ಹಳದಿ ಹಲ್ಲುಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಪವರ್‌ಫುಲ್ ಮನೆಮದ್ದು!
ಭಾನುಪ್ರಿಯ ಡಿ.ಕೆ
ಹಳದಿ ಹಲ್ಲುಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಪವರ್‌ಫುಲ್ ಮನೆಮದ್ದು!
ಹಳದಿ ಹಲ್ಲುಗಳ ಸಮಸ್ಯೆಯಿಂದ ಮುಕ್ತಿ ಪಡೆದು, ಮುತ್ತಿನಂತಹ ಬಿಳಿ ನಗು ನಿಮ್ಮದಾಗಿಸಿಕೊಳ್ಳಬೇಕೆ ಹಾಗಿದ್ದರೆ ಈ ಸಲಹೆಗಳನ್ನು ಪಾಲಿಸಿ.
ಉಪ್ಪು ಮತ್ತು ನಿಂಬೆ ರಸದ ಬಳಕೆ
ಉಪ್ಪು ನೈಸರ್ಗಿಕವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸುವ ಗುಣ ಹೊಂದಿದೆ ಮತ್ತು ನಿಂಬೆ ರಸವು ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಮಿಶ್ರಣವನ್ನು ಬೆರೆಸಿ ಹಲ್ಲಿನ ಮೇಲೆ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಬಾಯಿ ತೊಳೆಯಿರಿ.
ಬೇಕಿಂಗ್ ಸೋಡಾ ಮತ್ತು ನೀರು
ಸ್ವಲ್ಪ ಬೇಕಿಂಗ್ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಟೂತ್‌ಬ್ರಷ್‌ಗೆ ಹಚ್ಚಿ ಸಾಧಾರಣವಾಗಿ ಹಲ್ಲುಜ್ಜುವಂತೆ 2 ನಿಮಿಷಗಳ ಕಾಲ ಉಜ್ಜಿ. ಇದು ಹಲ್ಲಿನ ಮೇಲಿರುವ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಆಯಿಲ್ ಪುಲ್ಲಿಂಗ್
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಶುದ್ಧ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು 10-15 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ, ನಂತರ ಉಗುಳಬೇಕು.
ಬಾಳೆಹಣ್ಣಿನ ಸಿಪ್ಪೆಯ ಮಸಾಜ್
ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲುಗಳ ಮೇಲೆ 2-3 ನಿಮಿಷಗಳ ಕಾಲ ಮೃದುವಾಗಿ ಉಜ್ಜಿ. ನಂತರ ಎಂದಿನಂತೆ ಹಲ್ಲುಜ್ಜಿ ಬಾಯಿ ತೊಳೆಯಿರಿ.
ಹಣ್ಣು ಮತ್ತು ತರಕಾರಿಗಳ ಸೇವನೆ
ಸೇಬು, ಕ್ಯಾರೆಟ್ ಮತ್ತು ಸೌತೆಕಾಯಿಯಂತಹ ನಾರಿನಂಶವಿರುವ ಹಣ್ಣುಗಳನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳಲ್ಲಿ ಅಂಟಿಕೊಂಡಿರುವ ಕೊಳೆ ನೈಸರ್ಗಿಕವಾಗಿ ಸ್ವಚ್ಛವಾಗುತ್ತದೆ.