ಮಹಿಳೆಯರು ಸದಾ ಲವಲವಿಕೆಯಿಂದಿರಲು ಇಲ್ಲಿವೆ 5 ಸುಲಭ ಫಿಟ್‌ನೆಸ್ ಟಿಪ್ಸ್

ಮಣಿಕಂಠ ಪಾ ಹಿರೇಮಠ

ಮಹಿಳೆಯರು ಸದಾ ಲವಲವಿಕೆಯಿಂದಿರಲು ಇಲ್ಲಿವೆ 5 ಸುಲಭ ಫಿಟ್‌ನೆಸ್ ಟಿಪ್ಸ್

ಬಿಡುವಿಲ್ಲದ ಜೀವನಶೈಲಿಯಲ್ಲಿ ಮಹಿಳೆಯರ ಆರೋಗ್ಯ ಅತೀ ಮುಖ್ಯ. ಜಿಮ್‌ಗೆ ಹೋಗಲು ಸಮಯವಿಲ್ಲದಿದ್ದರೂ ಪರವಾಗಿಲ್ಲ, ದಿನಕ್ಕೆ ಕೇವಲ 20-30 ನಿಮಿಷಗಳನ್ನು ಮೀಸಲಿಟ್ಟರೆ ಸಾಕು ಸದೃಢವಾಗಿರಬಹುದು.

ಬಿರುಸಿನ ನಡಿಗೆ

ದಿನಕ್ಕೆ ಕನಿಷ್ಠ 20-30 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಕ್ಯಾಲೋರಿ ಕರಗಿಸಲು ಸಹಕಾರಿ.

ಬಾಡಿ ವೇಟ್ ವ್ಯಾಯಾಮ

ಯಾವುದೇ ಉಪಕರಣವಿಲ್ಲದೆ ಪುಶ್-ಅಪ್ಸ್, ಸ್ಕ್ವಾಟ್ಸ್ ಮತ್ತು ಲಂಜೆಸ್ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ.

ಯೋಗ ಮತ್ತು ಪ್ರಾಣಾಯಾಮ

ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ದೇಹದ ನಮ್ಯತೆ (Flexibility) ಹೆಚ್ಚಿಸಲು ಪ್ರತಿದಿನ 15 ನಿಮಿಷ ಯೋಗಾಸನಗಳನ್ನು ರೂಢಿಸಿಕೊಳ್ಳಿ.

ಸೂರ್ಯ ನಮಸ್ಕಾರ

ಇದು ಇಡೀ ದೇಹಕ್ಕೆ ನೀಡುವ ಸಂಪೂರ್ಣ ವ್ಯಾಯಾಮ. ಪ್ರತಿದಿನ 5-10 ಸುತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಆಕಾರ ಸುಂದರವಾಗುತ್ತದೆ.

ಆಹಾರ

ದಿನವಿಡೀ ಸಾಕಷ್ಟು ನೀರು ಕುಡಿಯಿರಿ ಮತ್ತು ಪ್ರೋಟೀನ್ ಯುಕ್ತ ಸಮತೋಲಿತ ಆಹಾರ ಸೇವನೆಗೆ ಆದ್ಯತೆ ನೀಡಿ.