ನಿಮ್ಮ ದುಬಾರಿ ರೇಷ್ಮೆ ಬಟ್ಟೆಗಳನ್ನು ಕಾಪಾಡಿಕೊಳ್ಳಲು ಇಲ್ಲಿದೆ ಬೆಸ್ಟ್ ಟಿಪ್ಸ್!

ಭಾನುಪ್ರಿಯ ಡಿ.ಕೆ

ನಿಮ್ಮ ದುಬಾರಿ ರೇಷ್ಮೆ ಬಟ್ಟೆಗಳನ್ನು ಕಾಪಾಡಿಕೊಳ್ಳಲು ಇಲ್ಲಿದೆ ಬೆಸ್ಟ್ ಟಿಪ್ಸ್!

ರೇಷ್ಮೆ ಬಟ್ಟೆಗಳು ಮೃದುವಾದ ಮತ್ತು ಐಷಾರಾಮಿ ಆದ್ದರಿಂದ ಇವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.

ಕೈಯಲ್ಲಿ ತೊಳೆಯಿರಿ

ತಂಪು ನೀರು ಮತ್ತು ಮೃದು ಡಿಟರ್ಜೆಂಟ್ ಬಳಸಿ ಹೆಚ್ಚು ಹೊತ್ತು ತೊಳೆಯದೇ ಹಗುರವಾಗಿ ತೊಳೆಯಿರಿ. ಬಣ್ಣ ಹೋಗುವುದನ್ನು ಪರಿಶೀಲಿಸಿ.

ನೇರ ಬಿಸಿಲಿನಲ್ಲಿ ಒಣಗಿಸಬೇಡಿ

ರೇಷ್ಮೆ ಬಟ್ಟೆಗಳನ್ನು ತೊಳೆದ ನಂತರ, ಅವುಗಳನ್ನು ನೇರವಾಗಿ ಬಿಸಿಲಿನಲ್ಲಿ ಒಣಗಿಸಬೇಡಿ. ಬದಲಿಗೆ ನೆರಳಿನಲ್ಲಿ ಗಾಳಿ ಬರುವ ಜಾಗದಲ್ಲಿ ಹ್ಯಾಂಗರ್‌ನಲ್ಲಿ ಒಣಗಿಸಿ.

ಕಡಿಮೆ ಶಾಖದಲ್ಲಿ ಇಸ್ತ್ರಿ ಮಾಡಿ

ಬಟ್ಟೆಯನ್ನು ಒಳಗೆ ತಿರುಗಿಸಿ, ಸ್ವಲ್ಪ ತೇವವಿರುವಾಗ ಕಡಿಮೆ ಶಾಖದಲ್ಲಿ ಇಸ್ತ್ರಿ ಮಾಡಿ. ಪ್ರೆಸಿಂಗ್ ಕ್ಲಾತ್ ಬಳಸಿ ಅಥವಾ ಸ್ಟೀಮರ್‌ನಿಂದ ಸುಲಭವಾಗಿ ಸರಿಪಡಿಸಿ.

ಸರಿಯಾಗಿ ಜೋಡಿಸಿ

ಕಪಾಟಿನಲ್ಲಿ ಹ್ಯಾಂಗರ್‌ನಲ್ಲಿ ತೂಗುಹಾಕಿ, ಧೂಳು ಬೀಳದಂತೆ ಕಾಟನ್ ಬ್ಯಾಗ್‌ನಲ್ಲಿ ಇಡಿ. ಪ್ಲಾಸ್ಟಿಕ್ ಬ್ಯಾಗ್ ಬಳಸಬೇಡಿ, ಗಾಳಿ ಬರುವಂತೆ ಎಚ್ಚರ ವಹಿಸಿರಿ.

ಹೆಚ್ಚು ತೊಳೆಯಬೇಡಿ

ರೇಷ್ಮೆಯನ್ನು ಅಗತ್ಯಕ್ಕಿಂತ ಹೆಚ್ಚು ತೊಳೆಯಬೇಡಿ. ಹಾಗಾಗಿ ಬಳಸಿದ ನಂತರ ಅವುಗಳನ್ನು ಗಾಳಿಯಲ್ಲಿ ಒಣಗಿಸಿ ಸಾಕು.