ಚಳಿಗಾಲದ ಗಂಟಲು ಕೆರೆತಕ್ಕೆ ಪರಿಹಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಳಿಗಾಲದ ಗಂಟಲು ಕೆರೆತಕ್ಕೆ ಪರಿಹಾರ

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಗಂಟಲು ನೋವು ಮತ್ತು ಕೆರೆತವನ್ನು ಕಡಿಮೆ ಮಾಡಲು ಇಲ್ಲಿವೆ ನೋಡಿ ಎಂಟು ಬೆಸ್ಟ್​​ ಟಿಪ್ಸ್​.

ಉಪ್ಪು ನೀರಿನ ಮುಕ್ಕಳಿಸುವಿಕೆ

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚ ಉಪ್ಪು ಬೆರೆಸಿ ದಿನಕ್ಕೆ 3 ರಿಂದ 4 ಬಾರಿ ಮುಕ್ಕಳಿಸುವುದರಿಂದ ಗಂಟಲಿನ ಊತ ಮತ್ತು ಸೋಂಕು ಕಡಿಮೆಯಾಗುತ್ತದೆ.

ಜೇನುತುಪ್ಪ ಬಳಕೆ

ಜೇನುತುಪ್ಪವು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಒಂದು ಚಮಚ ಜೇನುತುಪ್ಪವನ್ನು ಹಾಗೆಯೇ ಸೇವಿಸಬಹುದು ಅಥವಾ ಬೆಚ್ಚಗಿನ ನೀರು/ಶುಂಠಿ ಚಹಾದೊಂದಿಗೆ ಬೆರೆಸಿ ಕುಡಿಯಬಹುದು.

ಶುಂಠಿ ಚಹಾ

ಶುಂಠಿಯಲ್ಲಿರುವ ಉರಿಯೂತ ವಿರೋಧಿ ಗುಣಗಳು ಗಂಟಲು ನೋವನ್ನು ಶಮನಗೊಳಿಸುತ್ತವೆ. ಹಸಿ ಶುಂಠಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ, ಸೋಸಿಕೊಂಡು ಕುಡಿಯುವುದು ಉತ್ತಮ.

ಅರಿಶಿನ ಹಾಲು

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಚಿಟಿಕೆ ಅರಿಶಿನ ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ, ಗಂಟಲು ನೋವು ಬೇಗ ಗುಣವಾಗುತ್ತದೆ.

ತುಳಸಿ ಕಷಾಯ

ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ಕುಡಿಯುವುದರಿಂದ ಶೀತ ಮತ್ತು ಗಂಟಲಿನ ಸೋಂಕು ನಿವಾರಣೆಯಾಗುತ್ತದೆ.

ಹಬೆ ತೆಗೆದುಕೊಳ್ಳುವುದು

ಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಅಥವಾ ಪುದೀನಾ ಎಲೆಗಳನ್ನು ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಗಂಟಲು ಮತ್ತು ಮೂಗಿನ ಹಾದಿ ಸುಗಮವಾಗಿ ನೋವು ಕಡಿಮೆಯಾಗುತ್ತದೆ.

ಬೆಚ್ಚಗಿನ ದ್ರವಾಹಾರ

ಚಳಿಗಾಲದಲ್ಲಿ ಗಂಟಲು ಒಣಗದಂತೆ ನೋಡಿಕೊಳ್ಳಲು ಸದಾ ಉಗುರು ಬೆಚ್ಚಗಿನ ನೀರು, ಬಿಸಿ ಸೂಪ್ ಅಥವಾ ಗಿಡಮೂಲಿಕೆ ಚಹಾಗಳನ್ನು ಸೇವಿಸುತ್ತಿರಬೇಕು.

ಕಾಳುಮೆಣಸು ಮತ್ತು ಲವಂಗ

ಗಂಟಲಿನಲ್ಲಿ ಹೆಚ್ಚು ಕೆರೆತವಿದ್ದರೆ ಒಂದು ಲವಂಗ ಅಥವಾ ಸ್ವಲ್ಪ ಕಾಳುಮೆಣಸನ್ನು ಬಾಯಿಯಲ್ಲಿಟ್ಟುಕೊಂಡು ಅದರ ರಸವನ್ನು ನುಂಗುವುದರಿಂದ ತಕ್ಷಣದ ಆರಾಮ ಸಿಗುತ್ತದೆ.

ಸೂಚನೆ

ಗಂಟಲು ನೋವು ಅತಿಯಾಗಿದ್ದರೆ ಅಥವಾ ಜ್ವರದಂತಹ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.