ನೀಲಿ ಸುಂದರಿ ಹೆಬಾ ಪಟೇಲ್!​

ರಮೇಶ್​ ಕುಮಾರ್​​ ಬಿ ಎಡಮೋಳೆ

ನೀಲಿ ಸುಂದರಿ ಹೆಬಾ ಪಟೇಲ್!​

ಸೂಪರ್​ ಹಿಟ್​ ಅಧ್ಯಕ್ಷ ಸಿನಿಮಾ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ತೆಲುಗು ಸುಂದರಿ ಹೆಬಾ ಪಟೇಲ್, ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಿಶೇಷ ಉಡುಗೆ

ಹೆಬಾ ಪಟೇಲ್ ಅವರು ಕಡು ನೀಲಿ ಬಣ್ಣದ ಅಸಿಮೆಟ್ರಿಕ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಕಟ್-ಔಟ್ ಬ್ಲೌಸ್, ಉದ್ದವಾದ ಟ್ರೇಲಿಂಗ್ ಡ್ರೇಪ್ ಮತ್ತು ಡ್ರೇಪ್ ಸ್ಕರ್ಟ್ ಧರಿಸಿ ಮಿಂಚಿದ್ದಾರೆ.

ಸ್ಟೈಲಿಶ್ ಲುಕ್

ಈ ಸುಂದರ ಉಡುಗೆಗೆ ತಕ್ಕಂತೆ ಡೈಮಂಡ್ ಜ್ಯುವೆಲ್ಲರಿ ಧರಿಸಿ, ಕೂದಲನ್ನು ಸ್ಲೀಕ್ ಆಗಿ ಹಿಂದೆ ಕಟ್ಟಿ ಅತ್ಯಂತ ಆಕರ್ಷಕವಾಗಿ ಹಾಗೂ ಮಾದಕವಾಗಿ ಪೋಸ್ ನೀಡಿದ್ದಾರೆ.

ಫಿಟ್‌ನೆಸ್ ಟ್ರಾನ್ಸ್‌ಫಾರ್ಮೇಷನ್

ಕಳೆದ ಕೆಲವು ತಿಂಗಳುಗಳಿಂದ ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿರುವ ಹೆಬಾ, ಈಗ ಸ್ಲಿಮ್ ಆಗಿದ್ದು, ಅವರ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಅಭಿಮಾನಿಗಳ ಮೆಚ್ಚುಗೆ

ಹೆಬಾ ಅವರ ಈ ಹೊಸ ಗ್ಲೋ-ಅಪ್ ಲುಕ್ ಮತ್ತು ವಿಶ್ವಾಸದಿಂದ ಕೂಡಿರುವ ಪೋಸ್‌ಗಳನ್ನು ನೋಡಿ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಹೆಚ್ಚಿದ ಆತ್ಮವಿಶ್ವಾಸ

ಹೆಬಾ ಅವರ ಹೊಸ ಫೋಟೋಗಳು ಕೇವಲ ಸ್ಲಿಮ್ ಲುಕ್ ಮಾತ್ರವಲ್ಲದೆ, ಅವರಲ್ಲಿ ಹೆಚ್ಚಾಗಿರುವ ಆತ್ಮವಿಶ್ವಾಸವನ್ನೂ ಎತ್ತಿ ತೋರಿಸುತ್ತಿವೆ.

ಮುಂಬೈ ಸುಂದರಿ

ಹೆಬಾ ಅವರ ಮೂಲ ಮುಂಬೈ. ಮಾಡೆಲಿಂಗ್​ ಬಳಿಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ.

ಅಧ್ಯಕ್ಷ ಯಶಸ್ವಿ

2014ರಲ್ಲಿ ಕನ್ನಡ ಚಿತ್ರ ಅಧ್ಯಕ್ಷ (ಶರಣ್ ಜೊತೆಗೆ) ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರು. ಅದೇ ವರ್ಷ ತಮಿಳು ಚಿತ್ರ ತಿರುಮನಂ ಎನುಂ ನಿಕ್ಕಾ ಮತ್ತು ತೆಲುಗು ಚಿತ್ರ ಅಲಾ ಎಲಾ ಮೂಲಕ ಬೇರೆ ಭಾಷೆಗಳಲ್ಲೂ ನಟಿಸಿದರು.

ಪ್ರಮುಖ ಸಿನಿಮಾಗಳು

2015ರ ತೆಲುಗು ಚಿತ್ರ ಕುಮಾರಿ 21F ನಲ್ಲಿ ಮೀನಾ ಕುಮಾರಿ ಪಾತ್ರದ ಮೂಲಕ ದೊಡ್ಡ ಮನ್ನಣೆ ಪಡೆದರು. ಅಲ್ಲದೆ, ಸಂತೋಷಂ ಫಿಲ್ಮ್ ಅವಾರ್ಡ್ಸ್‌ನಲ್ಲಿ ಬೆಸ್ಟ್ ಡೆಬ್ಯೂಟ್ ಆಕ್ಟ್ರೆಸ್ ಸೇರಿ ಹಲವು ಪ್ರಶಸ್ತಿಗಳನ್ನು ಗೆದ್ದರು. ನಂತರ ಎಕ್ಕಡಿಕಿ ಪೊಥಾವು ಚಿನ್ನವಾಡ, ಅಂಧಗಾಡು, ಏಂಜೆಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.