ಗ್ಯಾಸ್ಟ್ರಿಕ್​ ನಿವಾರಣೆಗೆ ಇಲ್ಲಿದೆ ಟಿಪ್ಸ್​...

ರಮೇಶ್​ ಕುಮಾರ್​​ ಬಿ ಎಡಮೋಳೆ

ಗ್ಯಾಸ್ಟ್ರಿಕ್​ ನಿವಾರಣೆಗೆ ಇಲ್ಲಿದೆ ಟಿಪ್ಸ್​...

ಗ್ಯಾಸ್ಟ್ರಿಕ್ ಒಂದು ಪ್ರಮುಖ ಆರೋಗ್ಯ ಸಮಸ್ಯೆ. ಇದು ಬಂದರೆ ಆ ವ್ಯಕ್ತಿ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹೀಗಾಗಿ ಅದನ್ನು ತಡೆಗಟ್ಟಲು ಏನು ಮಾಡಬೇಕೆಂದು ನಾವೀಗ ತಿಳಿಯೋಣ.

ಶುಂಠಿ

ಒಂದು ತುಂಡು ಶುಂಠಿಯನ್ನು ಬೆಚ್ಚಗಿನ ನೀರಿನಲ್ಲಿ ಕುದಿಸಿ ದಿನಕ್ಕೆ 2 ಬಾರಿ ಕುಡಿಯಿರಿ.

ಈ ಆಹಾರ ತಪ್ಪಿಸಿ

ಖಾರ, ಹುರಿದ ಆಹಾರಗಳು ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಸಂಪೂರ್ಣವಾಗಿ ತಪ್ಪಿಸಿ.

ಲವಂಗ ಪುಡಿ

ಗ್ಯಾಸ್ಟ್ರಿಕ್​ ಹೋಗಲಾಡಿಸಲು ಲವಂಗ ಪುಡಿಯನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ.

ವ್ಯಾಯಾಮ ತಪ್ಪಿಸಬೇಡಿ

ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ದಿನಕ್ಕೆ 30 ನಿಮಿಷಗಳ ಕಾಲ ನಡೆಯಿರಿ ಅಥವಾ ಯೋಗ ಮಾಡಿ.

ತರಕಾರಿ ಸೇವನೆ

ಆಹಾರ ವಿಚಾರದಲ್ಲಿ ಎಚ್ಚರದಿಂದಿರಿ. ಪ್ರತಿದಿನ ಆಲೂಗಡ್ಡೆ ಮತ್ತು ಕ್ಯಾರೆಟ್‌ನಂತಹ ತರಕಾರಿಗಳನ್ನು ಸೇವಿಸಿ.

ಕೊತ್ತಂಬರಿ ಬೀಜ

ಒಂದು ಚಮಚ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಕುದಿಸಿ ದಿನಕ್ಕೆ 2 ಬಾರಿ ಕುಡಿಯಿರಿ.

ನಿಂಬೆ ರಸ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯಿರಿ.

ನೀರನ್ನು ಕುಡಿಯಿರಿ

ದೇಹದ ಹೈಡ್ರೇಶನ್​ ತುಂಬಾ ಮುಖ್ಯ. ಹೀಗಾಗಿ ದಿನಕ್ಕೆ 8 ರಿಂದ 10 ಗ್ಲಾಸ್ ನೀರನ್ನು ತಪ್ಪದೇ ಕುಡಿಯಿರಿ.

ಮೊಸರು ಸೇವನೆ

ಮೋಸರಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಗ್ಯಾಸ್ಟ್ರಿಕ್​ಗೆ ಮೊಸರು ಮದ್ದಾಗಿದ್ದು, ದಿನಕ್ಕೆ 1 ಕಪ್ ಮೊಸರು ಸೇವಿಸಿ.