ವಿಟಮಿನ್ ಸಿ ಮತ್ತು ಪಾಲಿಫಿನಾಲ್‌ಗಳಿಂದ ಸಮೃದ್ಧವಾಗಿದ್ದು, ಆ್ಯಂಟಿಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸಿ, ದೇಹದ ಕೋಶಗಳನ್ನು ಫ್ರೀ ರ‍್ಯಾಡಿಕಲ್‌ಗಳ ಹಾನಿಯಿಂದ ರಕ್ಷಣೆ ಮಾಡುತ್ತದೆ.
ಮಲಬದ್ಧತೆ
ಫೈಬರ್‌ನಲ್ಲಿ ಸಮೃದ್ಧವಾಗಿರುವ ಕಾಡು ಹುಣಸೆಯು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಉತ್ತಮ ಬ್ಯಾಕ್ಟೀರಿಯಾ
ಕಾಡು ಹುಣಸೆ ಹಣ್ಣಿನಲ್ಲಿರುವ ಪೋಷಕಾಂಶಗಳು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಬೆಳೆಯಲು ಸಹಾಯ ಮಾಡುತ್ತದೆ.
ರಕ್ತಹೀನತೆ ನಿವಾರಣೆ
ಕಾಡು ಹುಣಸೆ ಹಣ್ಣು ಹೆಚ್ಚು ಕಬ್ಬಿಣಾಂಶವನ್ನು ಹೊಂದಿದ್ದು, ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಅದರಲ್ಲಿರುವ ಫೋಲಿಕ್ ಆಮ್ಲ ಹೀಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತೆ.
ಚರ್ಮದ ಸುಕ್ಕು
ಕಾಡು ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಚರ್ಮವು ಸುಕ್ಕುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಚರ್ಮದ ಸಮಸ್ಯೆ
ಮಾಲಿನ್ಯದಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು ಕಾಡು ಹುಣಸೆ ಹಣ್ಣು ಕಡಿಮೆಯಾಗುತ್ತವೆ.
ತ್ವರಿತ ಶಕ್ತಿ
ಕಾಡು ಹುಣಸೆ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಗಳು ಹೇರಳವಾಗಿದ್ದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಿ, ಆಯಾಸ ಮತ್ತು ಹಸಿವನ್ನು ದೂರ ಮಾಡುತ್ತದೆ.