ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಲು ಇಲ್ಲಿವೆ ಸಲಹೆಗಳು!

ಭಾನುಪ್ರಿಯ ಡಿ.ಕೆ

ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಲು ಇಲ್ಲಿವೆ ಸಲಹೆಗಳು!

ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸುವುದು ಸುಲಭ. ಮನೆಯಲ್ಲಿರುವ ಸಾಮಗ್ರಿಗಳಿಂದಲೇ ಹೊಸದರಂತೆ ಮಾಡಬಹುದು. ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ವಿಧಾನ

ಟೂತ್​ ಪೇಸ್ಟ್​

ಮೃದುವಾದ ಬ್ರಶ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಟೂತ್​ ಪೇಸ್ಟ್ ಹಚ್ಚಿಕೊಂಡು ನಿಧಾನವಾಗಿ ಬೂಟುಗಳ ಮೇಲೆ ಉಜ್ಜಿ ನೀರನ್ನು ಹಾಕಿರಿ.

ಬೇಕಿಂಗ್ ಸೋಡಾ ಮತ್ತು ವಿನೆಗರ್ ಪೇಸ್ಟ್

1 ಚಮಚ ಬೇಕಿಂಗ್ ಸೋಡಾಕ್ಕೆ 2 ಚಮಚ ವೈಟ್ ವಿನೆಗರ್, ಸ್ವಲ್ಪ ನೀರು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಹಳೆಯ ಟೂತ್ ಬ್ರಶ್‌ನಿಂದ ಕಲೆಗಳ ಮೇಲೆ ಹಚ್ಚಿ ಸೌಮ್ಯವಾಗಿ ಸ್ಕ್ರಬ್ ಮಾಡಿ. 10-15 ನಿಮಿಷ ಬಿಟ್ಟು ನಂತರ ಒದ್ದೆ ಬಟ್ಟೆಯಿಂದ ಒರೆಸಿ.

ಮೈಲ್ಡ್ ಸೋಪ್

ಬಿಸಿ ನೀರಿನಲ್ಲಿ ಸ್ವಲ್ಪ ಮೈಲ್ಡ್ ಸೋಪ್ ಹಾಕಿ ಮಿಶ್ರಣ ಮಾಡಿ. ಮೃದುವಾದ ಬಟ್ಟೆ ಅಥವಾ ಸ್ಪಾಂಜ್‌ನಿಂದ ಬೂಟುಗಳನ್ನು ಸೌಮ್ಯವಾಗಿ ಒರೆಸಿ ನಂತರ ಒಂದು ಒಣ ಬಟ್ಟೆಯಿಂದ ಒರೆಸಿರಿ.

ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್​ನ್ನು ಧೂಳಾದ ಬೂಟುಗಳ ಮೇಲೆ ಹಚ್ಚಿ ಸೌಮ್ಯವಾಗಿ ಒರೆಸಿರಿ. ಇದು ಕಲೆಗಳನ್ನು ತೆಗೆಯುವುದರ ಜೊತೆಗೆ ಹೊಳಪನ್ನು ನೀಡುತ್ತದೆ

ಕಂಡಿಷನರ್

ಸ್ವಚ್ಛಗೊಳಿಸಿದ ನಂತರ ಬೂಟುಗಳನ್ನು ಸಂಪೂರ್ಣ ಒಣಗಿಸಿ. ಅದಕ್ಕೆ ವೈಟ್ ಲೆದರ್ ಕಂಡಿಷನರ್ ಅಥವಾ ವಾಟರ್‌ಪ್ರೂಫ್ ಸ್ಪ್ರೇ ಹಾಕಿರಿ. ಇದು ಮುಂದೆ ಕೊಳೆ ಹಿಡಿಯದಂತೆ ಮತ್ತು ಬಿಳಿ ಬಣ್ಣವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.