ಬಿಸಿ ವಾತಾವರಣದಲ್ಲೂ ಕೂಲ್ ಆಗಿರಲು ಇಲ್ಲಿವೆ ಸಿಂಪಲ್​ ಟಿಪ್ಸ್​!

ಭಾನುಪ್ರಿಯ ಡಿ.ಕೆ

ಬಿಸಿ ವಾತಾವರಣದಲ್ಲೂ ಕೂಲ್ ಆಗಿರಲು ಇಲ್ಲಿವೆ ಸಿಂಪಲ್​ ಟಿಪ್ಸ್​!

ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಮತ್ತು ಮನೆಯನ್ನು ಹಾಗೂ ದೇಹವನ್ನು ತಂಪಾಗಿರಿಸಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ.

ನೈಸರ್ಗಿಕ ಪಾನೀಯ ಸೇವಿಸಿ

ಬಿಸಿಲಿನ ಸಮಯದಲ್ಲಿ ದೇಹ ನಿರ್ಜಲೀಕರಣಗೊಳ್ಳದಂತೆ ತಡೆಯಲು ಸಾಕಷ್ಟು ನೀರು ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ಶರಬತ್ತು ಅಥವಾ ತಾಜಾ ಹಣ್ಣಿನ ರಸಗಳನ್ನು ಸೇವಿಸಿ. ಇದು ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಒದಗಿಸುತ್ತದೆ.

'ಕ್ರಾಸ್ ವೆಂಟಿಲೇಶನ್' ಬಳಕೆ

ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಕಿಟಕಿ-ಬಾಗಿಲುಗಳನ್ನು ಮುಚ್ಚಿ ದಪ್ಪನೆಯ ಪರದೆಗಳನ್ನು ಹಾಕಿ. ಸಂಜೆ ಅಥವಾ ಮುಂಜಾನೆ ತಂಪಾದ ಗಾಳಿ ಇರುವಾಗ ಕಿಟಕಿಗಳನ್ನು ತೆರೆಯಿರಿ. ಮನೆಯೊಳಗೆ ಗಿಡಗಳನ್ನು ಬೆಳೆಸಿ.

ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ

ಬೇಸಿಗೆಯಲ್ಲಿ ಗಾಢ ಬಣ್ಣದ ಮತ್ತು ಸಿಂಥೆಟಿಕ್ ಬಟ್ಟೆಗಳ ಬದಲು ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹತ್ತಿ ಬಟ್ಟೆಯು ಬೆವರಿನ ಅಂಶವನ್ನು ಹೀರಿಕೊಂಡು ಗಾಳಿಯಾಡುವಂತೆ ಮಾಡುತ್ತದೆ, ಇದರಿಂದ ಚರ್ಮದ ಕಿರಿಕಿರಿ ಕಡಿಮೆಯಾಗುತ್ತದೆ.

ಆಹಾರ ಕ್ರಮದಲ್ಲಿ ಬದಲಾವಣೆ

ಬಿಸಿಲಿನಲ್ಲಿ ಅತಿಯಾದ ಎಣ್ಣೆ ಪದಾರ್ಥ ಅಥವಾ ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ. ಬದಲಿಗೆ ಸೌತೆಕಾಯಿ, ಕಲ್ಲಂಗಡಿ, ಮೊಸರು ಮತ್ತು ಸೊಪ್ಪುಗಳಂತಹ ತಂಪು ನೀಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.

ಮುಖ ಮತ್ತು ಕಣ್ಣುಗಳ ರಕ್ಷಣೆ

ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್ ಬಳಸಿ ಮತ್ತು ತಲೆಗೆ ಟೋಪಿ ಅಥವಾ ಛತ್ರಿ ಬಳಸುವುದು ಉತ್ತಮ. ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಫೇಸ್ ಪ್ಯಾಕ್‌ಗಳು ಹಚ್ಚುವುದರಿಂದ ಬಿಸಿಲಿನಿಂದಾದ ಟ್ಯಾನ್ ಕಡಿಮೆಯಾಗಿ ಮುಖಕ್ಕೆ ತಂಪು ನೀಡುತ್ತದೆ.